(ವಿಶೇಷ ವರದಿ: ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಡಿ. ೨೭: ದಕ್ಷಿಣ ಕೊಡಗಿನ ಕುಂದ ಗ್ರಾಮದ ಕುಂದ ಬೆಟ್ಟ ತಪ್ಪಲಿನ ಪ್ರದೇಶದ ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ಸಹೋದರ ದರ್ಶನ್ ಅವರ ಕಾಫಿ ತೋಟದಲ್ಲಿ ಬೆಳೆದು ನಿಂತಿದ್ದ ಬೃಹತ್ ಮರದ ಬುಡದಲ್ಲಿ ಸುಮಾರು ೮೦೦ ವರ್ಷ ಇತಿಹಾಸÀವುಳ್ಳ ಪಾಂಡವರ ಕಾಲದ್ದು ಎನ್ನಲಾದ ೪ ಅಡಿ ಎತ್ತರದ ಶಿವಲಿಂಗವೊAದು ಗೋಚರವಾಗಿದೆ. ಗುಮ್ಮಟ್ಟಿರ ಕುಟುಂಬದ ಜಾಗದಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿರುವುದರಿಂದ ಕುಟುಂಬಸ್ಥರು ಸಂತೋಷ ಗೊಂಡಿದ್ದಾರೆ.
ಶಿವಲಿAಗದೊAದಿಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆ, ಸೋಮಸೂತ್ರ, ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತಿವೆ. ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದ ಈಶ್ವರ ದೇವಾಲಯದ ತಪ್ಪಲಿನಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. ಪಾಂಡವರು ಈ ಭಾಗದಲ್ಲಿ ಸಂಚರಿಸುವ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ದ್ಯೋತಕವಾಗಿ ಈ ಶಿವಲಿಂಗ ಪತ್ತೆಯಾಗಿದೆ ಎಂದು ಕಾರ್ಕಳದ ಶಿವಕುಮಾರ್ ಮಾಹಿತಿ ಒದಗಿಸಿದ್ದಾರೆ.
ಮಣ್ಣಿನ ಅಡಿಯಲ್ಲಿ ಲಭಿಸಿರುವ ಶಿವಲಿಂಗದ ೨ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಆಗಿನ ಕಾಲದ ಬಿಳಿಕಲ್ಲಿನಿಂದ ಹಾಗೂ ಕಾಡು ಕಲ್ಲಿನಿಂದ ಈ ಶಿವಲಿಂಗವು ಮಾಡಲ್ಪಟ್ಟಿದೆ. ಶಿವಲಿಂಗ ಪತ್ತೆಯಾದ ಸ್ಥಳದಿಂದ ಅನತಿ ದೂರದ ಎತ್ತರದ ಕುಂದಬೆಟ್ಟದಲ್ಲಿ ಇಂದಿಗೂ ಶಿವನು ನೆಲೆಸಿರುವ ಒಂದೇ ರಾತ್ರಿಯಲ್ಲಿ ಕಟ್ಟಿರುವ ಬಾಗಿಲು ಇಲ್ಲದಿರುವ
ಕಲ್ಲಿನ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿದೆ.
ಪ್ರಮಾಣದಲ್ಲಿ ಹಾನಿಯಾಗಿದೆ. ಆಗಿನ ಕಾಲದ ಬಿಳಿಕಲ್ಲಿನಿಂದ ಹಾಗೂ ಕಾಡು ಕಲ್ಲಿನಿಂದ ಈ ಶಿವಲಿಂಗವು ಮಾಡಲ್ಪಟ್ಟಿದೆ. ಶಿವಲಿಂಗ ಪತ್ತೆಯಾದ ಸ್ಥಳದಿಂದ ಅನತಿ ದೂರದ ಎತ್ತರದ ಕುಂದಬೆಟ್ಟದಲ್ಲಿ ಇಂದಿಗೂ ಶಿವನು ನೆಲೆಸಿರುವ ಒಂದೇ ರಾತ್ರಿಯಲ್ಲಿ ಕಟ್ಟಿರುವ ಬಾಗಿಲು ಇಲ್ಲದಿರುವ
ಕಲ್ಲಿನ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿದೆ.
ಅರ್ಚಕರು, ಗುಮ್ಮಟ್ಟಿರ ಕುಟುಂಬದ ಹಿರಿಯರು ಅಭಿಪ್ರಾಯ ಹಂಚಿಕೊAಡಿದ್ದಾರೆ.
ಗುಮ್ಮಟ್ಟಿರ ಕುಟುಂಬದ ಹಿರಿಯರು ಸೇರಿದಂತೆ ಮನೆಯವರೆಲ್ಲರೂ ಒಟ್ಟಾಗಿ ಸೇರಿ ಮಣ್ಣಿನಡಿಯಲ್ಲಿದ್ದ ಶಿವಲಿಂಗವನ್ನು ಹೊರ ತೆಗೆಯಲು ಶಾಸ್ತೊçÃಕ್ತವಾಗಿ ಪೂಜೆ ಸಲ್ಲಿಸಿ, ಕಲ್ಯಾಟಂಡ ಅಜ್ಜಪ್ಪನವರ ಮಾರ್ಗದರ್ಶನದಲ್ಲಿ ಅವರ ನುಡಿಯಂತೆ ಶಿವನ ಲಿಂಗವನ್ನು ಹೊರ ತೆಗೆಯುವ ಕಾರ್ಯ ಕೈಗೊಳ್ಳಲಾಯಿತು. ಈ ಸಂದರ್ಭ ಶಿವಲಿಂಗವನ್ನು ಎಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಜ್ಜಪ್ಪನವರ ನುಡಿಯಂತೆ ಕರುವಿನ ಸಹಾಯ ಪಡೆದರು. ಶಿವಲಿಂಗಕ್ಕೆ ಹಗ್ಗವನ್ನು ಕಟ್ಟಿ ಆ ಹಗ್ಗವನ್ನು ಕರು ಎಳೆಯುತ್ತಿದ್ದಂತೆಯೇ ನೆಟ್ಟಗೆ ನಿಂತಿದ ಶಿವಲಿಂಗವು ನೋಡ ನೋಡುತ್ತಿದ್ದಂತೆಯೇ ಸುತ್ತಲು ನೆರೆದಿದ್ದವರ ಸಮ್ಮುಖದಲ್ಲಿ ಭಾಗಿ ನಿಲ್ಲುವಂತಾಯಿತು. ನಂತರ ಗ್ರಾಮದ ಹತ್ತಕ್ಕೂ ಅಧಿಕ ಹಿರಿಯರು ಭಾರೀ ಗಾತ್ರದ ಶಿವಲಿಂಗವನ್ನು ಭೂಮಿಯಿಂದ ತೆಗೆದು ಹಗ್ಗದ ಸಹಾಯದಿಂದ ಸಮೀಪದ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ನಂತರ ಶಿವಲಿಂಗಕ್ಕೆ ಚಪ್ಪರ ನಿರ್ಮಿಸಲಾಯಿತು. ಭೂಮಿ ಅಡಿಯಲ್ಲಿ ಸಿಕ್ಕಿರುವ ಹಲವು ವಸ್ತುಗಳನ್ನು ಜೋಡಿಸಿ ಸ್ಥಳದ ಒಂದು ಭಾಗದಲ್ಲಿ ಶೇಖರಿಸಿ ಇಡಲಾಗಿದೆ.