*ಗೋಣಿಕೊಪ್ಪ, ಜ. ೩: ಕೊಡಗಿನ ಸಂಗೀತ ಕ್ಷೇತ್ರದ ಹಿರಿಯ ಕಲಾವಿದ ಕೀಬೋರ್ಡ್ ವಾದಕ, ರಂಗಭೂಮಿ ಕ್ಷೇತ್ರದಲ್ಲಿ ಸಂಗೀತ ಸಂಯೋಜಿಸಿ ಸೇವೆ ಸಲ್ಲಿಸುತ್ತಿದ್ದ ವಿ.ಟಿ ಶ್ರೀನಿವಾಸ್ (೬೨)ಬುಧವಾರ ದೈವಾಧೀನರಾದರು.

ಬುಧವಾರ ಬೆಳಿಗ್ಗೆ ೫ ಗಂಟೆಗೆ ಹೃದಯಾಘಾತದಿಂದ ಶ್ರೀನಿವಾಸ್ ಮೃತಪಟ್ಟರು. ಗೋಣಿಕೊಪ್ಪದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಕಳೆದ ೪೦ ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವರ ಸಂಯೋಜನೆ, ಕೀಬೋರ್ಡ್ ವಾದನದ ಮೂಲಕ ಗಮನ ಸೆಳೆದಿದ್ದರು. ಗೋಣಿಕೊಪ್ಪದ ಒಂದನೇ ವಿಭಾಗ ನಿವಾಸಿ ದಿವಂಗತ ವಕ್ಕಲಿಗರ ವಿ ತಿಮ್ಮಯ್ಯ ರವರ ಜೇಷ್ಠ ಪುತ್ರ ಶ್ರೀನಿವಾಸ ನೃತ್ಯ ಶಾಲೆಯ ಸಂಸ್ಥಾಪಕರು, ಸಂಗೀತ ಕಲಾವಿದರಾಗಿದ್ದು, ಕೊಡಗಿನ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು.

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ನಡೆಯುವ ಹೆಚ್ಚಿನ ಸಾಂಸ್ಕöÈತಿಕ ಕಾರ್ಯಕ್ರಮಗಳಲ್ಲಿ ಇವರದೇ ಕೀಬೋರ್ಡ್ ಮತ್ತು ಹಾರ್ಮೋನಿಯಂ ಇರುತ್ತಿತ್ತು.

ಕೊಡಗಿನ ಪ್ರತಿಷ್ಠಿತ ರಂಗಸAಸ್ಥೆ "ಸೃಷ್ಟಿ ಕೊಡಗು ರಂಗ ಮತ್ತು ‘‘ರಂಗಭೂಮಿ ಪ್ರತಿಷ್ಠಾನ ಟ್ರಸ್ಟ್’’ನಲ್ಲಿ ಸಂಗೀತ

ನಿರ್ದೇಶಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ ಇವರು ಶಾಲಾ ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯಾಭ್ಯಾಸವನ್ನು ನೀಡುತ್ತಿದ್ದರು.

೪೦ ವರ್ಷಗಳ ಇವರ ಸುದೀರ್ಘ ಸೇವೆಗಾಗಿ "ರಂಗಭೂಮಿ ಪ್ರತಿಷ್ಠಾನ ಪ್ರಶಸ್ತಿ" ಸೇರಿದಂತೆ, ಹಲವಾರು ಪ್ರಶಸ್ತಿಗಳು ಸನ್ಮಾನಗಳಿಂದ ಗೌರವಿತರಾಗಿದ್ದರು.

ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಜಿಲ್ಲಾ, ತಾಲೂಕು ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಜಾನಪದ ಪರಿಷತ್, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವಾರು ಸಂಘ - ಸಂಸ್ಥೆಗಳು ಮತ್ತು ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ‘ಶಕ್ತಿ’ ಸಂಪಾದಕ ಚಿದ್ವಿಲಾಸ್ ಸೇರಿದಂತೆ ವೈದ್ಯರು, ಸಂಗೀತಗಾರರು, ಕಲಾವಿದರು, ಕವಿಗಳು ಇವರ ಅಗಲುವಿಕೆಗೆ ಕಂಬನಿ ಮಿಡಿದು ಅಂತಿಮ ದರ್ಶನ ಪಡೆದರು.