ಕರಿಕೆ, ಡಿ. ೨೬: ಇಲ್ಲಿಗೆ ಸಮೀಪದ ಹದಿಮೂರನೇ ಮೈಲು ಎಸ್ ತಿರುವು ಸೇತುವೆ ಬಳಿ ಕೇರಳ ರಾಜ್ಯದ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡು ವಾಹನಗಳು ಜಖಂಗೊAಡಿದೆ. ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಉಭಯ ವಾಹನಗಳ ಕಡೆಯವರು ಸ್ಥಳದಲ್ಲಿ ರಾಜಿ ತೀರ್ಮಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡರು.