ಶನಿವಾರಸಂತೆ, ಡಿ. ೨೯: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವತಿಯಿಂದ ನಿಲುವಾಗಿಲು ಮತ್ತಿತರ ಗ್ರಾಮಗಳಲ್ಲಿ ಏರ್ಪಡಿಸಿದ್ದ ವಾರ್ಡ್ ಸಭೆಗಳನ್ನು ಗ್ರಾಮಸ್ಥರು ಬಹಿಷ್ಕರಿಸಿದ ಘಟನೆ ನಡೆದಿದೆ.

ವಾರ್ಡ್ ಸದಸ್ಯರಾದ ಕೀರ್ತಿ, ರಮೇಶ್ ಇತರರ ಅಧ್ಯಕ್ಷತೆಯಲ್ಲಿ ಸಭೆಗಳು ಆರಂಭವಾಗುತ್ತಿದ್ದAತೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು,

ಕಳೆದ ೩ ವರ್ಷಗಳಿಂದ ವಾರ್ಡ್ ಸಭೆಯಲ್ಲಿ ಚರ್ಚಿಸಿ ನಿಯೋಜನೆ ಗೊಳಿಸಿದ್ದ ಯಾವುದೇ ಕಾರ್ಯಕ್ರಮ ವನ್ನು ಅನುಷ್ಠಾನಗೊಳಿಸದಿದ್ದು, ಮತ್ತೆ ವಾರ್ಡ್ ಸಭೆ ನಡೆಸಿ ಪ್ರಯೋಜನ ವಾದರೂ ಏನು? ನೀವು ಬೆಣ್ಣೆ ಸವರುವ ಕಾರ್ಯ ಮಾಡುವುದರಿಂದ ಗ್ರಾಮಾಭಿವೃದ್ಧಿ ಸಾಧ್ಯವಿಲ್ಲ. ಈ ಬಾರಿ ವಾರ್ಡ್ ಸಭೆ ನಡೆಸುವುದಾದರೇ ಕಳೆದ ವರ್ಷ ಅನುಷ್ಠಾನಗೊಳಿಸಲ್ಪಟ್ಟ ಕಾರ್ಯಕ್ರಮಗಳನ್ನು ಮೊದಲು ಸಕ್ರಿಯಗೊಳಿಸಿ. ನಂತರ ಸಭೆ ನಡೆಸಿ. ಅಲ್ಲಿಯವರೆಗೂ ನಿಲುವಾಗಿಲು ಗ್ರಾಮದಲ್ಲಿ ವಾರ್ಡ್ ಸಭೆಗಳನ್ನು ನಡೆಸಲು ಬಿಡುವುದಿಲ್ಲ ಎಂದು ಹೇಳಿದ ಗ್ರಾಮ ಮುಖಂಡರಾದ ರಂಗಸ್ವಾಮಿ, ಸೋಮ, ಶೇಖರ್, ರವಿ, ಪುನೀತ್ ಹಾಗೂ ಸಂಜು ವಾರ್ಡ್ ಸಭೆ ಬಹಿಷ್ಕರಿಸಿ ಹೊರ ನಡೆದರು.