ಮಡಿಕೇರಿ, ಡಿ. ೨೭: ಕೊಡವ ಜನಾಂಗದ ಕಾಳಜಿಯೊಂದಿಗೆ ಸಂಸ್ಕೃತಿ- ಆಚಾರ - ವಿಚಾರ, ಹಕ್ಕುಗಳ ಬಗ್ಗೆ ಉತ್ತಮ ರೀತಿಯಲ್ಲಿ ಪ್ರಯತ್ನ ನಡೆಸುವ ಸಂಘ - ಸಂಸ್ಥೆ ಸಂಘಟನೆಗಳಿಗೆ ಬೆಂಬಲ ನೀಡುವ ಕುರಿತು ಕೊಡವ ಸಮಾಜಗಳ ಒಕ್ಕೂಟದ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.

ಬಾಳುಗೋಡುವಿನಲ್ಲಿರುವ ಕೊಡವ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮುಚ್ಚಯದ ಸಭಾಂಗಣದಲ್ಲಿ ಇಂದು ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರುಗಿತು. ತಾ. ೨೯-೩೦ರಂದು ಮಡಿಕೇರಿಯಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಮೂಲಕ ನಡೆಯುತ್ತಿರುವ ವಿಶ್ವ ಕೊಡವ ಮೇಳದ ಬಗ್ಗೆ ಸಂಘಟನೆ ಪ್ರಮುಖರು ಮಾಹಿತಿ ನೀಡಿ ಬೆಂಬಲ ಕೋರಿದರು. ಇದಕ್ಕೆ ಸಹಕಾರ ನೀಡಲು ಒಕ್ಕೂಟದಿಂದ ತೀರ್ಮಾನಿಸಲಾಯಿತು.

ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ೩೩ ಕೊಡವ ಸಮಾಜಗಳ ಪ್ರಾತಿನಿಧಿಕ ಸಂಸ್ಥೆಯಾದ ನೀಡಿ ಬೆಂಬಲ ಕೋರಿದರು. ಇದಕ್ಕೆ ಸಹಕಾರ ನೀಡಲು ಒಕ್ಕೂಟದಿಂದ ತೀರ್ಮಾನಿಸಲಾಯಿತು.

ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ೩೩ ಕೊಡವ ಸಮಾಜಗಳ ಪ್ರಾತಿನಿಧಿಕ ಸಂಸ್ಥೆಯಾದ ನಡೆದುಕೊಳ್ಳಲಿ ಆದರೆ, ಮತ್ತೊಂದು ಸಂಸ್ಥೆಯ ವಿರುದ್ಧವಾಗಿ ನಡೆದು ಕೊಳ್ಳಬಾರದು ಎಂಬ ಅಭಿಪ್ರಾಯ ಕೇಳಿಬಂತು. ರಾಜ್ಯ ಸರಕಾರದಿಂದ ಮಂಜೂರಾಗಿರುವ ರೂ. ೧೦ ಕೋಟಿ ಅನುದಾನಕ್ಕೆ ಸಂಬAಧಿಸಿದAತೆ ಯುಕೋ

(ಮೊದಲ ಪುಟದಿಂದ) ಸಂಘಟನೆಯ ಆರೋಪವನ್ನು ಖಂಡಿಸಿ ಈ ಅನುದಾನವನ್ನು ಈಗಾಗಲೇ ಉದ್ದೇಶಿಸಿ ಕ್ರಿಯಾ ಯೋಜನೆ ರೂಪಿಸಿರುವಂತೆ ಬಳಸಿಕೊಳ್ಳುವ ಕುರಿತು ಚರ್ಚೆ ನಡೆಯಿತು. ಹಿರಿಯರಾದ ಯಂ.ಸಿ. ನಾಣಯ್ಯ, ಶಾಸಕ ಎ.ಎಸ್. ಪೊನ್ನಣ್ಣ, ಎಂ.ಎಲ್.ಸಿ. ಸುಜಾ ಕುಶಾಲಪ್ಪ ಅವರ ಸಹಕಾರದೊಂದಿಗೆ ವ್ಯವಹರಿಸಲು ನಿರ್ಧರಿಸಲಾಯಿತು. ಜನಾಂಗದ ಹಿತದೃಷ್ಟಿ, ಕಾಳಜಿಯ ಪ್ರಯತ್ನ ನಡೆಸುವವರಿಗೆ ಮುಂದಿನ ದಿನಗಳಲ್ಲಿ ಬೆಂಬಲ ನೀಡಲು ನಿರ್ಧರಿಸಲಾಯಿತು.

ಒಕ್ಕೂಟದ ವಿವಿಧ ಕೆಲಸ- ಕಾರ್ಯ, ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ಜನಾಂಗದ ಜನಸಂಖ್ಯೆ ಕ್ಷೀಣವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಯುವ ಜನಾಂಗಕ್ಕೆ ಈ ಬಗ್ಗೆ ಹಾಗೂ ಕೊಡವ ಸಂಸ್ಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕುರಿತು ಚರ್ಚೆ ನಡೆಯಿತು.

ಅಧ್ಯಕ್ಷ ವಿಷ್ಣು ಕಾರ್ಯಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾಜಿ ಸಚಿವರಾದ ಯಂ.ಸಿ. ನಾಣಯ್ಯ, ಉಪಾಧ್ಯಕ್ಷರುಗಳಾದ ಮಾಳೇಟಿರ ಅಭಿಮನ್ಯುಕುಮಾರ್, ಮಂಡುವAಡ ಪಿ. ಮುತ್ತಪ್ಪ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಸೇರಿದಂತೆ ವಿವಿಧ ಕೊಡವ ಸಮಾಜಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಶಂಕರಿ ಪೂವಯ್ಯ ಅವರು ಸ್ವಾಗತಿಸಿ, ವಂದಿಸಿದರು.