೨೦೨೪ ಚಂದ್ರನು ಮಖಾ ನಕ್ಷತ್ರದಲ್ಲಿದ್ದಾಗ ಸೋಮವಾರ ಕನ್ಯಾ ಲಗ್ನದಲ್ಲಿ ಉದಯವಾಗುವುದು. ೨೦೨೪ ಅಧಿಕ ಮಾಸವಿರುವ ವರ್ಷ. ಹೊಸ ವರ್ಷ ಉದಯವಾಗುವ ಸಮಯ. ಜೋತಿಷ್ಯ ಆಧಾರದಲ್ಲಿ ಲೆಕ್ಕ ಹಾಕಿ ನೋಡಿದರೆ, ಬುಧ - ಶುಕ್ರದ ಸಂಗಮವನ್ನು ನೋಡಿದರೆ ನಮ್ಮ ಸರ್ಕಾರವು ನಮ್ಮ ನೆರೆ ಹೊರೆಯ ದೇಶಗಳೊಡನೆ ಒಳ್ಳೆಯ ಬಾಂಧವ್ಯದಿAದ ವ್ಯಾಪಾರ ವ್ಯವಹಾರ ಮಾಡುವುದು. ಪಾಪಗ್ರಹಗಳು ಮೂರು ಕೇಂದ್ರಗಳಲ್ಲಿ ಇರುವುದರಿಂದ ಅದನ್ನು ಸರ್ಪಯೋಗವೆನ್ನುತ್ತಾರೆ. ಸರ್ಪಯೋಗ ವಿರುವುದರಿಂದ ಕೆಲವು ಜನರು ದುಷ್ಟತನವನ್ನು ರೂಢಿಸಿಕೊಳ್ಳ್ಳುವರು.
೨ ಪಾಪಗ್ರಹಗಳಿಗೆ ಬಲವಿರುವುದರಿಂದ ರಾಜಕೀಯ ವಕ್ತಾರರು ಬೇಡದ ಮಾತನಾಡಿ ಜೈಲು ಸೇರಬಹುದು. ೮-೧೨ ಮನೆಯ ಅಧಿಪತಿಯ ಸಂಗಮವು ವಿಪರೀತ ರಾಜಯೋಗವನ್ನು ಸೃಷ್ಟಿಸುತ್ತದೆ. ಕೆಲವು ಒತ್ತಡಗಳ ನಂತರ ತುಂಬಾ ಫಲಪ್ರದವಾಗಬಹುದು. ಒಂದನೇ ಮನೆಯಲ್ಲಿರುವ ಕೇತು ಜನರಿಗೆ ಕಾಯಿಲೆಯನ್ನುಂಟುಮಾಡಬಹುದು. ಮನಸ್ಸಿನಲ್ಲಿ ಉದ್ವೇಗವನ್ನುಂಟು ಮಾಡಬಹುದು. ಕೆಲವು ಸಚಿವರು ರಾಜೀನಾಮೆ ಕೊಡಬೇಕಾದೀತು ಮತ್ತು ಸಚಿವ ಸಂಪುಟ ಪುರ್ರಚನೆಯಾಗಬಹುದು.
ರಾಹು ಲಗ್ನವನ್ನು ನೋಡುವುದರಿಂದ ಗಲಾಟೆ, ಹಗರಣ, ದುಃಖ, ಒಳ್ಳೆಯವರ ಶೋಕ ಸಮಾಚಾರ ದೇಶ, ನಾಡಿನ ಜನರಿಗೆ ದುಃಖವನ್ನುಂಟು ಮಾಡಬಹುದು. ಮಾಧ್ಯಮವು ಲಂಚಕೋರರನ್ನು ಹೀನಾಯವಾಗಿ ಬಯಲುಗೊಳಿಸಬಹುದು. ನಮ್ಮ ದೇಶದ ಸಾಲವು ಮುಗಿಯುತ್ತಾಬರುವುದು. ಸರ್ಕಾರ ರೈತರಿಗೆ ಸಹಾಯ ಮಾಡುವುದು. ಸರ್ಕಾರದ ಏಜೆಂಟರು (ಸಿಬಿಐ, ಐಟಿ, ಇಡಿ ) ಸುಮಾರು ರಾಜಕಾರಣಿಗಳನ್ನು ಸನ್ಮಾನ್ಯರನ್ನು ಕಪ್ಪು ಹಣ ಮತ್ತು (ಸೈಬರ್) ಸೈಬರ್ ಅಪರಾಧದಲ್ಲಿ ಬಂಧಿಸಬಹುದು.
ನಮ್ಮ ದೇಶದ ಕಲಾಕಾರರು ಭಾರತ ದೇಶದ ಸಂಸ್ಕೃತಿಯನ್ನು ವಿಶ್ವದಲ್ಲಿ ಹರಡುವಂತೆ ಮಾಡುವರು. ಚೀನಾ - ಪಾಕಿಸ್ತಾನ ಆಕ್ರಮಿಸಿದ ಭಾರತದ ಮಣ್ಣು ಭಾರತಕ್ಕೆ ಸಿಗಬಹುದು. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಚಿತ್ರೀಕರಣಗೊಳ್ಳುವುದು. ಹೊಟೇಲ್, ರಿಯಲ್ ಎಸ್ಟೇಟ್ ಮೇಲೇರುವುದು. ಪರದೇಶಗಳಲ್ಲಿ ಹಣ ಆಸ್ತಿ ಕೂಡಿಟ್ಟವರಿಗೆ ಕಷ್ಟಕಾಲ. ಆಡಳಿತ ಮಾಡುವವರಿಗೆ ಜೂನ್ ತಿಂಗಳಿAದ ನವೆಂಬರ್ತನಕ ಕಷ್ಟಕಾಲ. ನಮ್ಮ ದೇಶದ ಪೂರ್ವ, ಉತ್ತರ - ಪೂರ್ವ, ದಕ್ಷಿಣ - ಪೂರ್ವ ದಿಕ್ಕಿನಲ್ಲಿರುವ ಸ್ಥಳಗಳಲ್ಲಿ ಯುದ್ಧಸಮಾನ ತೊಂದರೆ ಕಾಣಬಹುದು. ಶುಕ್ರ ಮಿಥುನದಲ್ಲಿ ಸಂಚರಿಸುವ ಕಾಲದಲ್ಲಿ ಜೂನ್ - ಜುಲೈ ಗಾಳಿ - ಮಳೆಯಿಂದ ನಷ್ಟ, ದೊಂಬಿ ಗಲಾಟೆಯಾಗಬಹುದು.
ನಮ್ಮ ರಾಹುಲ್ಜಿಯವರು ಜೇಷ್ಠಾನಕ್ಷತ್ರ ೨ನೇ ಪಾದದಲ್ಲಿ ಜನಿಸಿರುತ್ತಾರೆ. ರಾಹುಲ್ಜಿಯವರಿಗೆ ಈಗ ನಡೆಯುತ್ತಿರುವುದು ಕುಜಮಹಾದೆಸೆಗೆ ರಾಹು ಭುಕ್ತಿ. ಲಗ್ನ - ಮಕರ. ರಾಹುಲ್ಜಿಯವರ ಜಾತಕದಲ್ಲಿ ಕುಜನು ೧೧ನೇ ಅಧಿಪತಿಯಾಗಿರುವುದರಿಂದ ಮಕರ. ಲಗ್ನದವರಿಗೆ ಕುಜನು ಬಾಧಕಾಧಿಪತಿ. ಆದ್ದರಿಂದ ಅವರಿಗೆ ಶತ್ರುವನ್ನು ಸೋಲಿಸುವುದು ಕಷ್ಟಕರ.
ಪ್ರಧಾನಿ ಮೋದಿಜಿಯವರು ಅನುರಾಧ ನಕ್ಷತ್ರ ೨ನೇ ಪಾದದಲ್ಲಿ ವೃಶ್ಚಿಕ ರಾಶಿ, ವೃಶ್ಚಿಕ ಲಗ್ನದಲ್ಲಿ ಜನಿಸಿರುತ್ತಾರೆ. ಈಗ ಅವರಿಗೆ ನಡೆಯುತ್ತಿರುವುದು ಕುಜ ಮಹಾದೆಸೆಗೆ ಗುರು ಭುಕ್ತಿ. ಲಗ್ನಾಧಿಪತಿ ಕುಜನು ಲಗ್ನದಲ್ಲೇ ಕುಳಿತ್ತಿದ್ದಾನೆ. ಕೇಂದ್ರದಲ್ಲಿರುವ ಗುರುವು ಕರ್ಮಸ್ಥಾನವಾದ ಸಿಂಹರಾಶಿಯನ್ನು ಹಾಗೂ ಅಲ್ಲಿರುವ ಶುಕ್ರ, ಶನಿಯರನ್ನು ದೃಷ್ಟಿಸುತ್ತಿರುವುದರಿಂದ ಮೋದಿಜಿಯವರಿಗೆ ಶತ್ರುವನ್ನು ಸೋಲಿಸಲು ಖಂಡಿತಾ ಸಾಧ್ಯವಿದೆಯೆಂದು ಜ್ಯೋತಿಷ್ಯ ಆಧಾರದಲ್ಲಿ ಹೇಳಬಹುದು.
- ಕರೋಟಿರ ಶಶಿ ಸುಬ್ರಮಣಿ