ಮಡಿಕೇರಿ, ಜ. ೩: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ೨೦೨೩ನೇ ಸಾಲಿನಲ್ಲಿ ವಿತರಿಸಿರುವ ವಿಶೇಷಚೇತನರ ಬಸ್ ಪಾಸುಗಳನ್ನು ಫೆಬ್ರವರಿ ೨೮ರವರೆಗೆ ಮಾನ್ಯಮಾಡಲಾಗಿದೆ.
ಪ್ರಸ್ತುತ ಸಾಲಿನಲ್ಲಿ ವಿಶೇಷಚೇತನರ ಪಾಸುದಾರರ ನವೀಕರಣ/ಹೊಸ ಪಾಸು ಪಡೆಯುವ ಫಲಾನುಭವಿಗಳೆಲ್ಲರೂ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ ಮುಖಾಂತರವೇ ಸಲ್ಲಿಸುವುದು ಕಡ್ಡಾಯವಾಗಿದೆ. ಸೇವಾಸಿಂಧು ಪೋರ್ಟಲ್ hಣಣಠಿs://sevಚಿsiಟಿಜuseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ/ ನಲ್ಲಿ ಅರ್ಜಿಯನ್ನು ಸಲ್ಲಿಸುವಾಗ ವಿಶೇಷಚೇತನರು ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್ಪೋರ್ಟ್ ಸೈಜಿನ ಫೋಟೊ ಹಾಗೂ ಯು.ಡಿ.ಐ.ಡಿ./ಗುರುತಿನ ಚೀಟಿಯನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು. ಆಯಾ ತಾಲೂಕಿನ ಘಟಕದಲ್ಲಿ ಪಾಸುಗಳನ್ನು ಪಡೆಯಬೇಕು. ಹೊಸದಾಗಿ ಪಾಸ್ ಪಡೆಯುವವರು ವಿಭಾಗೀಯ ಕಚೇರಿ ಪುತ್ತೂರಿನಲ್ಲಿ ಪಾಸ್ ಪಡೆದುಕೊಳ್ಳಬೇಕು ಎಂದು ಕ.ರಾ.ರ.ಸಾ.ನಿಗಮ, ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿ ನೀಡಿದ್ದಾರೆ.