ಗೋಣಿಕೊಪ್ಪಲು, ಜ. ೩: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಬಾರ್ಡ್ ಪ್ರಾಯೋಜಕತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಗೋದಾಮು ಹಾಗೂ ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟನೆಯನ್ನು ಶಾಸಕ ಎ.ಎಸ್. ಪೊನ್ನಣ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸಹಕಾರ ಸಂಘಗಳಿಗೆ ಕೊಡಗು ಜಿಲ್ಲೆ ಮಾದರಿಯಾಗಿದೆ. ಕೊಡಗು ಡಿಸಿಸಿ ಬ್ಯಾಂಕ್ ರಾಜ್ಯಮಟ್ಟದಲ್ಲಿ ಉನ್ನತ ಹೆಸರನ್ನು ಗಳಿಸಿರುವುದು ಕೊಡಗಿನ ಘನತೆ ಹೆಚ್ಚಾಗಲು ಕಾರಣವಾಗಿದೆ. ಕೊಡಗಿನ ಸಹಕಾರ ಸಂಘಗಳಲ್ಲಿ ಶೇ.೯೦ಕ್ಕೂ ಅಧಿಕ ಸಂಘಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಅಲ್ಲಲ್ಲಿ ಕೆಲವು ಸಂಘಗಳು ಮಾತ್ರ ಅವ್ಯವಹಾರಗಳ ಆರೋಪಗಳನ್ನು ಎದುರಿಸುತ್ತಿವೆ. ಅಂತಹ ಪ್ರಕರಣಗಳು ಮರುಕಳಿಸದಂತೆ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕು. ಸಹಕಾರ ಸಂಘಗಳಲ್ಲಿ ಅಧಿಕಾರಿಗಳ ಹಸ್ತಕ್ಷೇಪ ಸಲ್ಲದು. ಸಹಕಾರ ಸಂಘಗಳ ಮುನ್ನಡೆಗೆ ಈ ಹಿಂದೆ ಹಿರಿಯ ಸಹಕಾರಿಗಳು ನೀಡಿದ ಕೊಡುಗೆ ಅಪಾರವಾಗಿದೆ. ಇದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಜನರಿಂದಲೇ ಜನರಿಗೋಸ್ಕರ ಸ್ಥಾಪನೆಯಾದ ಸಹಕಾರ ಸಂಸ್ಥೆಗಳು ಇಂದು ಕೊಡಗಿನಲ್ಲಿ ಉತ್ತಮವಾಗಿ ಮುನ್ನಡೆಯುತ್ತಿವೆ. ಇದರ ಸಾಲಿಗೆ ಪೊನ್ನಂಪೇಟೆ ಸಹಕಾರ ಸಂಘವು ಸೇರ್ಪಡೆಗೊಂಡಿದೆ. ದೇಶದ ಉದ್ದಗಲಕ್ಕೂ ಸಹಕಾರಿ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ., ರೈತರಿಗೆ ನೇರವಾಗಿ ಹಣವನ್ನು ನೀಡುವ ಸಂಸ್ಥೆ ಸಹಕಾರಿ ಸಂಸ್ಥೆಯಾಗಿದೆ. ಸ್ಥಳೀಯರೇ ಸಂಸ್ಥೆಯನ್ನು ಮುನ್ನಡೆಸುವುದರಿಂದ ಸ್ಥಳೀಯರ ಬಗೆ ಆಡಳಿತ ಮಂಡಳಿಗೆ ಅರಿವಿರುತ್ತದೆ. ಇದರಿಂದ ಸಂಸ್ಥೆಯಿAದ ನೀಡುವ ಸಾಲ ಯೋಜನೆಗಳು ಸದ್ಬಳಕೆಯಾಗುತ್ತಿದೆ ಎಂದರು.

ಪೊನ್ನAಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚೀರಂಡ ಎಸ್. ಕಂದಾ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಗೋದಾಮು ಉದ್ಘಾಟಿಸಿ ಮಾತನಾಡಿ ಡಿಸಿಸಿ ಬ್ಯಾಂಕಿನಲ್ಲಿ ರೈತರಿಗೆ, ಸದಸ್ಯರಿಗೆ ಸಾಲದ ಪ್ರಯೋಜನ ಪಡೆಯಲು ಸಾಕಷ್ಟು ಅನುದಾನ ಲಭ್ಯವಿದ್ದರೂ ಇದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಸಹಕಾರ ಸಂಘಗಳು ನಿರ್ಲಕ್ಷö್ಯ ವಹಿಸಿವೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಜಿಲ್ಲೆಯಲ್ಲಿ ೧೨ ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಇದರಲ್ಲಿ ಕೇವಲ ೩ ಸಾವಿರ ರೈತರಿಗೆ ಮಾತ್ರ ಸಾಲ ಮನ್ನಾ ಸೌಲಭ್ಯ ದೊರೆತಿದೆ. ಸಂಘದ ಜವಾಬ್ದಾರಿಯುತ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷö್ಯ ವಹಿಸಿದ್ದಾರೆ. ಪ್ರಶ್ನಿಸಿದಲ್ಲಿ ಸಾಲದ ಬೇಡಿಕೆ ಇಲ್ಲ ಎಂಬ ಉತ್ತರ ಅಧಿಕಾರಿಗಳಿಂದ ವ್ಯಕ್ತವಾಗುತ್ತಿದೆ. ಶೂನ್ಯ ಬಡ್ಡಿ ದರದಲ್ಲಿ ಯಾವುದೇ ರೈತ ಸಾಲ ಬೇಡ ಎಂದು ನಿರಾಕರಿಸಿರುವ ಉದಾಹರಣೆಗಳೇ ಇಲ್ಲ ಎಂದರು.

ಸಂಘದ ಸದಸ್ಯರ ಕಷ್ಟಗಳಿಗೆ ಭಾಗಿಯಾಗುವುಎ ಸಂಘದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಹಕಾರ ಸಂಘದಲ್ಲಿ ಜಾಮೀನು ಸಾಲ ನೀಡುವ ಮೂಲಕ ಸಂಘದ ಸದಸ್ಯನ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿದೆ. ಕನಿಷ್ಠ ೧೦ ಲಕ್ಷದವರೆಗೂ ಸಾಲ ಮಂಜೂರು ಮಾಡಲು ಆದಷ್ಟು ಬೇಗನೇ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚೀರಂಡ ಕಂದಾ ಸುಬ್ಬಯ್ಯ ಸಂಘವು ಬೆಳೆದು ಬಂದ ಹಿನ್ನಲೆಯನ್ನು ವಿವರಿಸಿದರು. ಹಿರಿಯ ಸಹಕಾರಿ ಮೂಕಳೇರ ಕುಶಾಲಪ್ಪ, ಚಿರಿಯಪಂಡ ಕೆ.ಉತ್ತಪ್ಪ ಮಾತನಾಡಿದರು.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಸದಸ್ಯರಾದ ಹೊಟ್ಟೆಂಗಡ ಎಂ. ರಮೇಶ್, ಕುಂಞAಗಡ ಅರುಣ್ ಭೀಮಯ್ಯ, ಪಟ್ರಪಂಡ ರಘು ನಾಣಯ್ಯ, ಸಹಕಾರ ಸಂಘಗಳ ನಿರ್ದೇಶಕರುಗಳಾದ ಎಂ.ಎಸ್. ಕೃಷ್ಣ ಪ್ರಸಾದ್, ಎಂ.ಇ. ಮೋಹನ್, ಹಿರಿಯ ಸಹಕಾರಿ ಪುತ್ತಾಮನೆ ಎಂ.ಶ್ರೀನಿವಾಸ್, ಎಪಿಸಿಎಂಎಸ್ ಅಧ್ಯಕ್ಷ ಮುದ್ದಿಯಡ ಡಿ. ಗಣಪತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬೊಟ್ಟಂಗಡ ದಶಮಿ, ಇಗ್ಗುತ್ತಪ್ಪ ಸೌಹಾರ್ದ ಬ್ಯಾಂಕಿನ ಅರಮಣಮಾಡ ಎಸ್.ಬೋಪಯ್ಯ, ಮಹಿಳಾ ಸಮಾಜದ ಉಪಾಧ್ಯಕ್ಷೆ, ಗ್ರಾಮ ಪಂಚಾಯಿತಿ ಸದಸ್ಯೆ ಕೋಳೆರ ಭಾರತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.