ಸೋಮವಾರಪೇಟೆ, ಡಿ. ೨೬: ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ರಾಮ ಮಂದಿರದಲ್ಲಿ ಏಳನೇ ವರ್ಷದ ವೈಕುಂಠ ಏಕಾದಶಿ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ದೇವಾಲಯವನ್ನು ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ನಡೆದವು. ಸಂಜೆ ಸೀತಾ ಬಳಗದ ವತಿಯಿಂದ ವಿಷ್ಣು ಸಹಸ್ರ ನಾಮ ಪಠಣ ನಡೆಯಿತು.
ಚಿಕ್ಕಮಗಳೂರಿನ ಉಪನ್ಯಾಸಕ ಸಾಯಿನಂದನ್ ಅಯ್ಯಂಗಾರ್ ಉಪನ್ಯಾಸ ನೀಡಿ, ಇಂದು ಹೆಚ್ಚಿನವರಲ್ಲಿ ಧರ್ಮದ ಬಗ್ಗೆ ಅರಿವು ಇಲ್ಲ. ಮಕ್ಕಳಲ್ಲಿಯೇ ಧರ್ಮದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪೋಷಕರು ಮಾಡಬೇಕು. ಹಾಗಾದಾಗ ಮಾತ್ರ ಜೀವನದಲ್ಲಿ ದೇವರು ಮತ್ತು ಧರ್ಮದ ಬಗ್ಗೆ ಅರಿತುಕೊಂಡು ಸಂಸ್ಕಾರಯುತ ಜೀವನ ನಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಬಿ.ಸಿ. ವೆಂಕಟೇಶ್, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸೀತಾಬಳಗದ ಅಧ್ಯಕ್ಷೆ ಯಶೋಧ, ಯುವಕ ಸಂಘದ ಅಧ್ಯಕ್ಷ ಬಿ.ಜಿ. ರವಿ ಮತ್ತು ಪದಾಧಿಕಾರಿಗಳು ಹಾಗೂ ಸಮಾಜಬಾಂಧವರು ಭಾಗವಹಿಸಿದ್ದರು.