ಮಡಿಕೇರಿ, ಡಿ. ೩೧: ಬಿಲ್ಲವ ಸಮಾಜ ಸೇವಾ ಸಂಘ ವತಿಯಿಂದ ಬಿಲ್ಲವ ಸಮುದಾಯದವರಿಗಾಗಿ ೧೭ನೇ ವರ್ಷದ ಜಿಲ್ಲಾಮಟ್ಟದ ಕೋಟಿ ಚೆನ್ನಯ್ಯ ಕ್ರೀಡಾಕೂಟ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಟೆನ್ನಿಸ್‌ಬಾಲ್ ಕ್ರಿಕೆಟ್, ವಾಲಿಬಾಲ್ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ಥ್ರೋಬಾಲ್, ವಿಷದ ಚೆಂಡು ಮತ್ತು ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ ಸ್ಪರ್ಧೆಗಳು ನಡೆದವು. ನಂತರ ಹಿರಿಯ ರಿಗೆ ವೇಗದ ನಡಿಗೆ, ೫ ವರ್ಷದ ಒಳಗಿನ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ೧ ರಿಂದ ೨ನೇ ತರಗತಿ ಬಾಲಕ, ಬಾಲಕಿಯರಿಗೆ ಕಪ್ಪೆ ಜಿಗಿತ, ೩ ರಿಂದ ೫ನೇ ತರಗತಿ ಬಾಲಕ ಹಾಗೂ ಬಾಲಕಿಯರಿಗೆ ೫೦ ಮೀ. ಓಟ, ೫ನೇ ತರಗತಿಯಿಂದ ೭ನೇ ತರಗತಿ ಬಾಲಕ ಹಾಗೂ ಬಾಲಕಿಯರಿಗೆ ೧೦೦ ಮೀ. ಓಟ, ಪ್ರೌಢಶಾಲಾ ವಿಭಾಗ ಬಾಲಕ ಹಾಗೂ ಬಾಲಕಿಯರಿಗೆ ೨೦೦ ಮೀ. ಓಟ, ಪದವಿ ಪೂರ್ವ ಬಾಲಕ, ಬಾಲಕಿಯರಿಗೆ ೪೦೦ ಮೀ. ಓಟ ಸ್ಪರ್ಧೆಗಳು ಜರುಗಿ ದವು. ಸಂಘದ ಅಧ್ಯಕ್ಷೆ ಬಿ.ಎಸ್. ಲೀಲಾವತಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.