ಸೋಮವಾರಪೇಟೆ, ಡಿ. ೨೬: ಇಲ್ಲಿನ ಪಯೋನಿಯರ್ಸ್ ಟೆನ್ನಿಸ್ ಕ್ಲಬ್ ವತಿಯಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೇಳೂರು ಬಾಣೆಯಿಂದ ಪಟ್ಟಣದವರೆಗೆ ಮ್ಯಾರಥಾನ್ ಆಯೋಜಿಸಲಾಗಿತ್ತು.

ಬೇಳೂರು ಬಾಣೆಯಲ್ಲಿ ಕ್ಲಬ್ ಅಧ್ಯಕ್ಷ ಬಸವರಾಜು ಅವರು ಮ್ಯಾರಥಾನ್‌ಗೆ ಚಾಲನೆ ನೀಡಿ, ಮಕ್ಕಳು ಪರಿಸರದ ಮಹತ್ವದ ಬಗ್ಗೆ ಅರಿವು ಹೊಂದಬೇಕು. ನಿಸರ್ಗದ ಉಳಿವಿನಿಂದ ಮಾತ್ರ ಮನುಕುಲಕ್ಕೆ ಉಳಿವು ಎಂದರು.

ಮ್ಯಾರಥಾನ್‌ನಲ್ಲಿ ವಿವಿಧ ಶಾಲೆಗಳ ೬೦ಕ್ಕೂ ಅಧಿಕ ವಿದ್ಯಾರ್ಥಿಗಳು, ಕ್ಲಬ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಕ್ಲಬ್‌ನ ಉಪಾಧ್ಯಕ್ಷ ಡಿ.ಎಂ. ಉತ್ತಯ್ಯ ರವಿ, ಕಾರ್ಯದರ್ಶಿ ಬಿ.ಎನ್. ರವಿಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.