ನಾಪೋಕ್ಲು, ಡಿ. ೩೧: ಕುಂಡ್ಯೋಳAಡ ಹಾಕಿ ಹಬ್ಬ ೨೦೨೪ರ ಲಾಂಛÀನ ಬಿಡುಗಡೆ ಸಮಾರಂಭ ನಾಪೋಕ್ಲುವಿನ ಅಪ್ಪಚ್ಚ ಕವಿ ಸಭಾಂಗಣದಲ್ಲಿ ನಡೆಯಿತು.

ಸಂಸದ ಪ್ರತಾಪ್ ಸಿಂಹ ಅವರು ಹಾಕಿ ನಮ್ಮೆಯ ಕ್ಯಾಲೆಂಡರ್ ಬಿಡು ಗಡೆಗೊಳಿಸಿ ಮಾತನಾಡಿ, ಕೊಡಗಿನಲ್ಲಿ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಕೊಡವ ಸಂಸ್ಕೃತಿಯ ಭಾಗವಾಗಿ ಹಾಕಿ ಕ್ರೀಡೆ ಬೇರೂರಿದೆ. ಹಾಕಿ ಕ್ಲಬ್‌ಗಳಿಗೆ ತನ್ನಿಂದ ಸಾಧ್ಯವಾ ದಷ್ಟು ಧನ ಸಹಾಯವನ್ನು ನೀಡಿದ್ದೇನೆ. ಕಳೆದ ವರ್ಷ ಹಾಕಿ ಹಬ್ಬಕ್ಕೆ ಒಂದು ಕೋಟಿ ಹಣವನ್ನು ಕೊಡಿಸಿದ್ದೇನೆ. ಈ ಬಾರಿ ತನ್ನಿಂದ ಸಾಧ್ಯವಾದಷ್ಟು ಪ್ರಾಯೋಜಕತ್ವವನ್ನು, ದಾನಿಗಳಿಂದ ಮತ್ತು ಸಂಸದರ ಕ್ಷೇತ್ರ ಅಭಿವೃದ್ಧಿ ಅನುದಾನದಿಂದ ಕೊಡಿಸಿಕೊ ಡುವುದಾಗಿ ಭರವಸೆಯಿತ್ತರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಮಾತನಾಡಿ, ಕೊಡವ ಸಮುದಾಯದ ಎಲ್ಲಾ ಕುಟುಂಬಗಳು ಹಾಕಿ ಹಬ್ಬವನ್ನು ಆಚರಿಸುವಂತಾಗಬೇಕು. ಆದ್ದರಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವ ಕಳೆದ ನಂತರ ಉಳಿಯುವ ಹಣವನ್ನು ಒಂದು ಟ್ರಸ್ಟ್ ಸ್ಥಾಪನೆ ಮಾಡಿ ವಿನಿಯೋಗಿಸಿದಲ್ಲಿ ಎಲ್ಲಾ ಕೊಡವ ಕುಟುಂಬಗಳು ಹಾಕಿ ಹಬ್ಬವನ್ನು ಆಚರಿಸಲು ನೆರವಾಗುತ್ತದೆ ಎಂದು ಸಲಹೆ ನೀಡಿದರು. ಹಾಕಿ ಹಬ್ಬಕ್ಕೆ ಸರಕಾರದಿಂದ ಅನುದಾನ ದೊರೆಯು ತ್ತದೆ ಎಂದರು.

ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಹಾಗೂ ಒಲಂಪಿ ಯನ್ ಡಾ. ಅಂಜಪರವAಡ ಬಿ. ಸುಬ್ಬಯ್ಯ ಕ್ರೀಡಾಕೂಟದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿ ಹಾಕಿ ಟೂರ್ನಮೆಂಟ್‌ನ ಆಯೋಜನೆ ಜವಾಬ್ದಾರಿಯುತವಾಗಿದ್ದು ಪ್ರತಿ ಬಾರಿ ಸಣ್ಣಪುಟ್ಟ ಲೋಪದೋಷಗಳು ಉಂಟಾಗುವುದು ಸಹಜ. ಹಿಂದಿನ ವರ್ಷಗಳಲ್ಲಿ ಘಟಿಸಿದ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸಿ ಪಂದ್ಯಾಟ ಆಯೋಜಿಸಬೇಕು ಎಂದರು.

ಸಭಾ ಕಾರ್ಯಕ್ರಮದ ಉದ್ಘಾ ಟನೆ ಕೊಳಕೇರಿ ಗ್ರಾಮ ಅಭಿವೃದ್ಧಿ ಸಂಘದ ಅಧ್ಯಕ್ಷ ಕೇಟೋಳಿರ ಎಸ್ ಕುಟ್ಟಪ್ಪ ಉದ್ಘಾಟಿಸಿದರು. ಕುಟುಂಬದ ಪಟ್ಟೆದಾರ ಸುಬ್ಬಯ್ಯ, ಹಾಕಿ ಕ್ರೀಡಾ ಸಮಿತಿ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಕಾರ್ಯಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ, ಈ ಹಿಂದೆ ಕೌಟುಂಬಿಕ ಹಾಕಿ ಹಬ್ಬ ಆಯೋ ಜಿಸಿದ್ದ ಬಿದ್ದಾಟಂಡ ತಮ್ಮಯ್ಯ, ಕುಲ್ಲೇ ಟೀರ ಅರುಣ್ ಬೇಬ, ಅಪ್ಪಚೆಟ್ಟೋ ಳಂಡ ಮನು ಮುತ್ತಪ್ಪ ತಮ್ಮ ಅನು ಭವ ಮತ್ತು ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮುಂದಿನ ವರ್ಷ ಹಾಕಿ ಉತ್ಸವ ಆಯೋಜಿಸುವ ಕುಟುಂಬದ ಪ್ರಮುಖರಾದ ಮಡಿಕೇರಿಯ ಮುದ್ದಂಡ ದೇವಯ್ಯ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವ ಕುಮಾರ್ ಇದ್ದರು.

ಪೆಬ್ಬೆಟ್ಟಿರ ವೀಣಾ ಗಣಪತಿ ಪ್ರಾರ್ಥಿಸಿ, ಕ್ರೀಡಾ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ಸ್ವಾಗತಿಸಿದರು. ಖಜಾಂಜಿ ವಿಶು ಪೂವಯ್ಯ ಮತ್ತು ನಯನ ಬಿಪಿನ್ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಮುತ್ತಪ್ಪ ವಂದಿಸಿದರು.