್ಡ ಅನಿಲ್ ಎಚ್.ಟಿ.

ಮಡಿಕೇರಿ, ಜ. ೧: ಹೊಸ ವರ್ಷಕ್ಕೆ ಕನ್ನಡ ನಾಡಿಗೆ ಸಂಭ್ರಮಿಸುವ ಸುದ್ದಿ ಎಂಬAತೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರೂಪಿಸಿದ್ದ ಶ್ರೀರಾಮನ ಮೂರ್ತಿಯೇ ಜನವರಿ ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಶ್ರೀರಾಮನ ವಿಗ್ರಹ ಕೆತ್ತನೆಗೆ ಅರುಣ್ ಬಳಸಿದ್ದ ಕಲ್ಲು ಕರ್ನಾಟಕದ ಎಚ್.ಡಿ. ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ.

ಅಯೋಧೆೆ್ಯಯಲ್ಲಿ ಕೋಟ್ಯಂತರ ವರ್ಷಗಳ ಕಾಲ ಭಕ್ತರ ಪೂಜೆಗೆ ಪಾತ್ರವಾಗುವ ಶ್ರೀ ರಾಮಚಂದ್ರನ ಮೂರ್ತಿ ಕನ್ನಡಿಗನಿಂದ ಕೆತ್ತಲಾಗಿದೆ ಎಂಬುದು ಪ್ರತಿಯೊಬ್ಬ ಕನ್ನಡಿಗ ಕೂಡ ಹೆಮ್ಮೆ ಪಡುವ ವಿಚಾರ.

ಹಿರಿಯ ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ಕುಡಿಯಾಗಿರುವ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಶ್ರೀ ರಾಮನ ವಿಗ್ರಹವನ್ನು ಅಯೋಧ್ಯೆ ರಾಮಮಂದಿರ ಸಮಿತಿಯು ಆಯ್ಕೆ ಮಾಡಿದೆ. ಈ ಮೂಲಕ ಕರ್ನಾಟಕಕ್ಕೂ ಹೆಮ್ಮೆಪಡುವ ಕ್ಷಣ ಬಂದಿದೆ.

ಮಡಿಕೇರಿಯಲ್ಲಿ ಸರ್ಕಾರಿ ಬಸ್ ಡಿಕ್ಕಿಯಾಗಿ ಹಾನಿಗೊಳಗಾಗಿರುವ ಜನರಲ್ ತಿಮ್ಮಯ್ಯ ಅವರ ಪ್ರತಿಮೆಗೆ ಕಾಯಕಲ್ಪ ನೀಡಿ ಮತ್ತೆ ಕಂಗೊಳಿಸುವAತೆ ಮಾಡಿದ ಕೀರ್ತಿಯೂ ಇದೇ ಅರುಣ್ ಯೋಗಿರಾಜ್ ಅವರದ್ದು ಎಂಬುದು ವಿಶೇಷ.

ಇನ್ನೂ ಈ ಪ್ರತಿಮೆ ಪುನರ್‌ಸ್ಥಾಪನೆಗೊಳ್ಳಬೇಕಿದೆ

ಹೊಸ ವರ್ಷದ ದಿನವೇ ಅಯೋಧ್ಯೆ ರಾಮಮಂದಿರ ಸಮಿತಿಯು ಖುದ್ದು ಅರುಣ್ ಯೋಗಿರಾಜ್ ಅವರಿಗೆ ಕರೆ ಮಾಡಿ ‘‘ನೀವು ರೂಪಿಸಿದ ವಿಗ್ರಹವನ್ನೇ ಆಯ್ಕೆ ಮಾಡಲಾಗಿದೆ’’ ಎನ್ನುವ ಸಂದೇಶವನ್ನು ರವಾನಿಸಿದೆ. ಇದನ್ನು ಖುದ್ದು ಅರುಣ್ ಯೋಗಿರಾಜ್ ಅವರೇ ಖಚಿತಪಡಿಸಿದ್ದಾರೆ.

ಕಳೆದ ವರ್ಷವೇ ರಾಮನ ವಿಗ್ರಹ ತಯಾರಿಸಲು ದೇಶದ ಹಲವಾರು ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಇವರು ಕಳುಹಿಸಿದ ಮಾದರಿಗಳನ್ನು ಗುರುತಿಸಿ ಕೊನೆಗೆ ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಒಬ್ಬರು ಕಲಾವಿದರ ಹೆಸರು ಅಂತಿಮಗೊಳಿಸಲಾಗಿತ್ತು.

ಇದರಲ್ಲಿ ಅರುಣ್ ಯೋಗಿರಾಜ್, ಜಿ.ಎಸ್. ಭಟ್ ಕರ್ನಾಟಕದವರಾಗಿದ್ದರೆ ಸಂಜಯ್ ಪಾಂಡೆ ಎನ್ನುವ ಕಲಾವಿದರು ರಾಜಸ್ಥಾನದವರು.

ಈ ಮೂವರು ತಾವು ಕೆತ್ತಿದ್ದ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಅತ್ಯುತ್ತಮ ಎನ್ನುವ ರೀತಿಯಲ್ಲಿರುವ ಅರುಣ್ ರೂಪಿಸಿದ ೨೫ ಅಡಿ

(ಮೊದಲ ಪುಟದಿಂದ) ಎತ್ತರದ ವಿಗ್ರಹವನ್ನು ಇದೀಗ ಅಂತಿಮಗೊಳಿಸಲಾಗಿದೆ. ಈಗಾಗಲೇ ಅರುಣ್ ಯೋಗಿರಾಜ್ ಅವರು ಕೆಲ ದಿನಗಳ ಹಿಂದೆ ರೂಪಿಸಿದ್ದ ಎರಡು ಪ್ರಮುಖ ಮೂರ್ತಿಗಳು ಅಯೋಧ್ಯೆಯ ಬೇರೆ ದೇವಾಲಯಗಳಲ್ಲಿ ಪ್ರತಿಷ್ಠಾಪನೆಗೊಂಡಿವೆ.

ಉತ್ತರಾಖAಡದ ಕೇದಾರನಾಥಕ್ಕೆ ೧೨ ಅಡಿ ಆದಿ ಶಂಕರಾಚಾರ್ಯರ ವಿಗ್ರಹ ಹಾಗೂ ಭಾರತ ಸರ್ಕಾರ ದೆಹಲಿ ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಿರುವ ಸುಭಾಷ್ ಚಂದ್ರಬೋಸ್ ಅವರ ೨೮ ಅಡಿ ಏಕಶಿಲೆಯ ಕಪ್ಪು ಗ್ರಾನೈಟ್ ಕಲ್ಲಿನ ಶಿಲ್ಪ ಕೂಡ ಅರುಣ್ ಯೋಗಿರಾಜ್ ನಿರ್ಮಿಸಿದ್ದಾಗಿದೆ.

ಮೈಸೂರಿನ ಐದು ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕೌಟುಂಬಿಕ ಹಿನ್ನೆಲೆ ಹೊಂದಿರುವ ಅರುಣ್ ಯೋಗಿರಾಜ್ ಪ್ರಸ್ತುತ ದೇಶದ ಬಹುಬೇಡಿಕೆಯ ಶಿಲ್ಪಿಯಾಗಿದ್ದಾರೆ.

ಅರುಣ್ ಅವರ ಕೈಚಳಕದಿಂದ ಸಾಧಕರ ಪ್ರತಿಮೆಗಳು ತಲೆ ಎತ್ತಬೇಕು ಎಂಬ ಬೇಡಿಕೆಯಿಂದಾಗಿ ದೇಶದ ವಿವಿಧ ರಾಜ್ಯಗಳು ಅರುಣ್ ಅವರನ್ನು ಹುಡುಕಿಕೊಂಡು ಬರುತ್ತಿವೆ. ತನಗೆ ಸಿಕ್ಕ ಅವಕಾಶಗಳ ಸಮರ್ಥ ಬಳಕೆಗೆ ಬಂದಾಗ ಅರುಣ್ ಉದ್ಯಮಶೀಲ. ಹೀಗಾಗಿಯೇ ದೇಶದ ನಾನಾ ರಾಜ್ಯಗಳಲ್ಲಿ ಇವರ ಕಲೆಗೆ ಬೇಡಿಕೆ ಸೃಷ್ಟಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅರುಣ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಮೂಲಕವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಲವು ತಿಂಗಳ ಹಿಂದೆ ಶಿಲ್ಪಿ ಅರುಣ್ ಯೋಗಿರಾಜ್ ಭೇಟಿ ಮಾಡಿದ್ದರು.

ಅರುಣ್ ತಂದೆ ಯೋಗಿರಾಜ್ ಕೂಡ ನುರಿತ ಶಿಲ್ಪಿ. ಕೆಲ ದಿನಗಳ ಹಿಂದೆಯಷ್ಟೇ ಅವರು ನಿಧನರಾಗಿದ್ದಾರೆ. ಅರುಣ್ ಸಾಧನೆ ಹಿಂದೆ ಆತನ ಛಲವಿದೆ. ಇಂಥ ಅವಕಾಶ ದೊರಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಅರುಣ್ ತಾಯಿ ಸರಸ್ವತಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ೬ ತಿಂಗಳಿನಿAದ ಅಯೋಧ್ಯೆಗೆ ಆಗಿಂದಾಗ್ಗೆ ಅರುಣ್ ಹೋಗಿ ಬರುತ್ತಿದ್ದಾರೆ. ಶ್ರೀರಾಮನ ಪ್ರತಿಮೆ ಕೆತ್ತನೆಗೆ ಅವಕಾಶ ದೊರಕಿದ್ದೇ ಮಹಾನ್ ಸಾಧನೆ. ಹೀಗಿರುವಾಗ ಅರುಣ್ ಕೆತ್ತಿದ ಶಿಲ್ಪವೇ ಪ್ರತಿಷ್ಠಾಪನೆಯಾಗಲಿದೆ ಎಂಬುದು ನಮಗೆ ಊಹಿಸಲೂ ಆಗದ ಸಂತೋಷ ತಂದಿದೆ ಎಂದು ಸರಸ್ವತಿ ಭಾವುಕರಾಗಿ ನುಡಿದರು.

ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರಿಂದ ಪೋಷಕರಾಗಿದ್ದರು. ಈ ತಲೆಮಾರಿನವರಾದ ಅರುಣ್ ಯೋಗಿರಾಜ್ ಅವರು ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಸರಸ್ವತಿ ಹೇಳಿದರು.

ಎಂಬಿಎ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಆದರೆ ಉದ್ದಕ್ಕೂ ಅವರಲ್ಲಿ ಸಹಜವಾಗಿಯೇ ಇದ್ದ ಶಿಲ್ಪಕಲೆ ವೃತ್ತಿಯ ಕೌಶಲದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಹೀಗಾಗಿ ೨೦೦೮ರಿಂದ ಕೆತ್ತನೆ ವೃತ್ತಿ ಮುಂದುವರಿಸಿ ಹದಿನೈದು ವರ್ಷದಲ್ಲಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.

ಕೈಯಿಂದ ಕೆತ್ತಿದ ಮಂಟಪಗಳು, ವಿವಿಧ ಕಲ್ಲಿನ ಕಂಬದ ಕೆಲಸಗಳು ಮತ್ತು ಇನ್ನೂ ಅನೇಕ ಶಿಲ್ಪಗಳನ್ನು ಅರುಣ್ ಯೋಗಿರಾಜ್ ರೂಪಿಸಿ ಸಣ್ಣ ವಯಸ್ಸಿನಲ್ಲೇ ಗಮನ ಸೆಳೆದಿದ್ದಾರೆ.