ವಿದ್ಯಾರ್ಥಿಗಳಿಗೆ ಡ್ಯಾನ್ಸ್ ಮೇಳ ಆಯೋಜನೆ
ಸುಂಟಿಕೊಪ್ಪ, ಜ. ೩ : ಸುಂಟಿಕೊಪ್ಪ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಬೆಳ್ಳಿ ಮಹೋತ್ಸವ ಹಾಗೂ ಗಣರಾಜ್ಯೋತ್ಸವದ ಪ್ರಯುಕ್ತ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸುಂಟಿಕೊಪ್ಪ ಆಟೋ ಚಾಲಕರ ಅಧ್ಯಕ್ಷ ಎ.ಎಂ.ಶರೀಫ್ ತಿಳಿಸಿದ್ದಾರೆ.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಂಟಿಕೊಪ್ಪ ಆಟೋಚಾಲಕರ ಸಂಘವು ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮ ನಡೆಸುತ್ತಿದೆ.
ತಾ. ೨೬ ರಂದು ಡ್ಯಾನ್ಸ್ ಮೇಳ ಸ್ಪರ್ಧೆಯು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿಭಾಗ ಗ್ರೂಫ್ ಡ್ಯಾನ್ಸ್, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ವಿಭಾಗದ ಗ್ರೂಪ್ ಡ್ಯಾನ್ಸ್, ಸಾರ್ವಜನಿಕರ ವಿಭಾಗದ ಗ್ರೂಪ್ ಡ್ಯಾನ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಬAಧಿಸಿದ ಶಾಲೆಯಿಂದ ಅನುಮತಿ ಪತ್ರ ಮತ್ತು ಗುರುತಿನ ಚೀಟಿ ಹೊಂದಿರತಕ್ಕದ್ದು. ತಂಡದ ವ್ಯವಸ್ಥಾಪಕರ ಹೆಸರನ್ನು ನೊಂದಾಯಿಸುವAತೆ ಶರೀಫ್ ಅವರು ಮಾಹಿತಿ ನೀಡಿದ್ದಾರೆ. ಒಂದು ನೃತ್ಯ ಸ್ಪರ್ಧೆಯಲ್ಲಿ ೬ ರಿಂದ ೧೨ ಮಂದಿ ಭಾಗವಹಿಸಲು ಅವಕಾಶವಿದೆ. ೬ ಕ್ಕಿಂತ ಕಡಿಮೆ ೧೨ಕ್ಕಿಂತ ಜಾಸ್ತಿ ಸದಸ್ಯರಿದ್ದಲ್ಲಿ ಆ ತಂಡದ ಅವಕಾಶವನ್ನು ತಿರಸ್ಕರಿಸಲಾಗುವುದು. ಒಂದು ನೃತ್ಯಕ್ಕೆ ೫ ರಿಂದ ೬ ನಿಮೀಷ ಕಾಲಾವಕಾಶ ಇರುತ್ತದೆ. ಪ್ರವೇಶ ಪತ್ರ ಕಳುಹಿಸಲು ತಾ. ೧೦ ರಿಂದ ೨೦ ರ ೫ ಸಂಜೆವರೆಗೆ ಅವಕಾಶವಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ತಂಡ, ಸಂಘದ ಕಾರ್ಯದರ್ಶಿ ಸಚಿನ್ ಸಿ.ಎ. ಮೊಬೈಲ್ ಸಂಖ್ಯೆ ೯೪೪೯೩೪೯೯೧೮ ಅವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳುವಂತೆ ಎ.ಎಂ.ಶರೀಫ್ ತಿಳಿಸಿದ್ದಾರೆ.