ಮಡಿಕೇರಿ, ಡಿ. ೨೬: ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ತಾ. ೨೯ ಮತ್ತು ೩೦ ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕ್ರೀಡಾಂಗಣದಲ್ಲಿ ಜಾಗತಿಕ ಕೊಡವ ಸಮ್ಮೇಳನ (ಗ್ಲೋಬಲ್ ಕೊಡವ ಸಮ್ಮಿಟ್)ಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಅಧ್ಯಕ್ಷ ಶಾಂತೆಯAಡ ನಿರನ್ ನಾಚಪ್ಪ, ಟ್ರಸ್ಟಿಗಳಾದ ಪಾಲೆಂಗಡ ಅಮಿತ್ ಭೀಮಯ್ಯ, ಚೇಂದAಡ ಶಮ್ಮಿ ಮಾದಯ್ಯ, ಬೊಳ್ಳೇರ ಪೃಥ್ವಿ ಪೂಣಚ್ಚ, ಮಡಿಕೇರಿ, ಡಿ. ೨೬: ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ತಾ. ೨೯ ಮತ್ತು ೩೦ ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕ್ರೀಡಾಂಗಣದಲ್ಲಿ ಜಾಗತಿಕ ಕೊಡವ ಸಮ್ಮೇಳನ (ಗ್ಲೋಬಲ್ ಕೊಡವ ಸಮ್ಮಿಟ್)ಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಅಧ್ಯಕ್ಷ ಶಾಂತೆಯAಡ ನಿರನ್ ನಾಚಪ್ಪ, ಟ್ರಸ್ಟಿಗಳಾದ ಪಾಲೆಂಗಡ ಅಮಿತ್ ಭೀಮಯ್ಯ, ಚೇಂದAಡ ಶಮ್ಮಿ ಮಾದಯ್ಯ, ಬೊಳ್ಳೇರ ಪೃಥ್ವಿ ಪೂಣಚ್ಚ, ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಎಲ್ಲಾ ಕೊಡವ ಸಮಾಜ, ಸಂಘ ಸಂಸ್ಥೆ, ತಕ್ಕ ಮುಖ್ಯಸ್ಥರು ಮತ್ತು ಕೊಡಗು ಮತ್ತು ವಿಶ್ವದಾದ್ಯಂತ ನೆಲೆಸಿರುವ ಕೊಡವರು ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಸಮಾಪ್ತಿ ಗೊಳ್ಳಲಿದೆ. ಬಳಿಕ ೧೧.೪೫ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ದೇಶ ತಕ್ಕರಾದ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಬುದ್ಧ ಸಿದ್ದಿ, ರಾಷ್ಟಿçÃಯ ಪಠ್ಯಕ್ರಮ ಶಿಕ್ಷಣ ಸಚಿವಾಲ ಯದ ಮುಖ್ಯ ಸಲಹೆಗಾರರಾದ ಡಾ. ಚೇತನ್ ಸಿಂಘೈ, ಎಂ.ಎಸ್. ರಶ್ಮಿ ಸಮಂತ್ ಪಾಲ್ಗೊಳ್ಳಲಿದ್ದು, ಗೌರವ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ,

(ಮೊದಲ ಪುಟದಿಂದ) ಕೊಡಗು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ. ಅಶೋಕ್ ಸಂಗಪ್ಪ ಆಲೂರ್, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಆತ್ಮನಿರ್ಭರ ಅಧ್ಯಕ್ಷೆ ಕುಪ್ಪಂಡ ಛಾಯಾ ನಂಜಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತ ಪೂವಯ್ಯ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಅವರುಗಳು ಹೇಳಿದರು.

ಬಳಿಕ ಮಧ್ಯಾಹ್ನ ೧.೪೦ ಗಂಟೆಗೆ ಆರೋಗ್ಯ ರಕ್ಷಣೆ ಮತ್ತು ಸುಧಾರಣೆ ಸಮಾವೇಶ ನಡೆಯಲಿದೆ. ಖ್ಯಾತ ಅಧ್ಯಾತ್ಮಿಕ ವಿಜ್ಞಾನಿ ಬೊಪ್ಪಂಡ ರಶ್ಮಿ ಅಯ್ಯಪ್ಪ, ಪ್ರಸ್ತುತ ಆಶ್ವಾಸನ್ ವಿಜ್ಞಾನವನ್ನು ದೇಶ ವಿದೇಶಗಳಲ್ಲಿ ಪ್ರಚುರ ಪಡಿಸುತ್ತಿದ್ದು, ಹೆಲ್ತ್ಕೇರ್ ಕಾನ್‌ಕ್ಲೇವ್ ಮೂಲಕ ಜನರ ಆರೋಗ್ಯ ರಕ್ಷಣೆಯ ವಿಚಾರವಾಗಿ ಉಪಯುಕ್ತ ಮಾಹಿತಿಯನ್ನು ನೀಡಲಿದ್ದಾರೆ.

ಬಳಿಕ ೩.೧೦ ಗಂಟೆಗೆ ನಾಡ ಮಣ್ಣ್ ನಾಡ ಕೂಳ್, ಲ್ಯಾಂಡ್ ಬ್ಯಾಂಕ್ ಮತ್ತು ಕೃಷಿ ಸಮಾವೇಶ ನಡೆಯಲಿದೆ. ಕೊಡವರು ಇಂದು ತಮ್ಮ ಮೂಲ ಮಣ್ಣನ್ನು ಮರೆತು ಉದ್ಯೋಗ, ವ್ಯಾಪಾರ, ವಿಧ್ಯಾಭ್ಯಾಸಕ್ಕಾಗಿ ಕೊಡಗನ್ನು ತೊರೆದು ದೇಶ ವಿದೇಶಗಳಿಗೆ ತೆರಳುತ್ತಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ತಮ್ಮ ಮೂಲ ನೆಲೆಯನ್ನು ಮರೆತೇ ಬಿಡುತ್ತಾರೆ. ಆಸ್ತಿ ಪಾಸ್ತಿ ಮಾರಾಟದಿಂದ ಕೊಡವರ ಮೂಲ ಬೇರಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಧಕ್ಕೆಯಾಗುತ್ತಿರುವುದನ್ನು ಮನಗಂಡು ಡಾ. ಚೆಪ್ಪುಡಿರ ಜಿ. ಕುಶಾಲಪ್ಪ ಅವರ ನೇತೃತ್ವದಲ್ಲಿ ಕೊಡವರ ಕೊಡಗಿನಲ್ಲಿನ ಆಸ್ತಿ ಮಾರಾಟ ತಡೆ ಮತ್ತು ನಮ್ಮ ಆಚರಣೆಗಳು ಮತ್ತು ಸಂಸ್ಕೃತಿಗೆ ಹಾಸುಹೊಕ್ಕಾಗಿರುವ ಕೃಷಿಯನ್ನು ಮುಂದುವರೆಸಲು ಪರ್ಯಾಯ ಮಾರ್ಗಗಳ ಅನ್ವೇಷಣೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ನುಡಿದರು.

ಸಂಜೆ ೪ ಗಂಟೆಗೆ ದೇಶ ತಕ್ಕರೊಂದಿಗೆ ವಿಚಾರ ವಿಮರ್ಶೆ ಏರ್ಪಡಿಸಲಾಗಿದ್ದು, ಕೊಡವ ನಾಡಿನ ೮ ದೇಶ ತಕ್ಕರನ್ನೊಳಗೊಂಡ ಈ ಸಮಾವೇಶದಲ್ಲಿ ಕೊಡವರಲ್ಲಿ ಆದಿ ಕಾಲದಿಂದಲೂ ಬಂದ ತಕ್ಕಾಮೆ ಪದ್ಧತಿಯ ವೈಶಿಷ್ಟö್ಯತೆ ಮತ್ತು ತಕ್ಕಾಮೆಯ ಮಹತ್ವ, ಜವಾಬ್ದಾರಿಗಳ ಬಗ್ಗೆ ಮಾತುಕತೆ ನಡೆಯಲಿದೆ. ೫.೪೦ ಗಂಟೆಗೆ ವಾಣಿಜ್ಯ ಸಮಾವೇಶ ನಡೆಯಲಿದ್ದು, ವ್ಯಾಪಾರ ವ್ಯವಹಾರಗಳಲ್ಲಿ ಕೊಡವ ಜನಾಂಗದವರನ್ನು ಉತ್ತೇಜಿಸುವ ಸಲುವಾಗಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಉದ್ಯಮಿ ಪುಗ್ಗೇರ ದೇವಯ್ಯ ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಬಳಿಕ ೬.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ. ಎರಡು ದಿನದ ಸಮ್ಮೇಳನದಲ್ಲಿ ಅಂದಾಜು ೪೦ ತಂಡಗಳಿAದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನಾಟಕ, ಹಾಡು, ನೃತ್ಯ, ರ‍್ಯಾಂಪ್ ವಾಕ್ ನಂತಹ ವರ್ಣರಂಜಿತ ಕಾರ್ಯಕ್ರಮಗಳು ನಡೆಯಲಿವೆ.

ತಾ.೨೯ ರಂದೇ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಪೈಪೋಟಿಗೆ ಚಾಲನೆ ನೀಡಲಾಗುತ್ತದೆ. ೫೦೦-೬೦೦ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರುಗಳು ತಿಳಿಸಿದರು.

ಹಾಗೆಯೇ ಫುಡ್ ಮತ್ತು ಶಾಪಿಂಗ್ ಫೆಸ್ಟ್ ಕೂಡ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದು, ಸುಮಾರು ೫೦-೬೦ ಮಳಿಗೆಗಳು ಈಗಾಗಲೇ ನೋಂದಾವಣಿಯಾಗಿವೆ. ಆಹಾರ ಮಳಿಗೆಗಳು, ಬಟ್ಟೆ, ವಸ್ತç, ಆಭರಣ, ಹೂಗಿಡ, ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಇರಲಿವೆ. ಇದಲ್ಲದೆ ಕೊಡವ ಭಾಷಾ ಪುಸ್ತಕ ಮಾರಾಟ ಮಳಿಗೆಯೂ ಇರಲಿದೆ. ಮದುವೆ ಸಂಬAಧಗಳ ಜೋಡಣೆಗೆ ಅನುಕೂಲ ಕಲ್ಪಿಸಲು ತಂದು- ಬೆಂದು ಬಿಡಾರದಲ್ಲಿ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಮುಂದಾಳತ್ವದಲ್ಲಿ ಸಿದ್ಧತೆ ನಡೆದಿದೆ ಎಂದು ಅವರುಗಳು ಮಾಹಿತಿಯಿತ್ತರು. ಕೊಡವರ ಐನ್‌ಮನೆಯ ಮಾದರಿ ನಿರ್ಮಾಣ ಮಾಡಿ ಜೊತೆಯಲ್ಲಿಯೇ ಕೊಡವರ ದೈನಂದಿನ ಬದುಕಿಗೆ ನಂಟಾಗಿರುವ ವೈಶಿಷ್ಟö್ಯಪೂರ್ಣ ಮಾಹಿತಿಯ ವೀಕ್ಷಣೆ ಮತ್ತು ಅರಿವು ಮೂಡಿಸುವ `ಪಡಿಪು ಕೈಯ್ಯಾಲೆ’ಯ ಮೂಲಕ ಮರೆಯಾಗುತ್ತಿರುವ ಕೊಡವರ ಶ್ರೀಮಂತ ಸಂಸ್ಕೃತಿ, ಪರಂಪರೆಯ ಪ್ರದರ್ಶನವಿರುತ್ತದೆ. ಹಳೆಯ ಕಾಲದ ವಸ್ತುಗಳ ಮ್ಯೂಸಿಯಂ ಕೂಡ ಅಲ್ಲಿ ವೀಕ್ಷಣೆಗೆ ಸಿಗಲಿದೆ ಎಂದು ತಿಳಿಸಿದರು.

ತಾ.೩೦ ರಂದು ಬೆಳಿಗ್ಗೆ ೯ ಗಂಟೆಗೆ ಸಾಂಪ್ರದಾಯಿಕ ನೃತ್ಯ ಹಾಗೂ ಹಾಡು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬಾಳೋಪಾಟ್, ಬಟ್ಟೆ ಪಾಟ್, ತಾಲಿಪಾಟ್, ಕೋಲಾಟ್, ಬೊಳ್‌ಕಾಟ್, ಕತ್ತಿಯಾಟ್, ಪರೆಯಕಳಿ, ಸಂಬAಧ ಪರಜೆ, ಉಮ್ಮತ್ತಾಟ್, ವಾಲಗತ್ತಾಟ್, ಆಂಜೆಡ್‌ತ್ ತಕ್ಕ್ಪರಿಯೊ (ಆಶು ಭಾಷಣ), ಕಥೆ ಎಣ್ಣೊ (೧೫ ವಯಸ್ಸಿನೊಳಗಿನ ಮಕ್ಕಳ ವಿಭಾಗ) ಮುಂತಾದ ಸ್ಪರ್ಧೆಗಳು ನಡೆಯಲಿವೆ. ಈಗಾಗಲೇ ಪ್ರತಿ ಸ್ಪರ್ಧಾ ವಿಭಾಗದಲ್ಲಿಯೂ ೨೫ ರಿಂದ ೩೦ ತಂಡಗಳ ನೋಂದಾವಣೆÂಯಾಗಿದೆ. ಅಂದು ೧೦.೨೦ಕ್ಕೆ ಸಾಂಸ್ಕೃತಿಕ ಸಮಾವೇಶದಲ್ಲಿ ಕೊಡವರ ಆಚಾರ ವಿಚಾರ, ಪದ್ಧತಿ ಪರಂಪರೆಯ ವಿಷಯವಾಗಿ ಆಯ್ದ ಸಂಘಟನೆಗಳ ಪ್ರಮುಖರು ಮತ್ತು ತಜ್ಞರಿಂದ ಮಾತು, ಚರ್ಚೆ, ವಿಚಾರ ವಿನಿಮಯ ಜರುಗಲಿದೆ.

೧೧.೩೦ ಗಂಟೆಗೆ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದ್ದು ಕ್ರೀಡೆ, ಸಾಮಾಜಿಕ, ರಕ್ಷಣಾ ಕ್ಷೇತ್ರ, ಸಾಂಸ್ಕ್ರತಿಕ, ಸಂಘನೆಗಳ ಪ್ರಮುಖರ ಸೇವೆಯನ್ನು ಗುರುತಿಸಿ ೪೦ ಸಾಧಕ ಕೊಡವರಿಗೆ ಸನ್ಮಾನ ಮಾಡಲಾಗುತ್ತದೆ ಎಂದು ಅವರುಗಳು ಮಾಹಿತಿಯಿತ್ತರು.

ಮಧ್ಯಾಹ್ನ ೧.೫೦ಕ್ಕೆ ಕ್ರೀಡಾ ಸಮಾವೇಶ ನಡೆಯಲಿದೆ. ಕ್ರೀಡಾ ತವರೂರಾದ ಕೊಡಗಿನಲ್ಲಿ ಕೊಡವರು ರಾಷ್ಟç, ಅಂರ‍್ರಾಷ್ಟಿçÃಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಆದರೆ ವಿಪರ್ಯಾಸವೆಂಬAತೆ ಇತ್ತೀಚಿನ ದಿನಗಳಲ್ಲಿ ಕೊಡವ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಮನಗಂಡು ತೀತಮಾಡ ಅರ್ಜುನ್ ದೇವಯ್ಯ ಮತ್ತು ಮೆ. ಜನರಲ್ ಮುಕ್ಕಾಟಿರ ದೇವಯ್ಯ ಇವರುಗಳಿಂದ ಉತ್ಸಾಹಿ ಕ್ರೀಡಾಪಟುಗಳಿಗೆ ಕ್ರೀಡಾಸ್ಪೂರ್ತಿ ತುಂಬುವ ಸ್ಪೋರ್ಟ್ಸ್ ಕಾನ್‌ಕ್ಲೇವ್ ನ್ನು ಏರ್ಪಡಿಸಲಾಗಿದೆ.

೩.೨೦ ಗಂಟೆಗೆ ಊಖ/ಖಿಡಿಚಿiಟಿiಟಿg ಸಮಾವೇಶವಿದ್ದು, ಕೊಡವರ ಔದ್ಯೋಗಿಕ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಚಿಲ್ಲವಂಡ ದರ್ಶನ್ ನಡೆಸಿಕೊಡಲಿದ್ದಾರೆ.

ಸಂಜೆ ೪.೫೦ ಗಂಟೆಗೆ ನಾಗರಿಕ ಸೇವೆ ಮತ್ತು ಡಿಫೆನ್ಸ್ ಸಮಾವೇಶ ಆಯೋಜಿಸಲಾಗಿದ್ದು ಯುವ ಜನಾಂಗಕ್ಕೆ ನಾಗರಿಕ ಸೇವೆ ಮತ್ತು ಡಿಫೆನ್ಸ್ ಸೇರಲು ಪ್ರೆರೇಪಣೆಯನ್ನು ನೀಡುವ ಉದ್ದೇಶದಿಂದ ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮೇ. ಜ. ಕೊಡಂದೆರ ಅರ್ಜುನ್ ಮುತ್ತಣ್ಣ ಮತ್ತು ಅವರೆಮಾದಂಡ ಕೆ. ಮೊಣ್ಣಪ್ಪ ಪಾಲ್ಗೊಳ್ಳಲಿದ್ದಾರೆ.

ಸಂಜೆ ೬ ಗಂಟೆಗೆ ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರ ಸಮಾವೇಶ ನಡೆಯಲಿದ್ದು, ೩೦ ಕೊಡವ ಸಮಾಜಗಳ ಅಧ್ಯಕ್ಷರ ಸಮಕ್ಷಮದಲ್ಲಿ ಕೊಡವರ ಮೂಲಭೂತ ಸಮಸ್ಯೆಗಳ ಚರ್ಚಾಕೂಟ ಮತ್ತು ಮುಂದಿನ ನಡೆಯ ಬಗ್ಗೆ ನಿರ್ಣಯ ಮಂಡನೆಯನ್ನು ಮಾಡಲಾಗುವುದು ಎಂದು ಅವರುಗಳು ಮಾಹಿತಿಯಿತ್ತರು.

ರಾತ್ರಿ ೭.೧೦ ಗಂಟೆಗೆ ಗನ್ ಸಮಾವೇಶ. ಇದರಲ್ಲಿ ಕೊಡವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೋವಿಯ ಹಕ್ಕಿನ ಬಗ್ಗೆ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮವನ್ನು ನೆಲ್ಲಮಕ್ಕಡ ಸೋಮಣ್ಣ ನಡೆಸಿಕೊಡಲಿದ್ದಾರೆ.

೮.೧೦ ಗಂಟೆಗೆ ಸಮಾರೋಪ ಸಮಾರಂಭದಲ್ಲಿ ನಾಡಿನ ಪ್ರಮುಖರು, ದೇಶ ತಕ್ಕರು ಹಾಗೂ ಕೊಡವ ಸಮಾಜದ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ೮.೩೦ ಗಂಟೆಗೆ ಡಿ.ಜೆ. ನೈಟ್ ಕಾರ್ಯಕ್ರಮದೊಂದಿಗೆ ಸಮ್ಮೇಳನ ಮುಕ್ತಾಯಗೊಳ್ಳಲಿದೆ. ಈ ಸಮ್ಮೇಳನದಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ೭೦ ರಿಂದ ೭೫ ಲಕ್ಷ ವೆಚ್ಚದಲ್ಲಿ ಸಮೇಳನವನ್ನು ಆಯೋಜಿಸಲಾಗುತ್ತಿದೆ. ವಾಹನಗಳ ಪಾರ್ಕಿಂಗ್‌ಗೆ ಹೊಸ ಖಾಸಗಿ ಬಸ್ ನಿಲ್ದಾಣ, ಐಟಿಐ ಮೈದಾನ, ಕಾನ್ವೆಂಟ್ ಮೈದಾನದಲ್ಲಿ ಅವಕಾಶವಿರುತ್ತದೆ ಎಂದು ಅವರುಗಳು ತಿಳಿಸಿದರು.