ಮಡಿಕೇರಿ, ಡಿ. ೩೦: ನಗರದ ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ಅಯ್ಯಪ್ಪ ದೀಪಾರಾಧನಾ ಉತ್ಸವ ನಗರದ ಮುತ್ತಪ್ಪ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ನಡೆ ತೆಗೆಯುವುದು, ನಿರ್ಮಲ್ಯ ಪೂಜೆ, ಗಣಪತಿ ಹೋಮ, ಅಷ್ಟಾಭಿಷೇಕ ಸೇವೆ, ಭಕ್ತರೊಡಗೂಡಿ ತುಳಸಿ ಸಹಸ್ರ ನಾಮಾರ್ಚನೆ, ಮಹಾಪೂಜೆ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಮಧ್ಯಾಹ್ನ ಪಾಲಕೊಂಬು ಪ್ರತಿಷ್ಠಾಪನೆ, ತಾಯಂಬಕA (ಚಂಡೆ ಸೇವೆ) ನಡೆದು, ಸಂಜೆ ಅಶ್ವಿನಿ ಗಣಪತಿ ದೇವಾಲಯದಿಂದ ಅಲಂಕೃತ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು ಒಳಗೊಂಡು ಪಾಲಕೊಂಬು ಮೆರವಣಿಗೆ ಚಂಡೆ ಮೇಳದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಸಾಗಿತು.

ಬಳಿಕ ದೀಪಾರಾಧನೆ, ಅಲಂಕಾರ ಪೂಜೆ, ಪಡಿರಂಗ ಪೂಜೆ, ದುರ್ಗಾ ಪೂಜೆ, ಸುಬ್ರಹ್ಮಣ್ಯ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ, ರಾತ್ರಿ ೧೨ ಗಂಟೆಯಿAದ ೨ ಗಂಟೆಯವರೆಗೆ ಅಗ್ನಿಪೂಜೆ, ೨ ಗಂಟೆಯಿAದ ಬೆಳಿಗ್ಗೆ ೫ರವರೆಗೆ ಪೊಲಿಪಾಟ್, ಪಾಲ್ಕಿಂಡಿ ತಿರಿ ಉಳಿಚಲ್ ವೆಟ್ಟು ತಡವುಂ ಬೆಳಿಗ್ಗೆ ೫.೩೦ ಗಂಟೆಗೆ ಅಗ್ನಿಕುಂಡ ಹಾಯುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.