ಸುಂಟಿಕೊಪ್ಪ, ಡಿ. ೨೭: ಇಲ್ಲಿನ ಮಾದಾಪುರ ರಸ್ತೆಯ ಬ್ಯಾಂಕ್ ಆಫ್ ಬರೋಡ ವತಿಯಿಂದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಮ್ಮ ಸಂಕಲ್ಪ ವಿಕಸಿತ ಭಾರತ. ಕೇಂದ್ರ ಸರಕಾರ ಸಂಕಲ್ಪಾ ಯಾತ್ರೆಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಲಾಯಿತು.
ಈ ಸಂದರ್ಭ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕಿ ದೀಪ್ತಿ ಸಿ. ಗಂಗಾಧರ್ ಅವರು ಕೇಂದ್ರ ಸರಕಾರದ ಯೋಜನೆಗಳನ್ನು ಬ್ಯಾಂಕಿನ ಮೂಲಕ ನೀಡುವ ಸೌಲಭ್ಯಗಳ ಮಾಹಿತಿ ನೀಡಿದರು. ನಂತರ ಅಂಚೆ ಇಲಾಖೆ ಅಧಿಕಾರಿ ಅಮಿತಾ, ಇಂಡಿಯನ್ ಗ್ಯಾಸ್ ವಿತರಕ ರಾಖೇಶ್, ನಬಾರ್ಡ್ ಜಿಲ್ಲಾ ಮೇಲ್ವಿಚಾರಕ ರಮೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ಕೇಂದ್ರ ಸರಕಾರದ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ನಮ್ಮ ಸಂಕಲ್ಪ ವಿಕಸಿತ ಭಾರತ. ಕೇಂದ್ರ ಸರಕಾರ ಸಂಕಲ್ಪ ಯಾತ್ರೆಯ ಆಯೋಜಕರು ಸ್ವಸ್ತಿಕ್ ಡ್ರೋನ್ ಮೂಲಕ ರೈತರು ತಮ್ಮ ಬೆಳೆಗಳಿಗೆ ಕ್ರಿಮಿನಾಶಕ ಔಷಧಿ ಸಿಂಪಡಿಸುವ ಬಗ್ಗೆ ಪ್ರಾತ್ಯಕ್ಷತೆ ನೀಡಿ ಕೇಂದ್ರ ಸರಕಾರದಿಂದ ರೈತರು ಡ್ರೋನ್ ಖರೀದಿಗೆ ಇರುವ ರಿಯಾಯಿತಿ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನೀಲ್ ಕುಮಾರ್, ಬ್ಯಾಂಕ್ ಆಫ್ ಬರೋಡ ಅಧಿಕಾರಿಗಳಾದ ಚಂದ್ರಶೇಖರ್ ರೆಡ್ಡಿ, ಚಿನ್ನ ಬಾಬು, ರವಿ, ಚಿನ್ನಮ್ಮ, ಸಿಬ್ಬಂದಿ ಸಂತೋಷ್ ಇತರರು ಹಾಜರಿದ್ದರು.