ವೀರಾಜಪೇಟೆ, ಡಿ. ೨೮: ಅರಮೇರಿಯಲ್ಲಿರುವ ಎಸ್.ಎಂ.ಎಸ್ ಅಕಾಡೆಮಿಯಲ್ಲಿ ತಾ.೩೦ ರಂದು ಏಕ ಭಾರತ ಶ್ರೇಷ್ಠ ಭಾರತ ಸಾಂಸ್ಕöÈತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನ್ನಿಧ್ಯವನ್ನು ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿಗಳು, ಶ್ರೀ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಬೆಂಗಳೂರು ಉತ್ತರ ಸಿಜಿಎಸ್ಟಿ ಆಯುಕ್ತರುಗಳಾದ ಡಾ. ಕೊಟ್ರಸ್ವಾಮಿ ಎಂ, ನಿವೃತ್ತ ಆರ್.ಟಿ.ಐ ಆಯುಕ್ತರುಗಳಾದ ಜಿ.ಎಸ್ ವಿರೂಪಾಕ್ಷಯ್ಯ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಿ.ಬಿ.ಎಸ್.ಇ ಯ ವಿವಿಧ ವಲಯಗಳಿಗೆ ಒಳಪಟ್ಟ ಡೋಗ್ರಿ, ಬಾಂಗ್ಡ, ಹರಿಯಾಣ, ಲೆಪ್ಚ, ನಾಗ, ಚೆರಾವು, ಥೌಗೋಲ್ ಜಗೋಯಿ, ದುನೋಚಿ, ಉತ್ತರಖಂಡ್ ಪಹಾಡಿ, ಗರ್ಭಾ, ಕರ್ನಾಟಕ ತಮಿಳುನಾಡು ಕೇರಳ ಜನಪದ ನೃತ್ಯಗಳನ್ನು ಒಳಗೊಂಡAತೆ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶಾಲೆಯ ಪ್ರಾಂಶುಪಾಲರಾದ ಕುಸುಮ್ ಟಿಟೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.