ಕುಶಾಲನಗರ, ಜ. ೩: ಕನ್ನಡಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಮಾನವ ಕುವೆಂಪು ಅವರ ಜನ್ಮೋತ್ಸವ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ.ಎನ್.ವಸಂತಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಾನು ಕುವೆಂಪು ಅವರ ವಿದ್ಯಾರ್ಥಿ ಯಾಗಿದ್ದು ಅವರನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಮೈಸೂರಿನ ಮಾನಸ ಗಂಗೋತ್ರಿ ಸಂಪೂರ್ಣ ಆಂಗ್ಲಮಯವಾಗಿ ಕನ್ನಡಕ್ಕೆ ಮಾನ್ಯತೆ ಕಡಿಮೆಯಿದ್ದ ಸಂದರ್ಭ ಕುವೆಂಪು ಅವರು ಕುಲಪತಿಗಳಾದ ಮೇಲೆ ವಿವಿ ಸಂಪೂರ್ಣ ಕನ್ನಡಮಯವಾಗಿದ್ದು ನೇರವಾಗಿ ಕಂಡಿದ್ದೇನೆ. ಕುವೆಂಪು ಅವರು ಸರಳ ವ್ಯಕ್ತಿತ್ವದ ಮೇರು ಪರ್ವತ ಎಂದು ಬಣ್ಣಿಸಿದರು.

ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಉದ್ಯಮಿ ಎಂ.ಕೆ. ದಿನೇಶ್, ಕುವೆಂಪು ಕರ್ನಾಟಕದ ಆಸ್ತಿ. ತನ್ನ ಸಾಹಿತ್ಯ ಜ್ಞಾನದ ಮೂಲಕ ಕರ್ನಾಟಕದ ಹಿರಿಮೆಯನ್ನು ವಿಶ್ವಮಟ್ಟಕ್ಕೆ ಏರಿಸಿದ ಕುವೆಂಪು ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಕೊಡಗು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಕನ್ನಡ ಸ್ನೇಹಸಿರಿ ಬಳಗದ ಅಧ್ಯಕ್ಷರೂ ಆಗಿರುವ ಬಿ.ಎಸ್. ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಜೀವನ ದಿಂದಲೇ ಶಿಕ್ಷಣದೊಂದಿಗೆ ಕಲೆ, ಸಾಹಿತ್ಯ, ಸಂಗೀತದAತಹ ಹವ್ಯಾಸಗಳನ್ನು ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಲು ಸಾಧ್ಯ ಎಂದರು. ಕೊಡಗು ಜಿಲ್ಲಾ ಸರಕಾರಿ ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್‌ವಾಸ್ ಮಾತನಾಡಿದರು. ಸರಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು ಪ್ರಥಮ ಬಹುಮಾನ ಪಡೆಯಿತು, ಕುಶಾಲನಗರ ಸರಕಾರಿ ಕಾಲೇಜು ದ್ವಿತೀಯ, ಶಿರಂಗಾಲ ಕಾಲೇಜು ತೃತೀಯ ಬಹುಮಾನ ಪಡೆದು ಕ್ರಮವಾಗಿ ೫೦೦೦, ೩೦೦೦, ೨೦೦೦ ರೂ. ನಗದು ಹಾಗೂ ಪಾರಿತೋಷಕ, ಪ್ರಶಸ್ತಿ ಪತ್ರ ಪಡೆದುಕೊಂಡಿತು. ಸುಂಟಿಕೊಪ್ಪ, ಕೂಡಿಗೆ, ಶಿರಂಗಾಲ ಸೇರಿದಂತೆ ಒಟ್ಟು ೬ ಕಾಲೇಜುಗಳ ೬೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಈ ಸಂದರ್ಭ ಉದ್ಯಮಿ ನಾಗೇಗೌಡ, ಉಪನ್ಯಾಸಕ ರಾದ ಹೇಮಲತಾ, ನಾಗೇಂದ್ರ, ಸೋನಿಯ ಮತ್ತಿತರರು ಇದ್ದರು.