ಮುಳ್ಳೂರು, ಡಿ. ೨೬: ಕೊಡಗು ಜಿಲ್ಲಾ ಹ್ಯಾಂಡ್ಬಾಲ್ ಅಸೋಸಿಯೇಷನ್ ಆಲೂರು-ಸಿದ್ದಾಪುರ ಹಾಗೂ ವಿವಿಧ ಸಂಘ-ಸAಸ್ಥೆ ಮತ್ತು ದಾನಿಗಳ ಸಹಭಾಗಿತ್ವದಲ್ಲಿ ಸಮೀಪದ ಆಲೂರು-ಸಿದ್ದಾಪುರ ಪದವಿ ಪೂರ್ವ ಕಾಲೇಜಿನ ಗ್ರಾಮೀಣ ಕ್ರೀಡಾಂಗಣದಲ್ಲಿ ೧೭ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾಮಟ್ಟದ ಹಾಂಡ್ಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಯಿತು.
ಪಂದ್ಯಾವಳಿಯನ್ನು ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಉದಯಕುಮಾರ್ ಉದ್ಘಾಟಿಸಿದರು. ಜಿಲ್ಲಾ ಹ್ಯಾಂಡ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸಹನ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಿಂದ ಹ್ಯಾಂಡ್ಬಾಲ್ನ ಉತ್ತಮ ತಂಡವನ್ನು ತಯಾರು ಮಾಡಿ ರಾಜ್ಯಮಟ್ಟದ ಪಂದ್ಯಾವಳಿಗೆ ಕಳುಹಿಸಿಕೊಡುವ ಉದ್ದೇಶದಿಂದ ಹ್ಯಾಂಡ್ಬಾಲ್ ಕ್ರೀಡೆಯ ಹೆಸರಿನಲ್ಲಿ ಅಸೋಸಿಯೇಷನ್ ರಚಿಸಲಾಗಿದೆ ಎಂದರು. ಪ.ಪೂ. ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪುಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.
ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಶೇಖರ್ ಮಾತನಾಡಿದರು. ಜಿಲ್ಲಾ ಹ್ಯಾಂಡ್ಬಾಲ್ ಅಸೋಸಿಯೇಷನ್ ಅಲೂರು-ಸಿದ್ದಾಪುರ ಅಧ್ಯಕ್ಷ ಮತ್ತು ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಹೆಚ್.ಕೆ. ಶಿವಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕಿ ಎ.ಸಿ. ಶ್ರುತಿ, ಗ್ರಾ.ಪಂ. ಸದಸ್ಯರಾದ ಮಲ್ಲಪ್ಪ, ಪರ್ಲಕೋಟಿ ಸತೀಶ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಶಿಕ್ಷಕರುಗಳಾದ ಮಂಜಪ್ಪ, ಜವರಯ್ಯ, ಭಾಗ್ಯಜ್ಯೋತಿ, ಜಯರಾಮ್, ವಿದ್ಯಾ, ರಘು, ಪ್ರಮುಖರಾದ ವೀರೇಶ್, ತ್ಯಾಗರಾಜ್ ಮುಂತಾದವರಿದ್ದರು.
ಹ್ಯಾAಡ್ಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಿಂದ ೧೦ ತಂಡ, ಬಾಲಕಿಯರ ವಿಭಾಗದಿಂದ ೭ ತಂಡಗಳು ಭಾಗವಹಿಸಿದ್ದವು.