ಗೋಣಿಕೊಪ್ಪ ವರದಿ, ಡಿ. ೨೯: ಭಾರತ ಸರ್ಕಾರ ಗೃಹ ಮಂತ್ರಾಲಯ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಜಿಲ್ಲಾ ಯುವ ಒಕ್ಕೂಟ, ಕೂರ್ಗ್ ಪಬ್ಲಿಕ್ ಶಾಲೆ ಮತ್ತು ಪ್ರೀ ಯೂನಿವರ್ಸಿಟಿ ಕಾಲೇಜು ಸಹಯೋಗದಲ್ಲಿ ತಾ. ೩೧ ರವರೆಗೆ ಗೋಣಿಕೊಪ್ಪ ಕಾಪ್ಸ್ ಶಾಲೆಯಲ್ಲಿ ಆಯೋಜಿಸಿರುವ ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನೆಹರು ಯುವ ಕೇಂದ್ರ ದಕ್ಷಿಣ ಭಾರತ ವಲಯ ನಿರ್ದೇಶಕ ಎಂ.ಎನ್. ನಟರಾಜ್, ಕೂರ್ಗ್ ಅಕಾಡೆಮಿ ಫಾರ್ ಎಜುಕೇಷನ್ ಆ್ಯಂಡ್ ಕಲ್ಚರ್ ಅಧ್ಯಕ್ಷ ಎಂ.ಡಿ. ನಂಜುAಡ ದೀಪ ಬೆಳಗಿಸಿ ಉದ್ಘಾಟಿಸಿದರು. ಎಂ.ಎನ್. ನಟರಾಜ್ ಮಾತನಾಡಿ, ಭಾರತ ವಿಶ್ವದಲ್ಲಿಯೇ ಹೆಚ್ಚು ಯುವ ಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, ಯುವಕರ ಸಂಖ್ಯೆಯೆ ಹೆಚ್ಚಿರುವುದರಿಂದ ಯುವ ವಯಸ್ಸಿನ ಮಿತಿಯನ್ನು ೧೫ ರಿಂದ ೨೯ಕ್ಕೆ ಮೀಸಲಿಡಲಾಗಿದೆ. ಇದಕ್ಕೆ ಪೂರಕ ಯೋಜನೆ ರೂಪಿಸಲಾಗಿದೆ ಎಂದರು. ಜಮ್ಮು-ಕಾಶ್ಮೀರದ ಪುಲ್ವಾಮ, ಬದಗಾಂ, ಬಾರಮುಲ್ಲ, ಕುಪ್ವಾರ, ಅನಂತ್ನಾಗ್, ಶ್ರೀನಗರ ಜಿಲ್ಲೆಗಳ ೧೨೦ ಯುವಕ, ಯುವತಿಯರನ್ನು ಬರಮಾಡಿಕೊಳ್ಳಲಾಯಿತು.
ಎಂ.ಡಿ. ನಂಜುAಡ ಮಾತನಾಡಿ, ದೇಶದ ಕಲೆ, ಸಂಸ್ಕೃತಿ ವಿನಿಮಯಕ್ಕೆ ಆತಿಥ್ಯ ವಹಿಸಿರುವುದು ಹೆಮ್ಮೆಯ ವಿಚಾರ ಎಂದರು. ಪ್ರಾಂಶುಪಾಲ ಡಾ. ರಾಮಚಂದ್ರನ್, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಸುಕುಮಾರ್, ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಆಪಟ್ಟೀರ ಟಾಟು ಮೊಣ್ಣಪ್ಪ, ಸಲಹೆಗಾರ ಕಂದಾ ದೇವಯ್ಯ, ಅಧಿಕಾರಿ ಲೋಹಿತ್ ಕಲ್ರ ಇದ್ದರು. ಮಾನಸ ತಿಮ್ಮಯ್ಯ ಸ್ವಾಗತಿಸಿದರು. ಟೀನಾ ಮಾಚಯ್ಯ ಪ್ರಾರ್ಥಿಸಿದರು.