ಶನಿವಾರಸಂತೆ, ಡಿ. ೨೯: ಪಟ್ಟಣದ ನೇಟಿವ್ ಕ್ರಿಕೆಟರ್ಸ್ ವತಿಯಿಂದ ತೃತೀಯ ವರ್ಷದ ವಲಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಭಾರತಿ ವಿದ್ಯಾಸಂಸ್ಥೆಯ ಕ್ರೀಡಾ ಮೈದಾನದಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಅಪ್ಪು ಕ್ರಿಕೆಟರ್ಸ್ ತಂಡ ಮುಡಿಗೇರಿಸಿಕೊಂಡಿತು. ದ್ವಿತೀಯ ಬಹುಮಾನ ನೈನ್ ಸ್ಟಾರ್ಸ್ ತಂಡ, ತೃತೀಯ ಬಹುಮಾನ ಮುಂಬೈ ಸುಲ್ತಾನ್ಸ್ ತಂಡ ಹಾಗೂ ಸಮಾಧಾನಕರ ಬಹುಮಾನ ಜಿಬಿಸಿಸಿ ತಂಡ ಗಳಿಸಿತು.
ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್ ಮಾತನಾಡಿ, ಕ್ರೀಡೆ, ಕ್ರೀಡಾಕೂಟಗಳು ಮನುಷ್ಯ-ಮನುಷ್ಯರ ನಡುವೆ ಜಾತೀಯತೆಯ ಸಂಕುಚಿತ ಮನೋಭಾವಗಳನ್ನು ಹೋಗಲಾಡಿಸಿ, ಬಾಂಧವ್ಯ ಬೆಸೆದು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿದೆ. ಕ್ರೀಡಾಕೂಟಗಳಿಂದ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಹರೀಶ್, ಶಾಹಿದ್ ಖಾನ್, ಲೋಕೇಶ್, ಧನುಶೇಖರ್, ಮೆಕ್ಯಾನಿಕ್ ಬಾಬು, ಮುನಾಫ್ ಪಾಷ, ಖದೀರ್ ಪಾಷ ಹಾಗೂ ಜಾಹಿದ್ ಉಪಸ್ಥಿತರಿದ್ದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪಂದ್ಯಾವಳಿಯಲ್ಲಿ ಹೋಬಳಿ ವ್ಯಾಪ್ತಿಯ ೪ ತಂಡಗಳ ಕ್ರೀಡಾಪಟುಗಳಾದ ಅಮ್ಜಾದ್ ಖಾನ್, ಹರೀಶ್, ಯಾಸೀನ್, ಜಾನಿ, ಸುಕೇಶ್, ಶರೀಫ್, ಜಗದೀಶ್, ತಸ್ಲೀಮ್ ಪಾಶ, ರಾಹುಲ್, ಅಶ್ರಫ್, ವಿನಯ್, ರಬ್ಬಾನಿ, ಪ್ರವೀಣ್, ರಸೂಲ್, ಮಧು, ಜಾಫರ್, ಆದರ್ಶ, ಅಲ್ತಾಫ್, ಮಹೇಶ್, ಅಪ್ಸರ್, ಕಿರಣ್, ಸಾಗರ್, ನಿವಾಸ್, ಸಂತೋಷ್, ಧನು, ಹಯನ್, ಅಜಯ್, ಮುಬ್ಬು, ಅಡ್ಡು, ಆಶೀಕ್, ಆಜ್ನೆöÊನ್, ಸುಜನ್, ಸಚಿತ್, ಸುಜಿತ್ ಪಾಲ್ಗೊಂಡಿದ್ದರು.