ಮಡಿಕೇರಿ, ಡಿ. ೨೯: ಕೊಡವ ಜನಾಂಗದ ಇತಿಹಾಸದಲ್ಲಿ ಪ್ರಪ್ರಥಮ ಪ್ರಯತ್ನ. ಕೊಡಗು ಸೇರಿದಂತೆ ಜಗತ್ತಿನಾದ್ಯಂತ ಇರುವ ಜನಾಂಗದವರನ್ನು ಒಂದಾಗಿ ಬೆಸೆಯುವಂತೆ ಮಾಡುವುದು, ಕೊಡಗು ಜಿಲ್ಲೆಯೊಂದಿಗೆ ಕೊಡವರಿಗಿರುವ ಅವಿನಾಭಾವ ಸಂಬAಧ, ವಿಶಿಷ್ಟವಾದ ಆಚಾರ - ವಿಚಾರ ಪದ್ಧತಿ, ಪರಂಪರೆಗಳನ್ನು ಈ ಹಿಂದಿನAತೆ ಪೋಷಿಸಿ ಮುಂದಿನ ಪೀಳಿಗೆಗೂ ಪರಿಚಯಿಸಿ ಇದನ್ನು ಉಳಿಸಿ - ಬೆಳೆಸುವ ಪರಿಕಲ್ಪನೆಯೊಂದಿಗೆ ಕೊಡಗು ಜಿಲ್ಲಾ ಕೇಂದ್ರ ಮಂಜಿನ ನಗರಿ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಕೊಡವ ಸಮ್ಮೇಳನ (ಗ್ಲೋಬಲ್ ಕೊಡವ ಸಮ್ಮಿಟ್) ಇಂದು ನಗರದಲ್ಲಿ ಆಕರ್ಷಿಸಲ್ಪಟ್ಟಿತು.
ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ನ ಪರಿಕಲ್ಪನೆಯ ಚೊಚ್ಚಲ ವಿಶ್ವ ಕೊಡವ ಸಮ್ಮೇಳನ, ಆಯೋಜಕರ ಪ್ರಯತ್ನಕ್ಕೆ ಜನಾಂಗದ ಜನರು ಬೆಂಬಲ ವ್ಯಕ್ತಪಡಿಸುವದರೊಂದಿಗೆ ನಿರೀಕ್ಷಿತ ಯಶಸ್ಸು ಕಂಡಿತು. ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಪುರುಷರು, ಮಹಿಳೆಯರು, ಯುವಕ - ಯುವತಿಯರು ನಗರದ ನೂತನ ಖಾಸಗಿ ಬಸ್ನಿಲ್ದಾಣದಲ್ಲಿ ಜಮಾಯಿಸಿ ಅಲ್ಲಿಂದ ಕಾರ್ಯಕ್ರಮ ನಿಗದಿಯಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಮೆರವಣಿಗೆಯಲ್ಲಿ ಸಾಗಿದರು. ಕೊಂಬ್ಕೊಟ್ಟ್ ವಾಲಗ, ದುಡಿಕೊಟ್ಟ್ ಪಾಟ್ ಸಹಿತವಾಗಿ ಹರ್ಷೋದ್ಗಾರದೊಂದಿಗೆ ಕಾವೇರಿ ಹಾಲ್, ಕಾನ್ವೆಂಟ್ ಜಂಕ್ಷನ್, ವಿಜಯ ವಿನಾಯಕ ದೇಗುಲ ಮಾರ್ಗವಾಗಿ ಮೆರವಣಿಗೆ ಸಾಗಿ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿನ ಭವ್ಯ ಸಭಾಂಗಣದಲ್ಲಿ ಸಮಾಪನಗೊಂಡಿತು.
ಮೆರವಣಿಗೆಯಲ್ಲಿ ಈ ಬಾರಿಯ ವಿಶೇಷವೆಂಬAತೆ ವಿವಿಧ ಕೊಡವ ಮನೆತನಗಳ ಧ್ವಜಗಳು ಹಾರಾಡಿದವು. ಆಯಾ ಕುಟುಂಬಗಳವರು ತಮ್ಮ ಕುಟುಂಬದ ಹೆಸರಿನ ಧ್ವಜ ಹಿಡಿದು ಸಾಗಿದರು. ಆಯೋಜಕರೇ ಧ್ವಜಗಳನ್ನು ವ್ಯವಸ್ಥೆ ಮಾಡಿದ್ದರೆ, ಇತರ ಹಲವು ಕುಟುಂಬಸ್ಥರು, ತಮ್ಮ ಊರು, ಮನೆ ಹೆಸರಿನ ಬ್ಯಾನರ್, ಫ್ಲೆಕ್ಸ್ ಸಹಿತವಾಗಿ ಪಾಲ್ಗೊಂಡು ಪ್ರಥಮ ಬಾರಿಗೆ ಜರುಗಿದ ವಿಶ್ವ ಕೊಡವ ಸಮ್ಮೇಳನದ ಕನಸ್ಸಿಗೆ ಸಹಕಾರ ನೀಡಿದರು.
ಆಕರ್ಷಕ ಐನ್ಮನೆ
ಕಾಲೇಜು ಗೇಟ್ನ ಮೂಲಕ ಮೈದಾನಕ್ಕೆ ಹತ್ತುವ ಮೆಟ್ಟಿಲಿನ ಎದುರು ನಿರ್ಮಿಸಲಾಗಿರುವ ಕೊಡವ ಐನ್ಮನೆ ವಿಶೇಷವಾಗಿ ಗಮನ ಸೆಳೆಯಿತು. ಪುರಾತನ ಕಾಲದ ಐನ್ಮನೆಯ ಮಾದರಿಯನ್ನು ದೊಡ್ಡದಾದ ಐನ್ಮನೆಯ ರೀತಿಯಲ್ಲೇ ನಿರ್ಮಿಸಲಾಗಿದೆ. ಇದರ ಉದ್ಘಾಟನೆ ಬೆಳಿಗ್ಗೆ ಪೂಜೆ ಹಾಗೂ ಆಗಸಕ್ಕೆ ಗುಂಡು ಹಾರಿಸುವ ಮೂಲಕ ನೆರವೇರಿತು. ಐನ್ಮನೆ ಪ್ರವೇಶಿಸಿದ ಬಳಿಕ ಒಳಭಾಗದಲ್ಲಿ ಪುರಾತನ ಕಾಲದಿಂದ
(ಮೊದಲ ಪುಟದಿಂದ) ಬಳಸಲ್ಪಡುತ್ತಿದ್ದ ವಿವಿಧ ಪರಿಕರಗಳನ್ನು ಜೋಡಿಸಿ ನಿರ್ಮಿಸಲಾಗಿರುವ ಮ್ಯೂಸಿಯಂ ನೋಡುಗರ ಗಮನ ಸೆಳೆಯಿತು.
ಇದನ್ನು ಹಾಯ್ದು ಮುಂದೆ ಸಾಗಿದಾಗ ಅಲ್ಲಿ ಕೊಡಗಿನ - ಕೊಡವ ಮನೆತನದ ವಿವಿಧ ನಾಡ್ಗಳ ಹೆಸರು ನಾಡ್ ವ್ಯಾಪ್ತಿಯ ಗ್ರಾಮಗಳು ಆಯಾನಾಡ್ನ ವ್ಯಾಪ್ತಿಯ ಕುಟುಂಬಗಳು, ಅಲ್ಲಿನ ತಕ್ಕ ಕುಟುಂಬ, ಅರುವ ಕುಟುಂಬಗಳ ಹೆಸರು ಸಹಿತವಾಗಿ ಬೃಹತ್ ಫ್ಲೆಕ್ಸ್ಗಳ ಮೂಲಕ ಸಮಗ್ರ ಚಿತ್ರಣವನ್ನು ನೀಡಲಾಗಿರುವುದು, ವಿಶೇಷವಾಗಿ ಗಮನ ಸೆಳೆಯಿತು.
ಮೈದಾನದಲ್ಲಿ ಭವ್ಯ ವೇದಿಕೆ, ಸಭಾಂಗಣದೊAದಿಗೆ ಮೈದಾನದ ಸುತ್ತಲೂ ವಿವಿಧ ಮಳಿಗೆಗಳನ್ನು ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ವಿವಿಧ ಬಗೆಯ ತಿಂಡಿ ತಿನಿಸುಗಳು, ಒಟ್ಟಿ, ಕಡ್ಂಬುಟ್ಟ್, ಚೆಕ್ಕೆಕರಿ, ಪಂದಿಕರಿ, ಕೇಂಬು ಕರಿ ಮತ್ತಿತರ ಖಾದ್ಯಗಳು ನೆರೆದಿದ್ದವರಿಗೆ ರಸದೌತಣ ನೀಡುತ್ತಿವೆ.
ತೆಂಗೆಬೊಡಿ
ಈ ವ್ಯವಸ್ಥೆಗಳು ಒಂದೆಡೆ ಯಾದರೆ ಮುಖ್ಯ ವೇದಿಕೆಯ ಹಿಂಭಾಗದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಮೊದಲ ದಿನ ಆಯೋಜಿಸಲಾಗಿದ್ದು, ಅಧಿಕ ಸಂಖ್ಯೆಯ ಸ್ಪರ್ಧಿಗಳು ‘ಶೂಟಿಂಗ್’ ಸ್ಪರ್ಧೆಯಲ್ಲಿ ಭಾಗಿಗಳಾಗಿದ್ದರು. .೨೨, ಏರ್ಗನ್, ೧೨ನೇ ಬೋರ್ ವಿಭಾಗದಲ್ಲಿ ಸ್ಪರ್ಧೆ ನಡೆದು ಪುರುಷರು, ಮಹಿಳೆಯರು, ಯುವಕ - ಯುವತಿಯರು ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿದ್ದರು. ಆರಂಭದಲ್ಲಿ ತಪ್ಪಡ್ಕ ಕಟ್ಟಿ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯವೇದಿಕೆಯಲ್ಲಿ ಸಭಾ ಕಾರ್ಯಕ್ರಮದ ಬಳಿಕ ವಿವಿಧ ವಿಚಾರಗಳ ಕುರಿತು ವಿಚಾರಗೋಷ್ಠಿಗಳು ನಡೆಯಿತು. ಮುಖ್ಯವಾಗಿ ಆರೋಗ್ಯ ರಕ್ಷಣೆ - ಸುಧಾರಣೆ, ಲ್ಯಾಂಡ್ಬ್ಯಾAಕ್ ಹಾಗೂ ಕೃಷಿ ಸಮಾವೇಶ, ದೇಶತಕ್ಕಂಗಡ ಕೂಡ ಮೋಪು ಕೂಟ ಹಾಗೂ ವಾಣಿಜ್ಯ ಸಮಾವೇಶ ಇಂದಿನ ಪ್ರಮುಖ ಅಂಶವಾಗಿತ್ತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಪದಾಧಿಕಾರಿಗಳು, ವಿವಿಧ ಕೊಡವ ಸಮಾಜ ಸಂಘ - ಸಂಸ್ಥೆಗಳ ಪ್ರಮುಖರು ಸೇರಿದಂತೆ ಬೆಂಗಳೂರು, ಮೈಸೂರು ಮತ್ತಿತರೆಡೆಗಳಲ್ಲಿ ನೆಲೆಸಿರುವ ಜನಾಂಗದವರು, ವಿದೇಶದಲ್ಲಿರುವ ಕೆಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.
ಚಿತ್ರ, ವರದಿ : ಕಾಯಪಂಡ ಶಶಿ ಸೋಮಯ್ಯ, ರಾಕೇಶ್ ಹೆಚ್.ಜೆ., ಪುತ್ತರೀರ ಕರುಣ್ ಕಾಳಯ್ಯ, ಲೋಕೇಶ್ ಕಾಟಕೇರಿ.