ಕೂಡಿಗೆ, ಡಿ. ೩೧: ಕೊಡಗು ವಿಶ್ವವಿದ್ಯಾಲಯದ ಘನತೆ ಹಾಗೂ ಪಾವಿತ್ರ‍್ಯತೆಗೆ ಧಕ್ಕೆ ಉಂಟು ಮಾಡಿ ಕೆಲವರು ಅರಾಜಕತೆ ಸೃಷ್ಟಿಸುತ್ತಿದ್ದು ಅಂತಹ ಶಕ್ತಿಗಳನ್ನು ವಿಶ್ವವಿದ್ಯಾ ಲಯದಿಂದ ದೂರುವಿಡುವಂತೆ ಆಗ್ರಹಿಸಿ ಕೊಡಗಿನ ವಿ.ವಿ ಹಿತರಕ್ಷಣಾ ಬಳಗದಿಂದ ವಿವಿ ಹೊರ ಆವರ ಣದಲ್ಲಿ ಪ್ರತಿಭಟನೆ ನಡೆಯಿತು.
ಹಿತರಕ್ಷಣಾ ಬಳಗದ ಪ್ರಮುಖ ರಾದ ಕೆ.ಎಸ್.ಕೃಷ್ಣೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪದಾಧಿಕಾ ರಿಗಳು, ಗ್ರಾಮಸ್ಥರು ಪಾಲ್ಗೊಂಡಿ ದ್ದರು. ಕೊಡಗು ವಿವಿಯ ಅಸ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಆರೋ ಪಿಸಿ ಧಿಕ್ಕಾರ ಕೂಗಲಾಯಿತು.
ಕೊಡಗಿನ ಜನತೆಯ ದಶಕಗಳ ಕನಸಿನಂತೆ ಮಂಗಳೂರು ವಿವಿ ಯಿಂದ ಬೇರ್ಪಟ್ಟು ಸ್ವತಂತ್ರ ವಿವಿಯಾಗಿ ಅಸ್ತಿತ್ವಕ್ಕೆ ಬಂದ ಕೊಡಗು ವಿವಿಗೆ ಕಳಂಕ ತರುವ ರೀತಿಯಲ್ಲಿ ಕೆಲವು ಪಟ್ಟಭದ್ರ ಮನಸ್ಥಿತಿಯವರು ವರ್ತಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳು, ದಾಖಲಾತಿಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಪ್ರಮುಖರಾದ ನಟೇಶ್ ಗೌಡ, ಟಿ.ಬಿ. ಜಗದೀಶ್ ಆರೋ ಪಿಸಿದರು. ವಿಶ್ವವಿದ್ಯಾಲಯದ ಬೆಳವ ಣಿಗೆಗೆ ಶ್ರಮಿಸಬೇಕಾದ ಕೆಲವು ಬೋಧಕ, ಬೋಧಕೇತರ ಸಿಬ್ಬಂದಿ ಗಳು ತಮ್ಮ ಸ್ವಹಿತಾಸಕ್ತಿ ಹಾಗೂ ಸ್ವಾರ್ಥ ಸಾಧನೆಗೆ ಶೈಕ್ಷಣಿಕ ಪರಿಸರಕ್ಕೆ ಮಾರಕವಾಗುತ್ತಿದ್ದಾರೆ.
ರಾಜ್ಯಪಾಲರ ಸುತ್ತೋಲೆಯಂತೆ ಹೆಚ್ಚುವರಿ ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು ಸೇವೆಯಿಂದ ಬಿಡು ಗಡೆಗೊಳಿಸಲಾಗಿದೆ. ಅಂತಹ ೨೦ ಮಂದಿ ಕೊಡಗು ವಿವಿ ಖ್ಯಾತಿಗೆ ಮಸಿ ಬಳಿಯುವ ರೀತಿಯಲ್ಲಿ ಜಾತಿಗಳನ್ನು ಎತ್ತಿಕಟ್ಟಿ ಹೋರಾಟದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆ.ಎಸ್. ಕೃಷ್ಣೇಗೌಡ ಮಾತನಾಡಿ, ಕೊಡಗು ವಿವಿಯ ಅಸ್ತಿತ್ವ ಉಳಿಸಬೇ ಕೆನ್ನುವ ನಿಟ್ಟಿನಲ್ಲಿ ಸಾಮಾಜಿಕ ಹೋರಾಟಗಾರರು, ಪ್ರಗತಿಪರರು, ಚಿಂತಕರು, ಪ್ರಜ್ಞಾವಂತರು ಒಗ್ಗೂಡಿ ಈ ಹೋರಾಟ ರೂಪಿಸಿದ್ದಾರೆ.
ವಿವಿಯ ಕುಲಪತಿ, ರಿಜಿಸ್ಟಾçರ್ ಗಳಿಗೆ ಕೆಲವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದು ಶೈಕ್ಷಣಿಕ ಅಸಮತೋಲನ ಉಂಟುಮಾಡಲಿದೆ. ನಮ್ಮ ಈ ಹೋರಾಟದ ಮೂಲಕ ಕುಲಪತಿ, ರಿಜಿಸ್ಟಾçರ್‌ಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ.
ಕೊಡಗು ವಿವಿಯ ಆಡ ಳಿತಾತ್ಮಕ, ಆಡಳಿತೇತರ ಚಟು ವಟಿಕೆಗಳನ್ನು ವಿರೋಧಿಸುವ ಶಕ್ತಿಗಳ ನಿಲುವು ಬದ ಲಾಗಬೇಕಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸ ಲಾಗುವುದು. ವಿವಿಯ ಅತಿಥಿ ಉಪ ನ್ಯಾಸಕನೋರ್ವ ವಿದ್ಯಾರ್ಥಿ ನಿಯರಿಗೆ ಮಾನಸಿಕಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಆ ಉಪನ್ಯಾಸಕನನ್ನು ವಿವಿಯಿಂದ ತಕ್ಷಣ ಕೈಬಿಡಬೇಕಿದೆ. ತಪ್ಪಿದಲ್ಲಿ ವಿವಿ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಳಗದ ಪ್ರಮುಖರಾದ ಎಚ್.ಟಿ.ದಿನೇಶ್, ಮಂಜುನಾಥ್, ಎಂ.ಎಸ್. ಶಾಂತಿ, ಟಿ.ಜಿ. ಶಿವಪ್ಪ, ಎಸ್.ಎಸ್. ಚಂದ್ರ ಶೇಖರ್, ಎನ್.ಎಸ್. ರಮೇಶ್, ಹಾರುವಯ್ಯ, ಶಿವಶಂಕರ್, ಪಿ.ಡಿ. ರವಿಕುಮಾರ್, ಉದಯಕುಮಾರ್, ಶುಂಠಿ ಶೇಖರ್, ಪ್ರದೀಪ್ ರೆಡ್ಡಿ, ಗುರುಲಿಂಗಪ್ಪ, ಸಂಜೀವಯ್ಯ, ಸಂತೋಷ್ ಮತ್ತಿತರರು ಇದ್ದರು.