ಮಡಿಕೇರಿ: ಮಡಿಕೇರಿಯ ಮಹದೇವಪೇಟೆ ಸುತ್ತಮುತ್ತ ಮನೆಗಳಿಗೆ ಅಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ವಾರ್ಡ್ ಸದಸ್ಯರು ಹಾಗೂ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್ ಹಾಗೂ ಹಿರಿಯರ ಸಮ್ಮುಖದಲ್ಲಿ ಹಂಚಿದರು.

ಸೂರ್ಲಬ್ಬಿ ಶ್ರೀ ಸುಬ್ರಹ್ಮಣ್ಯ-ಶ್ರೀ ಕಾಳತಮ್ಮೆ ದೇವಾಲಯ

ಸೂರ್ಲಬ್ಬಿ: ಸೂರ್ಲಬ್ಬಿಯ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕಾಳತಮ್ಮೆ ದೇವಾಲಯದ ಅರ್ಚಕ ಸುಬ್ರಹ್ಮಣ್ಯ ಭಟ್ ಅವರಿಗೆ ಅಯೋಧ್ಯೆ ಮಂತ್ರಾಕ್ಷತೆಯೊAದಿಗೆ ಶ್ರೀ ರಾಮ ಮಂದಿರ ಭಾವಚಿತ್ರ ನೀಡಲಾಯಿತು. ಮಾದಾಪುರ ಶ್ರೀ ಸಿದ್ಧಿ ಬುದ್ಧಿ ಮಹಾ ಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾದಾಪುರ ಗರ್ವಾಲೆ ಹೋಬಳಿಯ ಮತಗಟ್ಟೆಗಳಿಗೆ ಮಂತ್ರಾಕ್ಷತೆ ಕೊಂಡೊಯ್ಯಲಾಯಿತು.

ಊರುತಕ್ಕ ಉದಿಯಂಡ ಸುರೇಶ್ ಪೊನ್ನಪ್ಪ, ಹಮ್ಮಿಯಾಲ ಶ್ರೀ ಅಯ್ಯಪ್ಪ ದೇವಸ್ಥಾನದ ಮುಕ್ಕಾಟಿ ಚೋಳಚಂಡ ಸೋಮಯ್ಯ ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು. ಚಿ.ನಾ. ಸೋಮೇಶ್ ಶ್ರೀ ರಾಮ ಜನ್ಮ ಭೂಮಿ ಮಂತ್ರಾಕ್ಷತೆ ಅಭಿಯಾನದ ಮಹತ್ವ ಮತ್ತು ತಾ. ೨೨ ರಂದು ವಿಶೇಷ ಪೂಜೆ ಹಾಗೂ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ದೇವರ ಪ್ರತಿಷ್ಠಾಪನೆ ಕೈಂಕರ್ಯದ ಕುರಿತು ಮಾಹಿತಿ ನೀಡಿದರು.

ಅರಪಟ್ಟು ಭಗವತಿ ದೇವಸ್ಥಾನ

ಕಡಂಗ: ಸ್ಥಳೀಯ ಅರಪಟ್ಟು ಗ್ರಾಮದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು.

ತಾ. ೧ ರಿಂದ ೧೫ ರವರೆಗೆ ಮಂತ್ರಾಕ್ಷತೆ ವಿತರಣಾ ಅಭಿಯಾನ ವಿದ್ದು, ಇದರ ಅಂಗವಾಗಿ ಅರಪಟ್ಟು ಭಗವತಿ ದೇವಸ್ಥಾನ ದಲ್ಲಿ ಮಂತ್ರಾಕ್ಷತೆ ಯನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಲಾಯಿತು.

ಮಂತ್ರಾಕ್ಷತೆಯನ್ನು ಊರಿನ ಪ್ರತಿ ಮನೆಗೂ ವಿತರಿಸಲಾಯಿತು. ಈ ಸಂದರ್ಭ ನೆರಪಂಡ ಆರ್ಷ ಮಂದಣ್ಣ, ನೆರಪಂಡ ದೀನಾ, ಕೋಡಿರ ಪ್ರಸನ್ನ, ಪಾಂಡAಡ ಕಿಶನ್, ಸತೀಶ್ ಹಾಜರಿದ್ದರು.ಪೊನ್ನಂಪೇಟೆ: ಬಿರುನಾಣಿಯ ಪುತ್ತು ಭಗವತಿ ದೇವಾಲಯದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಪೂಜೆ ನಡೆಯಿತು. ಪುತ್ತು ಭಗವತಿ ದೇವಾಲಯದಲ್ಲಿ ಇರಿಸಲಾದ ಅಕ್ಷತೆ ಕಲಶಕ್ಕೆ ಅರ್ಚಕ ದೀಕ್ಷಿತ್ ಅವರು ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭ ಬಿಜೆಪಿಯ ಸ್ಥಳೀಯ ಮುಖಂಡರಾದ ರಾಯ್ ಸೋಮಣ್ಣ, ಕಳಕಂಡ ಅರಸು, ಗ್ರಾಮ ಪಂಚಾಯಿತಿ ಸದಸ್ಯೆ ಸರಸ್ವತಿ, ದೇವಾಲಯದ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ ಹಾಗೂ ಸಂಘ ಪರಿವಾರದ ಪ್ರಮುಖರು ಹಾಜರಿದ್ದರು.ಚೆಯ್ಯಂಡಾಣೆ: ಕರಡ ಗ್ರಾಮದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು. ಜನವರಿ ೧ ರಿಂದ ೧೫ ರವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು ಇದರ ಅಂಗವಾಗಿ ಕರಡ ಗ್ರಾಮದಲ್ಲಿ ವಿತರಣೆ ನಡೆಯಿತು. ಈ ಸಂದರ್ಭ ಜಗದೀಶ್ ಭೀಮಯ್ಯ, ಸೋಮಯ್ಯ, ಸುಷ ಮೊಣ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯ ವಿಲಿನ್, ಸುಧಾ, ದೇವಯ್ಯ, ಅಚ್ಚಯ್ಯ ಹಾಜರಿದ್ದರು.ವೀರಾಜಪೇಟೆ: ಕೆದಮುಳ್ಳೂರುವಿನ ಶ್ರೀ ಮಹಾದೇವರ ದೇವಾಲಯದಲ್ಲಿ ಅಯೋಧ್ಯೆಯ ಶ್ರೀ ರಾಮನ ಅಕ್ಷತೆಯನ್ನು ನಾಡಿನ ಜನತೆಗೆ ವಿತರಿಸುವ ಕಾರ್ಯಕ್ರಮದ ಅನ್ವಯ ಈ ಭಾಗದ ಹಿಂದೂ ಸಂಘಟನೆಯ ಪ್ರಮುಖರು ಕಳೆದ ಒಂದು ವಾರಗಳ ಕಾಲ ದೇವಾಲಯದಲ್ಲಿ ಅಕ್ಷತೆ ಹಾಗೂ ಕಲಶವನ್ನು ಇಟ್ಟು ಮಹಾದೇಶ್ವರನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಿದರು.

ನಂತರ ಗ್ರಾಮದ ಎಲ್ಲ ಮನೆಗಳಿಗೆ ಅಕ್ಷತೆಯನ್ನು ವಿತರಿಸುವ ವ್ಯವಸ್ಥೆಯನ್ನು ಸಜ್ಜುಗೊಳಿಸಿದರು. ಸಂಘ ಪರಿವಾರದ ಪ್ರಮುಖರು ಹಾಗೂ ಬಿಜೆಪಿಯ ಸ್ಥಳೀಯ ಪ್ರಮುಖರು, ಮಹಾದೇವ ದೇವಾಲಯದ ಅರ್ಚಕ ರಾಧಕೃಷ್ಣ ಉಪಸ್ಥಿತರಿದ್ದರು.