ಚೆಯ್ಯಂಡಾಣೆ, ಡಿ. ೨೬: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮುದಾಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸರ್ಕಾರಿ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಆಯೋಜಿಸಲಾಗಿತ್ತು.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ, ಕರಡ, ಕೊಕೇರಿ, ಕಿಕ್ಕರೆ, ಎಡಪಾಲ, ಚೆಯ್ಯಂಡಾಣೆ ಶಾಲೆಯ ಒಟ್ಟು ೯೦ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದ್ದರು. ಉದ್ಘಾಟನೆಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ೪ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಕ್ರಮವಾಗಿ ಕಿಕ್ಕರೆ ಶಾಲೆಯ ಮೊಹಮ್ಮದ್ ರಾಫಿ ಕೆ.ಆರ್., ಕರಡ ಶಾಲೆಯ ರಿತಿಕಾ, ಕಿಕ್ಕರೆ ಶಾಲೆಯ ಮಹಮ್ಮದ್ ನೂಹ್ ಕೆ.ಎನ್. ಪಡೆದುಕೊಂಡರು.

೫ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಕ್ರಮವಾಗಿ ಕೊಕೇರಿ ಶಾಲೆಯ ಒಹಬುಲ್ ಇಸ್ಲಾಂ, ಎಡಪಾಲ ಶಾಲೆಯ ತನ್ಸಿರಾ ಕೆ.ಆರ್., ಕಿಕ್ಕರೆ ಶಾಲೆಯ ಫಾತಿಮತ್ ರಿಝ ಪಿ.ಎ. ಪಡೆದುಕೊಂಡರು. ೬ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಕ್ರಮವಾಗಿ ಎಡಪಾಲ ಶಾಲೆಯ ನಾಫಿಯ ಕೆ.ಎಂ., ಎಡಪಾಲ ಶಾಲೆಯ ಅಶ್ಪಿಯ ಡಿ.ಆರ್., ಎಡಪಾಲ ಶಾಲೆಯ ಶಬೀರ್ ಟಿ.ಎ. ಪಡೆದುಕೊಂಡರು. ಪರೀಕ್ಷೆಯ ನೇತೃತ್ವದ ಸ್ವಯಂ ಸೇವಕರಾಗಿ ಕೊಕೇರಿ ಶಾಲೆಯ ಶಿಕ್ಷಕ ಯೋಶಿಕ್, ಚೆಯ್ಯಂಡಾಣೆ ಶಾಲೆಯ ಶಿಕ್ಷಕಿ ಸತ್ಯಮ್ಮ, ಚೇಲಾವರ ಪೊನ್ನೊಲ ಶಾಲೆಯ ಪ್ರಮೀಳಾ ಹಾಗೂ ಕರಡ ಶಾಲೆಯ ಫಶೀಲಾ ಕಾರ್ಯ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ಸ್ವಾಗತಿಸಿ ವಂದಿಸಿದರು. ಈ ಸಂದರ್ಭ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.