*ಗೋಣಿಕೊಪ್ಪ, ಡಿ. ೨೭: ಪೊನ್ನಂಪೇಟೆ ಕ್ಲಸ್ಟರ್ ವ್ಯಾಪ್ತಿಯ ಸಂತ ಅಂತೋಣಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೊನ್ನಂಪೇಟೆ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡಜೀವನ್ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಬಿ ಪುಷ್ಪ ಅವರನ್ನು ಸನ್ಮಾನಿಸಲಾಯಿತು.
ಸಂತ ಅಂತೋಣಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಸ್ಟರ್ ಫ್ಲೋಸಿ ಇಬ್ಬರನ್ನು ಗೌರವಿಸಿದರು.
ನಂತರ ಮಾತನಾಡಿದ ಜೀವನ್ ಅವರು ಶಾಲೆಯಲ್ಲಿ ಮಕ್ಕಳು ಓದುವುದರೊಂದಿಗೆ ಸಹಪಠ್ಯ ವಿಷಯದಲ್ಲೂ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಪುಷ್ಪ ಮಾತನಾಡಿ, ಮಕ್ಕಳು ಕಷ್ಟ ಪಟ್ಟು ಓದಿ ಮಾಜಿ ರಾಷ್ಟçಪತಿ ಅಬ್ದುಲ್ ಕಲಾಂರAತೆ ಆಗಬೇಕು ಎಂದು ಸಲಹೆ ನೀಡಿದರು.
ನಂತರ ಒಂದನೇ ತರಗತಿಯಿಂದ ೭ನೇ ತರಗತಿವರೆಗೆ ಪ್ರಶಸ್ತಿ ಗಳಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.