ಮೂರ್ನಾಡು, ಡಿ. ೨೬: ಇಲ್ಲಿಗೆ ಸಮೀಪದ ಮರಗೋಡು ಬಳಿಯ ಕಟ್ಟೆಮಾಡು ಗ್ರಾಮದಲ್ಲಿ ನವೀಕರಣಗೊಂಡಿರುವ ಶ್ರೀ ಮಹಾ ಮೃತ್ಯುಂಜಯ ಮಹದೇಶ್ವರ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶ ಮಹೋತ್ಸವ ಮತ್ತು ಜಾತ್ರೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ಮಹಾಗಣಪತಿ ಹೋಮ, ಉಷಾ ಪೂಜೆ, ಅಮಕುರ ಪೂಜೆ, ಖನನಾದಿ ಸ್ಥಳ ಶುದ್ಧಿ, ಬಿಂಬಶುದ್ಧಿ ಕಲಶ ಪೂಜೆ, ಪ್ರೋಕ್ಷ ಹೋಮ, ಪ್ರಾಯಶ್ಚಿತ ಹೋಮ, ಕಲಶಾಭಿಷೇಕಗಳು ನಡೆದವು. ವಿಶೇಷವಾಗಿ ಬಾಲಾಲಯದಿಂದ ಶಿವಲಿಂಗ ಮತ್ತು ಪಾಣಿಪೀಠವನ್ನು ನೂತನ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.