(ಚಿತ್ರ ವರದಿ, ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಡಿ.೨೮: ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ಅಂಜಿಗೇರಿ ನಾಡ್ ಕೂಟ ವತಿಯಿಂದ ಆಯೋಜಿಸ ಲಾಗಿದ್ದ ಅಂಜಿಗೇರಿ ಕೊಡವ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಚೆಪ್ಪುಡಿರ ತಂಡ ಚೇಂದAಡ ತಂಡದ ವಿರುದ್ಧ ೪-೧ ಗೋಲುಗಳಿಂದ ಜಯಭೇರಿ ಬಾರಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಚೇಂದAಡ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಕ್ರೀಡಾಭಿಮಾನಿಗಳ ನಡುವೆ ನಡೆದ ರೋಚಕ ಪಂದ್ಯದಲ್ಲಿ ಚೆಪ್ಪುಡಿರ ತಂಡದ ಪರ ಪ್ರಣವ್ ತಿಮ್ಮಯ್ಯ ಪಂದ್ಯದ ಪ್ರಥಮಾರ್ಧದಲ್ಲಿ ೧ ಗೋಲುಗಳಿಸಿ ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದ ಪ್ರಾರಂಭದಲ್ಲೇ ಅಂತರರಾಷ್ಟಿçÃಯ ಆಟಗಾರ ಚೇಂದAಡ ನಿಕಿನ್ ತಿಮ್ಮಯ್ಯ ಗೋಲು ಬಾರಿಸಿ ಗೋಲು ಸಮಗೊಳಿಸಿದರು.
ನಂತರ ಚುರುಕಿನ ಆಟಕ್ಕೆ ಮುಂದಾದ ಚೆಪ್ಪುಡಿರ ತಂಡ ಒಂದರ ಮೇಲೊಂದರAತೆ ೩ ಗೋಲು ಗಳಿಸುವ ಮೂಲಕ ಮುನ್ನಡೆ ಕಾಯ್ದುಕೊಂಡಿತು.
(ಮೊದಲ ಪುಟದಿಂದ) ಚೇಂದAಡ ಆಟಗಾರರು ಗೋಲು ಗಳಿಸಲು ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಚೆಪ್ಪುಡಿರ ತಂಡ ಗೆಲುವಿನ ನಗೆ ಬೀರಿತು. ಚೆಪ್ಪುಡಿರ ಪರ ಪ್ರಣವ್ ತಿಮ್ಮಯ್ಯ ೨ ಗೋಲು ಗಳಿಸಿ ಮಿಂಚಿದರೆ, ಚೇತನ್ ಚಿಣ್ಣಪ್ಪ, ನರೇನ್ ಕಾರ್ಯಪ್ಪ ತಲಾ ಒಂದೊAದು ಗೋಲು ಗಳಿಸಿದರು.
ಚೇಂದAಡ ಪರ ನಿಕಿನ್ ತಿಮ್ಮಯ್ಯ ಏಕೈಕ ಗೋಲು ಬಾರಿಸಿದರು. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪೆಮ್ಮಂಡ ತಂಡದ ವಿರುದ್ಧ ಚೆಪ್ಪುಡಿರ ತಂಡ ೩-೧ ಗೋಲುಗಳ ಅಂತರದ ಜಯಗಳಿಸಿ ಫೈನಲ್ಗೆ ಲಗ್ಗೆ ಇಟ್ಟರೆ, ನೆಲ್ಲಮಕ್ಕಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿದ ಚೇಂದAಡ ತಂಡ ಫೈನಲ್ ಪ್ರವೇಶಿಸಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎರಡು ಮಹಿಳಾ ತಂಡಗಳಾದ ಪೊಂಬೊಳ್ಚ ಹಾಗೂ ಗೆಜ್ಜೆತಂಡ್ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಪೊಂಬೊಳ್ಚ ಪ್ರಥಮ ಸ್ಥಾನ ಹಾಗೂ ಗೆಜ್ಜೆತಂಡ್ ದ್ವೀತಿಯ ಸ್ಥಾನ ಪಡೆಯಿತು.
ಬಹುಮಾನ ವಿತರಣೆ
ಪ್ಲೇಯರ್ ಅಪ್ ದ ಟೂರ್ನಮೆಂಟ್ ಆಗಿ ಪೆಮ್ಮಂಡ ಸೋಮಣ್ಣ, ಬೆಸ್ಟ್ ಅಪ್ ಕಮಿಂಗ್ ಪ್ಲೇಯರ್ ಆಗಿ ನೆಲ್ಲಮಕ್ಕಡ ಡ್ಯೂಕ್ ದೇವಯ್ಯ, ಹೈಯೆಸ್ಟ್ ಗೋಲ್ ಸ್ಕೋರರ್ ಆಗಿ ಚೆಪ್ಪುಡಿರ ಪ್ರಣವ್ ತಿಮ್ಮಯ್ಯ, ಬೆಸ್ಟ್ ಗೋಲ್ ಕೀಪರ್ ಆಗಿ ಚೆಪ್ಪುಡಿರ ಮ್ಯಾಂಡಿ ಮಂದಣ್ಣ, ಬೆಸ್ಟ್ ವುಮೆನ್ ಪ್ಲೇಯರ್ ಆಗಿ ಮುಕ್ಕಾಟಿರ(ಕಡಗದಾಳು) ಕಾವ್ಯ ಪ್ರಶಸ್ತಿ ಪಡೆದುಕೊಂಡರು.
ಅAಜಿಗೇರಿ ನಾಡ್ ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಆರು ದಿನಗಳ ಪಂದ್ಯಾವಳಿಯಲ್ಲಿ ಎರಡು ಮಹಿಳಾ ತಂಡಗಳು ಸೇರಿದಂತೆ ೭೮ ತಂಡಗಳು ಪ್ರದರ್ಶನ ನೀಡಿದ್ದವು. ಸೆವೆನ್ ಎ ಸೈಡ್ ನಲ್ಲಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.
ಅಂಜಿಗೇರಿ ನಾಡ್ ಕೂಟದ ಅಧ್ಯಕ್ಷ ಚೆಂಗುಲAಡ ಅಜಿತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರ ತಂಡ ಕಾರ್ಯಕ್ರಮ ಯಶಸ್ಸಿಗಾಗಿ ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಊರಿನ ಜನರು ಸಹಾಯ ಹಸ್ತ ನೀಡುವ ಮೂಲಕ ಯಶಸ್ವಿಗೆ ಕಾರಣರಾಗಿದ್ದಾರೆ. ಅಂಜಿಗೇರಿ ನಾಡ್ ತಕ್ಕರು, ಊರ್ ತಕ್ಕರು ನೀಡಿದ ಸಹಕಾರ ಸ್ಮರಣೀಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಜ್ಯೋತಿ ಬೆಳಗಿಸುವ ಮೂಲಕ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಂಡೋವಿ ಮೋಟಾರ್ಸ್ನ ಉಪಾಧ್ಯಕ್ಷರಾದ ಪುಡಿಯಂಡ ಗಣಪತಿ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆಗೆ ವಿಶೇಷವಾದ ಗೌರವವಿದೆ. ರಾಷ್ಟ್ರ ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಕೊಡಗಿನ ಆಟಗಾರರು ಗಮನ ಸೆಳೆಯುವಂತಾಗಬೇಕು. ಇದರಿಂದ ಯುವಕರಿಗೆ ಹಾಕಿ ಕ್ರೀಡೆಯಲ್ಲಿ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಆ ನಿಟ್ಟಿನಲ್ಲಿ ಅಂಜಿಗೇರಿ ನಾಡ್ ಕೂಟ ಕಳೆದ ಹಲವು ವರ್ಷಗಳಿಂದ ಉತ್ತಮ ಕ್ರೀಡೆ ನಡೆಸುತ್ತಾ ಬಂದಿದೆ. ಇನ್ನೂ ಮುಂದೆಯೂ ಹಾಕಿ ಕ್ರೀಡೆಗೆ ಉತ್ತೇಜನ ಸಿಗುವಂತಾಬೇಕು ಎಂದರು. ಅಂಜಿಗೇರಿ ನಾಡ್ ಕೂಟದ ಪ್ರಮುಖರಾದ ಚಕ್ಕೇರ ಚಂದ್ರಪ್ರಕಾಶ್ ಕೊಡಗು ದೇಶದ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಡ್ ತಕ್ಕರಾದ ಚೆಕ್ಕೇರ ರಾಜೇಶ್ ಮಾತನಾಡಿ ಕೊಡವ ಪದ್ಧತಿ ಪರಂಪರೆ, ಆಚಾರ, ವಿಚಾರ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಕ್ರೀಡೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಆ ನಿಟ್ಟಿನಲ್ಲಿ ಅಂಜಿಗೇರಿ ನಾಡ್ನ ಯುವಕರು ಒಟ್ಟಾಗಿ ಸೇರಿ ಉತ್ತಮ ಪ್ರಯತ್ನ ನಡೆಸಿ ಕಳೆದ ೨ ವರ್ಷಗಳಿಂದ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಎಲ್ಲಾರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ಹುದಿಕೇರಿ ಜನತಾ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಮೋಹನ್ ಕುಮಾರಿ, ದಾನಿಗಳಾದ ಕಟ್ಟೆರ ವಿಶ್ವನಾಥ್ ಮಾತನಾಡಿದರು.
ವೇದಿಕೆಯಲ್ಲಿ ದಾನಿಗಳಾದ ಕೈಬಿಲಿರ ಪಾರ್ವತಿ ಬೋಪಯ್ಯ, ದಾನಿಗಳಾದ ಬಯವಂಡ ಮಹಾಬಲ, ನೆಲ್ಲಮಕ್ಕಡ ಶಂಕಿ, ಚೆಕ್ಕೇರ ಮಾದಪ್ಪ, ಟಿಟಿಪಿ ಕಾಫಿ ಮಾಲೀಕರಾದ ತೀತರಮಾಡ ಪ್ರಭು ನಾಡ್ ತಕ್ಕರಾದ ಚೆಕ್ಕೇರ ರಾಜೇಶ್,ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಊರ್ ತಕ್ಕರಾದ ಬೊಳ್ಳಜೀರ ನಂಜಪ್ಪ, ಬಾನಂಗಡ ರಾಜಶೇಖರ್, ಕೋಳೆರ ನರೇಂದ್ರ, ಮಲ್ಚೀರ ಬೋಜಪ್ಪ, ಕಳ್ಳಿಚಂಡ ಸೊನ್ನಪ್ಪ, ಪೆಮ್ಮಂಡ ಅರುಣ ಉಪಸ್ಥಿತರಿದ್ದರು.
ನೂರೇರ ಜೀವನ್ ಪ್ರಾರ್ಥಿಸಿ, ಮಾಳೇಟಿರ ಶ್ರೀನಿವಾಸ್, ನೆರ್ಪಂಡ ಹರ್ಷ ಮಂದಣ್ಣ ನಿರೂಪಿಸಿ, ಅಂಜಿಗೇರಿ ನಾಡ್ ಕೂಟ ಸದಸ್ಯರಾದ ಚೆಕ್ಕೇರ ಚಂದ್ರ ಪ್ರಕಾಶ್ ಸ್ವಾಗತಿಸಿ, ವಂದಿಸಿದರು. ಸುತ್ತಮುತ್ತಲಿನ ಗ್ರಾಮದ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದ ತಿಂಗಕೋರ್ ಮೊಟ್ಟ್ ತಂಡದ ಸದಸ್ಯರಿಂದ ಕೋಲಾಟ್ ಹಾಗೂ ಯುವತಿಯರಿಂದ ನಡೆದ ಕೊಡವ ನೃತ್ಯ ಕ್ರೀಡಾಭಿಮಾನಿಗಳನ್ನು ರಂಜಿಸಿತು.
ತೀರ್ಪುಗಾರರಾಗಿ ಬುಟ್ಟಿಯಂಡ ಚೆಂಗಪ್ಪ, ಚಂದಪ್ಪAಡ ಆಕಾಶ್, ಸಣ್ಣುವಂಡ ಲೋಕೇಶ್ ನಂಜಪ್ಪ, ಬೊಟ್ಟಂಗಡ ಕೌಶಿಕ್, ಕುಪ್ಪಂಡ ದಿಲನ್, ಕರವಂಡ ಅಪ್ಪಣ್ಣ, ನೆಲ್ಲಮಕ್ಕಡ ಪವನ್, ಸುಳ್ಳಿಮಾಡ ಸುಬ್ಬಯ್ಯ, ಕೋಡಿಮಣಿಯಂಡ ಗಣಪತಿ, ಬೊಳ್ಳಚಂಡ ನಾಣಯ್ಯ, ಪಟ್ರಪಂಡ ಮ್ಯಾಂಡಿ ಮಂದಣ್ಣ, ಚೋಯಮಾಡಂಡ ಚೆಂಗಪ್ಪ, ಅಂಜಪರವAಡ ಕುಶಾಲಪ್ಪ ಕಾರ್ಯನಿರ್ವಹಿಸಿದರು.
ಕಳ್ಳಿಚಂಡ ಸೊನ್ನಪ್ಪ, ಪೆಮ್ಮಂಡ ಅರುಣ ಉಪಸ್ಥಿತರಿದ್ದರು.
ನೂರೇರ ಜೀವನ್ ಪ್ರಾರ್ಥಿಸಿ, ಮಾಳೇಟಿರ ಶ್ರೀನಿವಾಸ್, ನೆರ್ಪಂಡ ಹರ್ಷ ಮಂದಣ್ಣ ನಿರೂಪಿಸಿ, ಅಂಜಿಗೇರಿ ನಾಡ್ ಕೂಟ ಸದಸ್ಯರಾದ ಚೆಕ್ಕೇರ ಚಂದ್ರ ಪ್ರಕಾಶ್ ಸ್ವಾಗತಿಸಿ, ವಂದಿಸಿದರು. ಸುತ್ತಮುತ್ತಲಿನ ಗ್ರಾಮದ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದ ತಿಂಗಕೋರ್ ಮೊಟ್ಟ್ ತಂಡದ ಸದಸ್ಯರಿಂದ ಕೋಲಾಟ್ ಹಾಗೂ ಯುವತಿಯರಿಂದ ನಡೆದ ಕೊಡವ ನೃತ್ಯ ಕ್ರೀಡಾಭಿಮಾನಿಗಳನ್ನು ರಂಜಿಸಿತು.
ತೀರ್ಪುಗಾರರಾಗಿ ಬುಟ್ಟಿಯಂಡ ಚೆಂಗಪ್ಪ, ಚಂದಪ್ಪAಡ ಆಕಾಶ್, ಸಣ್ಣುವಂಡ ಲೋಕೇಶ್ ನಂಜಪ್ಪ, ಬೊಟ್ಟಂಗಡ ಕೌಶಿಕ್, ಕುಪ್ಪಂಡ ದಿಲನ್, ಕರವಂಡ ಅಪ್ಪಣ್ಣ, ನೆಲ್ಲಮಕ್ಕಡ ಪವನ್, ಸುಳ್ಳಿಮಾಡ ಸುಬ್ಬಯ್ಯ, ಕೋಡಿಮಣಿಯಂಡ ಗಣಪತಿ, ಬೊಳ್ಳಚಂಡ ನಾಣಯ್ಯ, ಪಟ್ರಪಂಡ ಮ್ಯಾಂಡಿ ಮಂದಣ್ಣ, ಚೋಯಮಾಡಂಡ ಚೆಂಗಪ್ಪ, ಅಂಜಪರವAಡ ಕುಶಾಲಪ್ಪ ಕಾರ್ಯನಿರ್ವಹಿಸಿದರು.