ಕೂಡಿಗೆ, ಡಿ. ೨೮ : ಜಿಲ್ಲೆಯಲ್ಲಿ ರಾಷ್ಟçಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯು ಜನವರಿ ೩ ರಿಂದ ೮ ರ ವರೆಗೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೂಡಿಗೆ , ಪೊನ್ನಂಪೇಟೆ, ಮತ್ತು ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ನಡೆಯಲಿದ್ದು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಕಲ ಸಿದ್ದತೆಗಳು ನಡೆಯುತ್ತಿವೆ.

ರಾಜ್ಯ ದೈಹಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ಮತ್ತು ರಾಜ್ಯ ಶಿಕ್ಷಣ ಇಲಾಖೆಯ ಅಲ್ಪಸಂಖ್ಯಾತ, ಮತ್ತು ಇತರೆ ಭಾಷಾ ಸಂಬAಧ ಆಯುಕ್ತರ ಕಚೇರಿಯ ಸಹ ನಿರ್ದೇಶಕರಾದ ರಘುವೀರ್ ಹಾಗೂ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಕಾAತ್ ನೇತೃತ್ವದ ಅಧಿಕಾರಿಗಳ ತಂಡ ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಆಟದ ಮೈದಾನವನ್ನು ಪರಿಶೀಲನೆ ಮಾಡಿತು. ವಿದ್ಯಾರ್ಥಿನಿಯರಿಗೆ ತಂಗುವ ವ್ಯವಸ್ಥೆಗೆ ಅನುಕೂಲವಾಗುವಂತೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳ ವಸತಿ ಗೃಹಗಳು ಹಾಗೂ ರಾಷ್ಟಿçÃಯ ಮಟ್ಟದ ತರಬೇತುದಾರರು ಮತ್ತು ತೀರ್ಪುಗಾರರು ಅಗಮಿಸುವ ಹಿನ್ನೆಲೆಯಲ್ಲಿ ಅವರುಗಳಿಗೆ ವಸತಿ ಗೃಹಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಪರಿಶೀಲಿಸಿತು.

ಸಿದ್ಧತೆಗಳು ಕುರಿತು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ರಾಜ್ಯದ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರಾಷ್ಟಿçÃಯ ಮಟ್ಟದ ವಿದ್ಯಾರ್ಥಿನಿಯರ ಹಾಕಿ ಪಂದ್ಯಾವಳಿಯ ಉದ್ಘಾಟನೆಯು ಜನವರಿ ೩ ರಂದು ಕೂಡಿಗೆ ಕ್ರೀಡಾ ಶಾಲೆಯ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಕ್ರೀಡಾ ಶಾಲೆಗೆ ತೆರಳುವ ದಾರಿಯ ಶುಚಿತ್ವ, ಅಭ್ಯಾಸ ಮೈದಾನದ ಶುಚಿತ್ವ ಸೇರಿದಂತೆ ವಿವಿಧ ಸ್ವಚ್ಚತಾ ಕಾರ್ಯಗಳು ನಡೆಯುತ್ತಿವೆ.

ಈ ಸಂದರ್ಭ ದೈಹಿಕ ಶಿಕ್ಷಣ ಇಲಾಖೆಯ ಸಂಯೋಜಕ ಡಾ. ಸದಾಶಿವ ಎಸ್. ಪಲ್ಲೇದ್, ಕ್ರೀಡಾಶಾಲೆಯ ಮುಖ್ಯೋಪಾಧ್ಯಾಯರಾದ ದೇವಕುಮಾರ್, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಪೂರ್ಣೇಶ್ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರು ಹಾಜರಿದ್ದರು.