ಮಡಿಕೇರಿ, ಜ. ೨: ನಾವು ರಾಮಮಂದಿರದ ಪರವಾಗಿದ್ದೇವೆ, ಮುಖ್ಯಮಂತ್ರಿಯವರು ಕೂಡ ಅದನ್ನೇ ಹೇಳಿದ್ದಾರೆ, ನಾನು ಅದನ್ನೇ ಹೇಳುತ್ತಿದ್ದೇನೆ, ರಾಮಮಂದಿರ ಉದ್ಘಾಟನೆಗೆ ಶುಭವಾಗಲಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯಕ್ಕಾಗಿ ಸಹಜವಾಗಿ ಆರೋಪ ಮಾಡುತ್ತಾರೆ, ಕಾನೂನು ಬೇರೆ ರಾಜಕೀಯ ಬೇರೆ, ನಾಲ್ಕು ವರ್ಷ ಬಿಜೆಪಿಯವರು ಆಡಳಿತ ನಡೆಸಿದರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇರಲಿಲ್ಲ, ಯಾವುದೇ ರೀತಿ ರಿವ್ಯೂ ನಡೆದಿರಲಿಲ್ಲ, ಹೀಗಾಗಿ ೩೧ ವರ್ಷಗಳಿಂದ ಇದ್ದ ಪ್ರಕರಣಗಳನ್ನು ಮುಗಿಸಬೇಕು, ಅದಕ್ಕೆ ಚಾರ್ಜ್ ಶೀಟ್ ಹಾಕಬೇಕಲ್ಲ, ರಿವ್ಯೂ ಆದಾಗ ಈ ಪ್ರಕರಣಗಳು ಬಂದಿವೆ ಅಷ್ಟೇ. ಕರಸೇವಕರನ್ನು ಬಂಧಿಸಬೇಕು ಅಂತ ಯಾರೂ ಮಾಡಿರು ವುದಕ್ಕೆ ಸಾಧ್ಯವೇ ಇಲ್ಲ ಎಂದು ಸಮರ್ಥಿಸಿಕೊಂಡರು.