ಮಡಿಕೇರಿ, ಡಿ. ೨೮: ಸ್ಥಳೀಯ ಲಯನ್ಸ್ ಸಂಸ್ಥೆ ವತಿಯಿಂದ ಮಡಿ ಕೇರಿ ನಗರದ ಅಬ್ದುಲ್ ಕಲಾಂ ಲೇಔಟ್ನಲ್ಲಿರುವ ಜ್ಞಾನವಿಕಾಸ ವೃದ್ಧಾಶ್ರಮಕ್ಕೆ ಲಯನ್ಸ್ ಗವರ್ನರ್ ಮೆಲ್ವಿನ್ ಡಿಸೋಜಾ ಅವರು ಅಧಿಕೃತ ಭೇಟಿ ನೀಡಿದ ಸಂದರ್ಭ ದಿನಬಳಕೆಗೆ ಬೇಕಾದಂತ ದಿನಸಿ ಪದಾರ್ಥ ಹಾಗೂ ರೂ. ೫ ಸಾವಿರವನ್ನು ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್ ಡಿ. ಮುಂದೆಯೂ ಇದೇ ರೀತಿಯ ಸಹಕಾರವನ್ನು ಲಯನ್ಸ್ನಿಂದ ಕೊಡುತ್ತೇವೆ ಎಂಬ ಆಶ್ವಾ¸ನೆ ಕೊಟ್ಟರು. ಈ ಸಂದರ್ಭ ಲಯನ್ಸ್ನ ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೇಕಲ್, ವಲಯ ಅಧ್ಯಕ್ಷರಾದ ರೋಹಿತ್ ಸಿ.ಕೆ., ಮಹೇಶ್, ನಟರಾಜು ಕೆಸ್ತೂರು, ರವಿ ಎನ್.ಬಿ. ಮಧುಕರ್ ಕೆ., ಗೀತಾ ಮಧುಕರ್, ಮೋಹನ್ ಕುಮಾರ್, ಸೋಮಣ್ಣ ಪಿ.ಪಿ., ಜೆ. ವಿ. ಕೋಟಿ, ದಿನೇಶ್ ರಾವ್, ದಾಮೋದರ್ ಕೆ.ಕೆ., ಮೋಹನ್ ದಾಸ್, ಚಾಮ, ಜಿಲ್ಲಾ ಸಂಪುಟದ ಸದಸ್ಯರಾದ ಓಸ್ವಾಲ್ ಡಿ’ಸೋಜಾ, ಸುಧಾಕರ್ ಶೆಟ್ಟಿ ಇದ್ದರು.