ಮಡಿಕೇರಿ, ಜ. ೩: ಬಳ್ಳಾರಿಯಲ್ಲಿ ತಾ. ೬ ಮತ್ತು ೭ ರಂದು ರಾಜ್ಯಮಟ್ಟದ ಯುವ ಜನೋತ್ಸವ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಸೋಮವಾರಪೇಟೆ ಹಾಗೂ ಮಾನವತಾ ಯುವಕ ಸಂಘ ಬೆಟ್ಟದಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿರುತ್ತಾರೆ. ಭಾಗವಹಿಸುವ ಸ್ಪರ್ಧಿಗಳು ತಾ. ೬ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೩ ರವರೆಗೆ ಬಳ್ಳಾರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಆಧಾರ್ ಕಾರ್ಡ್ ಹಾಗೂ ಎಸ್.ಎಸ್..ಎಲ್.ಸಿ ಅಂಕಪಟ್ಟಿ, ಲಘು ಹಾಸಿಗೆ, ಹೊದಿಕೆಯೊಂದಿಗೆ ತೆರಳಲು ಕೋರಿದೆ.