ವೀರಾಜಪೇಟೆ, ಜ. ೩: ವೀರಾಜಪೇಟೆ ನಗರದ ಸ್ನೇಹಿತರ ಬಳಗದಿಂದ ಆಟೋಕ್ರಾಸ್‌ನಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ವೀರಾಜಪೇಟೆ ವಿಜಯನಗರದ ನಿವಾಸಿ ಮೊಹಮ್ಮದ್ ಕಬೀರ್ ಹಾಗೂ ಅವರ ಪುತ್ರ ಅಂತ ರ‍್ರಾಷ್ಟಿçÃಯ ಮಟ್ಟದ ಏಷ್ಯಾ ಪೆಸಿಫಿಕ್ ಕಾರ್ ರ‍್ಯಾಲಿ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಸುಹೇಮ್ ಕಬೀರ್, ಮೀನುಪೇಟೆ ನಿವಾಸಿ ಮುಂಡಚಾಡಿರ ಪೂವಣ್ಣ ಅವರ ಪುತ್ರ ಕೀರ್ತನ್ ಕುಟ್ಟಪ್ಪ, ಉದ್ಯಮಿ ಶಾಫಿ ಅಹಮ್ಮದ್ ಮತ್ತು ಅಂರ‍್ರಾಷ್ಟಿçÃಯ ರಗ್ಬಿ ಪಟು ಮಾದಂಡ ಪಿ. ತಿಮ್ಮಯ್ಯ ಅವರುಗಳಿಗೆ ಸ್ನೇಹಿತರ ಬಳಗದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪುರಸಭೆಯ ಸದಸ್ಯರಾದ ಮೊಹಮ್ಮದ್ ರಾಫಿ ಅವರು ಕೊಡಗು ಜಿಲ್ಲೆಯು ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಗಾಲ್ಫ್, ರಗ್ಬಿ, ಟೆನ್ನಿಸ್, ಆಟೋ ಕ್ರಾಸ್ ನಂತಹ ಕ್ರೀಡೆಗಳನ್ನು ಅರಿಯಲು ಮತ್ತು ಕಲಿಯಲು ಗರಿಷ್ಠ ಮಟ್ಟದಲ್ಲಿ ಧನ ವ್ಯಯವಾಗುತ್ತದೆ. ಆದರೂ ಮಕ್ಕಳ ಸಾಧÀನೆಗೆ ಅಡ್ಡಿಯಾಗದೆ ಪೋಷಕರು ಪ್ರೋತ್ಸಾಹ ನೀಡುತ್ತಿರುವುದು ಸಂತೋಷದಾಯಕ ಬೆಳವಣಿಗೆಯಾಗಿದೆ ಎಂದರು.

ಪುರಸಭೆಯ ಸದಸ್ಯರಾದ ಎಸ್.ಹೆಚ್. ಮತೀನ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಕೀಂ ರೊಡ್ರಿಗಸ್, ಕಾಂಗ್ರೆಸ್ ಮುಖಂಡ ರಾದ ಎಜಾಜ್ ಅಹಮ್ಮದ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪುರಸಭೆಯ ಸದಸ್ಯರಾದ ಅಬ್ದುಲ್ ಜಲೀಲ್, ಉದ್ಯಮಿಗಳಾದ ಬಿ.ಸಿ. ರಶೀಧ್, ಆತೀಫ್ ಮನ್ನಾ, ನಗರ ಠಾಣಾಧಿಕಾರಿಗಳಾದ ರವೀಂದ್ರ, ಸ್ನೇಹಿತರ ಬಳಗದ ಫಾರೋಖ್ ಅಬ್ದುಲ್ಲಾ, ನದೀಮ್ ಶರೀಫ್ ಮತ್ತು ಸಾರ್ವಜನಿಕರು ಸನ್ಮಾನ ಕಾರ್ಯಕ್ರಮದಲ್ಲಿ ಹಾಜರಿದ್ದರು.