ಸೋಮವಾರಪೇಟೆ, ಜ. ೨: ಗೊಂದಲದ ಗೂಡಾಗಿ ಹಲವಷ್ಟು ಬೆಳವಣಿಗೆಗಳ ನಂತರ ತಾ. ೩ರಂದು (ಇಂದು) ನಿಗದಿಯಾಗಿದ್ದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೬೦ ಅಂಗಡಿ ಮಳಿಗೆಗಳ ಟೆಂಡರ್ ಪ್ರಕ್ರಿಯೆಗೆ ಕೊನೆ ಕ್ಷಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷರು-ಉಪಾಧ್ಯಕ್ಷರ ಸ್ಥಾನ ಖಾಲಿಯಾಗಿ ೭ ತಿಂಗಳು

ಕಳೆದಿದ್ದು, ಸರ್ಕಾರ ತಾಲೂಕು ತಹಶೀಲ್ದಾರ್‌ರನ್ನು ಆಡಳಿತಾಧಿಕಾರಿ ಯಾಗಿ ನೇಮಿಸಿದೆ. ಇವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಂಗಡಿ ಮಳಿಗೆಗಳ ಹರಾಜು ವಿಷಯ ಚರ್ಚೆಗೆ ಬಂದು ೩ ತಿಂಗಳು ಕಳೆದರೂ ಈವರೆಗೆ ತಾರ್ಕಿಕ ಅಂತ್ಯ ಕಂಡಿಲ್ಲ. ಕಳೆದ ಡಿಸೆಂಬರ್ ೩೦ ರಂದು ಟೆಂಡರ್‌ನ್ನು ಶೀಘ್ರವಾಗಿ ನಡೆಸ ಬೇಕೆಂದು ಆಗ್ರಹಿಸಿ ಸಾರ್ವಜನಿಕ ಹೋರಾಟ ಸಮಿತಿಯವರು ಪಂಚಾಯಿತಿ ಎದುರು ಧರಣಿ ನಡೆಸಿದ್ದು, ಈ ಸಂದರ್ಭ ಜ.೩ರಂದು (ಇಂದು) ಟೆಂಡರ್ ನಡೆಸುವುದಾಗಿ ಪಂಚಾಯಿತಿ ಅಧಿಕಾರಿ ವರ್ಗ ತಿಳಿಸಿದ ಮೇರೆ ಪ್ರತಿಭಟನೆ ಸ್ಥಗಿತಗೊಂಡಿತ್ತು.

ಈ ಬಗ್ಗೆ ಪ್ರಕಟಣೆಗಳನ್ನೂ ಹೊರಡಿಸಿದ್ದ ಪಟ್ಟಣ ಪಂಚಾಯಿತಿ ತಾ. ೩ರಂದು (ಇಂದು) ೧೦ ಗಂಟೆಗೆ ಟೆಂಡರ್ ನಡೆಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಆದರೆ ಹೈಕೋರ್ಟ್ ಪಂಚಾಯಿತಿಯ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದು, ಮುಂದಿನ ಆದೇಶ ದವರೆಗೂ ಯಾವುದೇ ಕ್ರಮವಹಿಸ ದಂತೆ ನಿರ್ದೇಶನ ನೀಡಿದೆ.

ಮಳಿಗೆ ಹರಾಜಿಗೆ ಸಂಬAಧಿಸಿ ದಂತೆ ಹಾಲಿ ವರ್ತಕರಾಗಿರುವ ಷಡಾಕ್ಷರಿ, ಸುದರ್ಶನ್ ಕೌಶಿಕ್, ಎ.ಎಲ್. ಚನ್ನಯ್ಯ ಅವರುಗಳು ಹೈಕೋರ್ಟ್ ವಕೀಲ ವಿ.ಆರ್. ಸಾರಥಿ ಅವರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಮುಂದಿನ ಆದೇಶದವರೆಗೆ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.

ಈ ಅರ್ಜಿಗೆ ಸಂಬAಧಿಸಿದAತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯ ದರ್ಶಿ, ಪೌರಾಡಳಿತ ಇಲಾಖೆಯ ನಿರ್ದೇಶಕರು,

(ಮೊದಲ ಪುಟದಿಂದ) ಜಿಲ್ಲಾಧಿಕಾರಿ, ಸೋಮವಾರಪೇಟೆ ಪ.ಪಂ. ಮುಖ್ಯಾಧಿಕಾರಿ, ಆಡಳಿತಾಧಿಕಾರಿಯಾಗಿರುವ ತಾಲೂಕು ತಹಶೀಲ್ದಾರ್ ಅವರು ಗಳನ್ನು ಪ್ರತಿವಾದಿಗಳನ್ನಾಗಿಸಿ ಈ ತಡೆಯಾಜ್ಞೆ ನೀಡಿದೆ.

ಒಟ್ಟಾರೆ ಪಟ್ಟಣ ಪಂಚಾಯಿತಿಯ ೬೦ ಮಳಿಗೆಗಳಿಗೆ ಒಟ್ಟು ೩೪೪ ಅರ್ಜಿಗಳು ಸಲ್ಲಿಕೆಯಾಗಿವೆ. ಹಿಂದಿನ ಸಾಮಾನ್ಯ ಸಭೆಯಿಂದ ಹಿಡಿದು ಮೊನ್ನೆ ನಡೆದ ವಿಶೇಷ ಸಾಮಾನ್ಯ ಸಭೆ, ಜಿಲ್ಲಾಧಿಕಾರಿಗಳಿಗೆ ಮನವಿ-ಟೆಂಡರ್ ಮುಂದೂಡಿಕೆ, ಪಂಚಾಯಿತಿ ಜನಪ್ರತಿನಿಧಿಗಳ ಪ್ರತಿಭಟನೆ, ಪಂಚಾಯಿತಿ ಎದುರು ಸಾರ್ವಜನಿಕ ಹೋರಾಟ ಸಮಿತಿಯ ಪ್ರತಿಭಟನೆ ಸೇರಿದಂತೆ ಹಲವಷ್ಟು ಘಟನಾವಳಿಗಳಿಗೆ ಕಾರಣವಾಗಿದ್ದ ಟೆಂಡರ್ ಪ್ರಕ್ರಿಯೆಗೆ ಇನ್ನೇನು ಕೆಲವೇ ಘಂಟೆಗಳು ಬಾಕಿಯಿದೆ ಎನ್ನುವಷ್ಟರಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಸಾಮಾನ್ಯ ಸಭೆಯ ನಿರ್ಣಯವನ್ನು ಸರಿಯಾಗಿ ಪಾಲಿಸದ ಅಧಿಕಾರಿ ವರ್ಗದಿಂದಲೇ ಇಷ್ಟೆಲ್ಲಾ ಸಮಸ್ಯೆ ಉದ್ಭವಿಸಿದೆ ಎಂದು ಹಲವಷ್ಟು ಸದಸ್ಯರು ಮತ್ತು ಟೆಂಡರ್‌ದಾರರು ಆರೋಪಿಸುತ್ತಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈಗಿರುವ ವರ್ತಕರುಗಳಿಗೆ ಕೆಲವೊಂದು ನಿಬಂಧನೆಗಳನ್ನು ವಿಧಿಸಿ, ಬಾಡಿಗೆ, ಮುಂಗಡ ಹಣ ಹೆಚ್ಚು ಮಾಡಿ ಮಳಿಗೆಗಳನ್ನು ಅವರುಗಳಿಗೆ ನೀಡಬಹುದೇ ಎಂಬ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೋರಲು ಶಾಸಕ ಮಂಥರ್ ಗೌಡ ಅವರ ಉಪಸ್ಥಿತಿಯಲ್ಲಿ ತೀರ್ಮಾನಿಸಲಾಗಿತ್ತು.

ಆದರೆ ಸಭಾ ನಿರ್ಣಯವನ್ನು ತಿರುಚಿ ಅಧಿಕಾರಿಗಳೇ ಟೆಂಡರ್‌ಗೆ ದಿನಾಂಕ ನಿಗದಿ ಮಾಡಿದ್ದಾರೆ. ಇದರಿಂದಾಗಿ ಒಟ್ಟಾರೆ ಟೆಂಡರ್ ಪ್ರಕ್ರಿಯೆ ಗೋಜಲುಮಯವಾಗಿದ ಎಂದು ಕೆಲವರು ವಾದಿಸಿದರೆ, ಈಗಾಗಲೆ ಹಲವಾರು ವರ್ಷಗಳಿಂದ ಕಡಿಮೆ ಬಾಡಿಗೆಗೆ ಅಂಗಡಿ ಮುಂಗಟ್ಟುಗಳನ್ನು ನಡೆಸುತ್ತಿದ್ದಾರೆ. ಟೆಂಡರ್ ನಡೆದರೆ ಪಂಚಾಯಿತಿಗೆ ಹೆಚ್ಚಿನ ಬಾಡಿಗೆ ಬರಲಿದೆ ಎಂದು ಇನ್ನು ಕೆಲವರು ವಾದಿಸುತ್ತಿದ್ದಾರೆ.

ಒಟ್ಟಾರೆ ಪಂಚಾಯಿತಿಯ ಅಧಿಕಾರಿಗಳು ಸಾಮಾನ್ಯ ಸಭೆಯ ನಿರ್ಣಯವನ್ನು ಬದಲಿಸಿದ ಒಂದೇ ಒಂದು ಕಾರಣದಿಂದಾಗಿ ಇಷ್ಟೆಲ್ಲಾ ಸಮಸ್ಯೆ ಉದ್ಬವವಾಗಿದೆ ಎಂದು ಪ.ಪಂ. ಸದಸ್ಯರುಗಳು ಅಭಿಪ್ರಾಯಿಸಿದ್ದಾರೆ. ಅಂತಿಮವಾಗಿ ಇಂದು ಬೆಳಿಗ್ಗೆ ೧೦ ಗಂಟೆಗೆ ನಿಗದಿಯಾಗಿದ್ದ ಟೆಂಡರ್ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯವರೆಗೆ ಯಾವುದೇ ಕ್ರಮ ವಹಿಸದಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ.