ಮಡಿಕೇರಿ, ಡಿ. ೨೬: ಮುಂಬೈನ ಜಗಜ್ಯೋತಿ ಕಲಾ ವೃಂದದ ವತಿಯಿಂದ ಕೊಡಮಾಡುವ ಸುಶೀಲ ಸೀತಾರಾಮ ಶೆಟ್ಟಿ ಸ್ಮಾರಕ ಪುಸ್ತಕ ಬಹುಮಾನಕ್ಕೆ ಜಿಲ್ಲೆಯ ಕವಯತ್ರಿ ಕುದುಕುಳಿ ಮಿಲನ ಭರತ್ ಭಾಜನರಾಗಿದ್ದಾರೆ. ಕವನ ಸಂಕಲನ ವಿಭಾಗದಲ್ಲಿ ಮಿಲನ ಅವರ ಸಂಕಲನದ ಹಸ್ತ ಪ್ರತಿ ಬಹುಮಾನಕ್ಕೆ ಆಯ್ಕೆಯಾಗಿದ್ದು, ಮುಂದಿನ ಫೆಬ್ರವರಿ ತಿಂಗಳಲ್ಲಿ ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಬಹುಮಾನವು ರೂ.೭ಸಾವಿರ ನಗದು, ಪ್ರಶಂಸನಾ ಪತ್ರ, ಫಲಕಗಳನ್ನು ಒಳಗೊಂಡಿದೆ. ಮಿಲನ ಸೊಮವಾರಪೇಟೆ ತಾಲೂಕು ಮೀನುಗಾರಿಕಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.