ಮಡಿಕೇರಿ, ಜ. ೨: ದ್ವೇಷದ ರಾಜಕಾರಣದಿಂದ ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧಿಸಲಾಗುತ್ತಿದೆ ಎಂಬ ಬಿಜೆಪಿ ಆಕ್ರೋಶಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಮಡಿಕೇರಿ, ಜ. ೨: ದ್ವೇಷದ ರಾಜಕಾರಣದಿಂದ ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧಿಸಲಾಗುತ್ತಿದೆ ಎಂಬ ಬಿಜೆಪಿ ಆಕ್ರೋಶಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಮೋದಿ, ಅಮಿತ್ ಷಾ ಅವರು ಎಲ್ಲೆಡೆ ಈಡಿ, ಸಿಬಿಐಗಳನ್ನು ಬಳಸಿ ರಾಜಕಾರಣ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ ಸ್ವಾತಂತ್ರö್ಯ ಬಂದಾಗಿನಿAದ ಇದುವರೆಗೆ ಕಾಂಗ್ರೆಸ್ ಯಾವತ್ತೂ ದ್ವೇಷ ರಾಜಕಾರಣ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ಕೊಟ್ಟು ಧರ್ಮ ರಾಜಕಾರಣ ಮಾಡುತ್ತಿದ್ದಾರೆ, ಕೇಂದ್ರದಿAದ ಬರಬೇಕಾಗಿರುವ ಬರಪರಿಹಾರ, ಜಿಎಸ್ಟಿ ಪಾಲಿನ ಬಗ್ಗೆ ಮಾತನಾಡಲ್ಲ,
(ಮೊದಲ ಪುಟದಿಂದ) ಎನ್ಆರ್ ಎಜಿಇ ಕೆಲಸಕ್ಕೆ ಕೂಲಿ ಕಾರ್ಮಿಕರಿಗೆ ಕೊಡಬೇಕಾಗಿರುವ ಅನುದಾನದ ಬಗ್ಗೆ ಮಾತನಾಡಲ್ಲ, ಮೋದಿ ಮುಂದೆ ಬಿಜೆಪಿ ಸಂಸದರಿಗೆ ಬಾಯಿಬಿಚ್ಚುವುದಕ್ಕೆ ಆಗಲ್ಲ, ಇಲ್ಲದಿರುವ ಕಥೆಯನ್ನು ಮಾತನಾಡುವುದೇ ಬಿಜೆಪಿಯವರ ಕೆಲಸ ಎಂದು ದೂರಿದರು. ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧಿಸಲಾದ ಘಟನೆ ಕಾನೂನು ಪ್ರಕ್ರಿಯೆ ಅಷ್ಟೇ. ಕಾನೂನು ಪ್ರಕ್ರಿಯೆ ನಡೆಯುತ್ತಿರುತ್ತದೆ. ಅದಕ್ಕೆ ಈಗಾಗಲೇ ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಮತ್ತಿತರ ಸಚಿವರು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆಗೊಳ್ಳುವಂತೆ ಕೋರಿದ್ದರೂ ಇದುವರೆಗೆ ಅವರುಗಳು ಸ್ಪಂದಿಸಿಲ್ಲ. ಈ ಬಗ್ಗೆಯೂ ಕರ್ನಾಟಕದ ೨೫ ಮಂದಿ ಬಿಜೆಪಿ ಸಂಸದರು ಮಾತನಾಡದೆ ಮೌನ ವಹಿಸಿ ಬೇಡದ ವಿಚಾರಗಳ ಬಗ್ಗೆ ಸ್ವರ ಏರಿಸುತ್ತಾರೆ ಎಂದು ಸಚಿವರು ಕುಟುಕಿದರು.