ಮಡಿಕೇರಿ, ಡಿ. ೨೫: ಪ್ರವಾಸಿ ಜಿಲ್ಲೆಯಾಗಿ ಆಕರ್ಷಣೆ ಪಡೆದಿರುವ ಕೊಡಗು ಜಿಲ್ಲೆಯಾದ್ಯಂತ ಇದೀಗ ಜನಜಂಗುಳಿ, ವಾಹನ ದಟ್ಟಣೆಯದೇ ಕಾರು ಬಾರು. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಹಿಡಿದು ಬಹುತೇಕ ಇಡೀ ಜಿಲ್ಲೆ ಪ್ರವಾಸಿಗರಿಂದ ತುಂಬಿಹೋಗಿದೆ. ಕ್ರಿಸ್ಮಸ್ ರಜೆಯ ಸಂಭ್ರಮ, ಅದರಲ್ಲೂ ವಾರಾಂತ್ಯದ ಅವಕಾಶ - ಇದರೊಂದಿಗೆ ವರ್ಷಾಂತ್ಯದ ಕಲರವದಲ್ಲಿ ಇಡೀ ಜಿಲ್ಲೆ ಭರ್ತಿಯಾಗಿದೆ. ಬಹುತೇಕ ಹೋಂಸ್ಟೇ, ರೆಸಾರ್ಟ್, ಲಾಡ್ಜ್ಗಳು ಬುಕ್ ಆಗಿವೆ. ವಾಸ್ತವ್ಯಕ್ಕಾಗಿ ಪ್ರವಾಸಿಗರು ಪರದಾಡುವ ಪರಿಸ್ಥಿತಿ ಒಂದೆಡೆಯಾಗಿದ್ದರೆ - ವಾಹನ ದಟ್ಟಣೆಯಿಂದಾಗಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್... ಸಾಮಾನ್ಯ ಎಂಬAತಾಗಿದೆ.
ಇದರೊAದಿಗೆ ರಜಾ ದಿನಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ಥಳೀಕರ ವಿವಾಹ ಮತ್ತಿತರ ಶುಭ ಸಮಾರಂಭಗಳು ನಡೆಯುತ್ತಿವೆ. ಇದರಿಂದಾಗಿ ಜನರ ಓಡಾಟ, ವಾಹನಗಳ ಭರಾಟೆ ಅಧಿಕವಾಗಿದೆ. ಈ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಮೂಲಕ ಇದೇ ಪ್ರಥಮ ಬಾರಿಗೆ ಜಾಗತಿಕ ಕೊಡವ ಮೇಳ (ಗ್ಲೋಬಲ್ ಕೊಡವ ಸಮ್ಮಿಟ್) ಕಾರ್ಯಕ್ರಮವೂ ತಾ ೨೯-೩೦ರಂದು ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕೂ ವಿದೇಶಗಳಿಂದಲೂ ಸೇರಿದಂತೆ ವಿವಿಧೆಡೆಗಳಿಂದ ಕೊಡವ ಜನಾಂಗದ ಮಂದಿ ಆಗಮಿಸುತ್ತಿದ್ದು ಇವರುಗಳೂ ಹಲವಾರು ಹೋಂಸ್ಟೇ, ರೆಸಾರ್ಟ್, ಲಾಡ್ಜ್ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದಾರೆ.
ವಿಶೇಷವೆAಬAತೆ ಈ ಬಾರಿ ಕ್ರಿಸ್ಮಸ್ ಹಾಗೂ ವರ್ಷಾಂತ್ಯದ ದಿನಕ್ಕೆ ವಾರಾಂತ್ಯದ ರಜೆಯೂ ಥಳಕು ಹಾಕಿಕೊಂಡಿರುವುದರಿAದ ಪ್ರವಾಸಿಗರ ದೃಷ್ಟಿ ಪ್ರಾಕೃತಿಕ ಜಿಲ್ಲೆಯಾದ ಕೊಡಗಿನತ್ತ ಹೆಚ್ಚಿದೆ. ಈ ಎಲ್ಲಾ ಕಾರಣಗಳಿಂದಾಗಿ ಬಹುಶಃ ಮುಂದಿನ ಮಂಗಳವಾರದ ತನಕವೂ ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜನರು ಈಗಿನ ಪರಿಸ್ಥಿತಿಯಲ್ಲಿ ಒಂದೆಡೆಯಿAದ ಮತ್ತೊಂದೆಡೆಗೆ ತೆರಳಲು ನಿಗದಿತ ಸಮಯಕ್ಕಿಂತ ತಾಸುಗಟ್ಟಲೆ ವಿಳಂಬವನ್ನು ಎದುರಿಸುವಂತಾಗಿರುವುದು ಸಾಮಾನ್ಯವಾಗಿದೆ.