ಪೊನ್ನಂಪೇಟೆ, ಡಿ. ೨೮ : ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಗುರುವಾರದಿಂದ ಆರಂಭಗೊAಡ ೧೪ ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳನ್ನು ಒಳಗೊಂಡ ಕರ್ನಾಟಕ ತಂಡಕ್ಕೆ ಜಯ ದೊರೆತಿದೆ.

ಪಂದ್ಯಾವಳಿಯ ಮೊದಲನೇ ದಿನದಂದು ಕೇಂದ್ರ ಸಿಲಬಸ್‌ನ ಸಿ. ಎಸ್. ಐ. ಎಸ್. ತಂಡವನ್ನು ಎದುರಿಸಿದ ಕರ್ನಾಟಕ ತಂಡ ೨-೦ ಗೋಲುಗಳ ಮೂಲಕ ಮುನ್ನಡೆ ಸಾಧಿಸಿತು. ಆರಂಭದಿAದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಕರ್ನಾಟಕ ತಂಡ ಎದುರಾಳಿ ತಂಡದ ವಿರುದ್ಧ ನಿರಾಯಾಸವಾದ ಜಯಗಳಿಸಿತು. ಕರ್ನಾಟಕ ತಂಡದ ಗಣೇಶ್ ಮೊದಲ ಗೋಲು ಬಾರಿಸಿದರೆ, ಹರ್ಷ ೨ನೇ ಗೋಲು ದಾಖಲಿಸಿದರು. ತಾ. ೨೯ ರಂದು (ಇಂದು) ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.