ಕಣಿವೆ, ಡಿ. ೨೭: ಶಬರಿಮಲೆ ಯಾತ್ರೆ ಮುಗಿಸಿ ಸ್ವಗ್ರಾಮದತ್ತ ಮರಳುತ್ತಿದ್ದ ಕುಶಾಲನಗರದ ಯಾತ್ರಾರ್ಥಿಯೊಬ್ಬರು ಅಪಘಾತದಲ್ಲಿ ಮೃತಪಟ್ಟು ಜೊತೆಯಲ್ಲಿದ್ದ ಮೂವರು ಗಂಭೀರ ಗಾಯಗೊಂಡು ಜೀವನ್ಮರಣದ ಸ್ಥಿತಿಗೆ ತಲುಪಿರುವ ಘಟನೆ ಬುಧವಾರ ಮುಂಜಾನೆ ಕೇರಳದಲ್ಲಿ ಸಂಭವಿಸಿದೆ.
ಕುಶಾಲನಗರ ಸಮೀಪದ ಚಿಕ್ಕತ್ತೂರು ಗ್ರಾಮದ ಕೆ.ಕೆ.ಚಂದ್ರ (೫೦) ಸ್ಥಳದಲ್ಲೇ ಮೃತಪಟ್ಟರೆ ಉಳಿದ ಮೂವರು ಗಂಭೀರ ಗಾಯಗೊಂಡು ಕೇರಳದ ರಾಜಗಿರಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಶಾಲನಗರದ ಸಿದ್ದಯ್ಯ ಬಡಾವಣೆ ನಿವಾಸಿಗಳಾದ ಲಿಂಗA, ಲಿಂಗA ಪುತ್ರ ಸಂತೋಷ್ ಹಾಗೂ ಹರೀಶ್ ಗಂಭೀರ ಗಾಯಗೊಂಡವರು.
ಘಟನೆ ವಿವರ : ಕಳೆದ ಡಿ.೨೫ ರಂದು ಶಬರಿಮಲೆಗೆ ಚಂದ್ರು ಅವರಿಗೆ ಸೇರಿದ (ಕೆಎ ೪೨- ಒ ೨೧೫೭) ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಯಾತ್ರೆ ಹೊರಟಿದ್ದ ನಾಲ್ವರು ಡಿ. ೨೬ ರ ಮಧ್ಯರಾತ್ರಿ ೨ ಗಂಟೆಗೆ ಅಯ್ಯಪ್ಪಸ್ವಾಮಿ ದರ್ಶನ ಮುಗಿಸಿ ಸ್ವಗ್ರಾಮದತ್ತ ಮಧ್ಯರಾತ್ರಿಯೇ ಹೊರಟಿದ್ದರು ಎನ್ನಲಾಗಿದೆ.
ಶಬರಿಮಲೆಯಿಂದ ಹೊರಟ ೬೦ ಕಿಮೀ ದೂರದಲ್ಲಿ ಪೆರಂಬೂರು ಬಳಿ ರಸ್ತೆ ಬದಿಯ ಮರವೊಂದಕ್ಕೆ ಕಾರು ಅಪ್ಪಳಿಸಿದ ಪರಿಣಾಮ ಕಾರು ಚಾಲಿಸುತ್ತಿದ್ದ. ಚಂದ್ರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮೂವರನ್ನು ರಾಜಗಿರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗಳಿಗೆ ಕರೆ ಮಾಡಿದ್ದ ಚಂದ್ರು : ದೇವರ ದರ್ಶನ ಮುಗಿಸಿದ ಬಳಿಕ ಕಾರು ಹತ್ತಿ ಊರಿನತ್ತ ತೆರಳುವ ಮುನ್ನ ಮಂಗಳವಾರ ಮಧ್ಯರಾತ್ರಿ ೨ ಗಂಟೆಗೆ ತಮ್ಮ ಮಗಳು ಸ್ವಪ್ನರಿಗೆ ಕರೆ ಮಾಡಿದ ಚಂದ್ರು, ಮಗಳೇ ದರ್ಶನ ಎಲ್ಲಾ ಚೆಂದ ಆಯಿತು.
(ಮೊದಲ ಪುಟದಿಂದ) ಈಗ ಹೊರಟಿದ್ದೇವೆ ಎಂದು ಹೇಳಿದಾಗ, ಅಪ್ಪಾ ಇಷ್ಟು ಹೊತ್ತಿನಲ್ಲಿ ಏಕೆ ಬರ್ತೀರಾ ? ನಿದ್ರೆ ಮಾಡಿ, ರೆಸ್ಟ್ ಮಾಡಿ ನಿಧಾನವಾಗಿ ಹೊರಟು ಬನ್ನಿ ಎಂದು ಮಗಳು ಸ್ವಪ್ನ ಹೇಳಿದ್ದಾಳೆ. ಆದರೆ ವಿಧಿಯ ಆಟವೇ ಬೇರೆ ಇತ್ತು.
ಮೃತ ಚಂದ್ರು ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪಘಾತದ ವಿಷಯ
ತಿಳಿಯುತ್ತಿದ್ದಂತೆ ಮೃತ ಚಂದ್ರು ನಿವಾಸಕ್ಕೆ ಬಂಧುಗಳು, ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದುದು ಕಂಡುಬAತು.
ಅತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಿಂಗA, ಸಂತೋಷ್ ಹಾಗೂ ಹರೀಶ್ ಅವರ ಕುಟುಂಬ ಸದಸ್ಯರು ಕೇರಳದ ರಾಜಗಿರಿಯ ಆಸ್ಪತ್ರೆಗೆ ತೆರಳಿದ್ದಾರೆ.