ಐಗೂರು ಗ್ರಾಮದ ಮುತ್ತಪ್ಪ ದೇವಾಲಯ

ಐಗೂರು: ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆಯ ದಿನವಾಗಿ ತಾ. ೨೨ ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಪ್ರಯುಕ್ತ ಮಂತ್ರಾಕ್ಷತೆಯನ್ನು ಐಗೂರಿನ ಸಜಿ ಭರತ್ ಮತ್ತು ತೇಜಕುಮಾರ್ ನೇತೃತ್ವದಲ್ಲಿ ಐಗೂರು ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯಕ್ರಮಕ್ಕೆ ಮುತ್ತಪ್ಪ ದೇವಾಲಯದಲ್ಲಿ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಮೋದ್, ಪ್ರಶಾಂತ್, ಟಿ.ಕೆ. ರಮೇಶ್, ಕಿರಣ, ಹರೀಶ್, ಯತೀಶ್, ರಾಧಾಕೃಷ್ಣ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸAಪಾಜೆ ಶ್ರೀ ಪಂಚಲಿAಗೇಶ್ವರ ದೇವಸ್ಥಾನ

ಸಂಪಾಜೆ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ಹಾಗೂ ಮಂದಿರ ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆಯನ್ನು ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಗ್ರಾಮದ ಉಪವಸತಿಗಳಿಗೆ ನೀಡುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ನಾ. ಸೀತಾರಾಂ (ಕರ್ನಾಟಕ ದಕ್ಷಿಣ ಪ್ರಾಂತ್ ಸಹ ಪ್ರಮುಖ್) ಹಾಗೂ ರಾಜಾರಾಮ ಕಳಗಿ (ಪ್ರಧಾನ ಕಾರ್ಯದರ್ಶಿ ಶ್ರೀ ಪಂ.ದೇ.ಜೀ. ಸಮಿತಿ) ಉಪಸ್ಥಿತರಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಿಗೆ ಮಂತ್ರಾಕ್ಷತೆ ಹಾಗೂ ಮಂದಿರ ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆಯನ್ನು ನೀಡಿ ನಂತರ ೩ ಉಪವಸತಿ, ೧೧ ಉಪಸಮಿತಿಯ ಪ್ರಮುಖರಿಗೆ ಮಂತ್ರಾಕ್ಷತೆ, ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಿ, ರಾಮ ಭಕ್ತರು ಪ್ರತೀ ಹಿಂದೂಗಳ ಮನೆ ಮನೆಗೆ ತಲುಪಿಸುವ ಬಗ್ಗೆ ಮನವರಿಕೆ ಮಾಡಿದರು. ರಮಾದೇವಿ ಕಳಗಿ ಆಹ್ವಾನಿತ ಗಣ್ಯರನ್ನು ಹಾಗೂ ಭಕ್ತಾದಿಗಳನ್ನು ಸ್ವಾಗತಿಸಿದರು. ಓ.ಆರ್. ಮಾಯಿಲಪ್ಪ ವಂದಿಸಿದರು.

ಚೆತ್ತುಕಾಯ ಶ್ರೀ ವನಶಾಸ್ತಾವು ದೇವಸ್ಥಾನ

ಕರಿಕೆ: ರಾಮ ಮಂದಿರದಲ್ಲಿ ಶ್ರೀ ರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಭಕ್ತರಿಗೆ ವಿತರಿಸಲು ಉದ್ದೇಶಿತ ಆಮಂತ್ರಣ, ರಾಮ ಮಂದಿರದ ಫೋಟೋ ಹಾಗೂ ಪವಿತ್ರ ಮಂತ್ರಾಕ್ಷತೆಯನ್ನು ಕರಿಕೆ ಗ್ರಾಮದ ವಿವಿಧ ವಾರ್ಡ್ಗಳಲ್ಲಿ ಮನೆ ಮನೆಗೆ ವಿತರಿಸುವ ಕಾರ್ಯಕ್ರಮ ನಡೆಯಿತು.

ಚೆತ್ತುಕಾಯ ಶ್ರೀ ವನಶಾಸ್ತಾವು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಗ್ರಾಮದ ನಾಲ್ಕು ವಾರ್ಡ್ಗಳಲ್ಲಿ ವಿತರಣೆ ಮಾಡಲಾಯಿತು. ತಾ. ೨೨ ರಂದು ವನಶಾಸ್ತಾವು ದೇವಸ್ಥಾನದ ಬಳಿಯ ಅಯ್ಯಪ್ಪ ಭಜನಾ ಮಂದಿರದ ಆವರಣದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಪ್ರಮುಖರಾದ ಸುಧೀರ್ ಕುಮಾರ್ ಹೊದ್ದೆಟ್ಟಿ, ಗಣೇಶ ಕುದುಪಜೆ, ಗಣೇಶ್ ಬಿ.ಎ., ಅಜಯ್ ಕಟ್ಟಕೋಡಿ, ಶಿವಪ್ಪ ಕೆ.ಎ., ನಾರಾಯಣ ಕೆ.ಎ., ಜಯಾನಂದ ಕೆ.ವಿ. ಸೇರಿದಂತೆ ಇತರ ಪ್ರಮುಖರು, ಕಾರ್ಯಕರ್ತರು, ಸ್ವಯಂ ಸೇವಕರು ಉಪಸ್ಥಿತರಿದ್ದರು.

ಐಗೂರು ಗ್ರಾಮ ಪಂಚಾಯಿತಿ

ಐಗೂರು: ಅಯೋಧ್ಯೆ ಮಂತ್ರಾಕ್ಷತೆಯನ್ನು ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡವಾರೆಯಲ್ಲಿ ವಿತರಿಸಲಾಯಿತು. ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಬಾರನ ಪ್ರಮೋದ್, ಸಜಿ ಭರತ್, ತೇಜಕುಮಾರ್, ಯತೀಶ್ ಮತ್ತು ಗ್ರಾಮಸ್ಥರು ಹಾಜರಿದ್ದರು.

ನರಿಯಂದಡ ಭಗವತಿ ದೇವಸ್ಥಾನಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು.

ತಾ. ೧ ರಿಂದ ೧೫ ರವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು, ಇದರ ಅಂಗವಾಗಿ ನರಿಯಂದಡ ಭಗವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನರಿಯಂದಡ ಬ್ಲಾಕ್ ೧ ಹಾಗೂ ಬ್ಲಾಕ್ ೨ ರಲ್ಲಿ ಮಂತ್ರಾಕ್ಷತೆಯನ್ನು ವಿತರಿಸಲಾಯಿತು. ಈ ಸಂದರ್ಭ ಭಗವತಿ ದೇವಸ್ಥಾನದ ಅಧ್ಯಕ್ಷ ಬಟ್ಟಿಯಂಡ ಜಯರಾಂ, ರಾಮಭಕ್ತಿ ಸಮಿತಿಯ ಸದಸ್ಯರು ಹಾಗೂ ಪ್ರಮುಖರಾದ ಕುಕ್ಕೆಮನೆ ನಾರಾಯಣ ಮೂರ್ತಿ, ಪೊಕ್ಕುಳಂಡ್ರ ದನೋಜ್, ಮಕ್ಕಿಮನೆ ಸುಧೀರ್, ಚೆಯ್ಯಂಡ ಲವ ಅಪ್ಪಚ್ಚು, ಮುಂಡಿಯೋಳAಡ ದಿನು ಚಂಗಪ್ಪ, ಬೆಳಿಯಂಡ್ರ ಹರಿಪ್ರಸಾದ್, ಶರಣು, ರಾಜರಾಂ, ಬಟ್ಟಿಯಂಡ ಅಶೋಕ್, ಸತೀಶ್, ಸಂಪತ್ ಮತಿತ್ತರರು ಉಪಸ್ಥಿತರಿದ್ದರು.