ಚೆಯ್ಯಂಡಾಣೆ, ಡಿ ೨೫. ಕನ್ನಡ ಸಾಹಿತ್ಯಕ್ಕೆ ಮುಸಲ್ಮಾನ ಸಮುದಾಯದ ಕೊಡುಗೆಯೂ ಅಪಾರವಾದದ್ದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ನೆಲ್ಲಿಹುದಿಕೇರಿಯಲ್ಲಿ ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ ಚೆಯ್ಯಂಡಾಣೆ, ಡಿ ೨೫. ಕನ್ನಡ ಸಾಹಿತ್ಯಕ್ಕೆ ಮುಸಲ್ಮಾನ ಸಮುದಾಯದ ಕೊಡುಗೆಯೂ ಅಪಾರವಾದದ್ದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ನೆಲ್ಲಿಹುದಿಕೇರಿಯಲ್ಲಿ ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ ಮಾತನಾಡಿ ಸಂವಿಧಾನವನ್ನು ಉಳಿಸುವ ಕೆಲಸವಾಗಬೇಕು, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವಂತಾಗಬೇಕು ಎಂದರು.

ಎಸ್‌ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಕೊಳಕೇರಿ ಮಾತನಾಡಿ ನಮ್ಮ ಬರಹ ಗಳು ಸಮಾಜದ ಹಿತಾಸಕ್ತಿಯನ್ನು ಕಾಪಾಡುವಂತಿರಬೇಕು ಎಂದರು.

ಕೆಪಿಸಿಸಿ ವಕ್ತಾರ ಲಕ್ಷö್ಮಣ್, ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ, ನಿಯಾಜ್ ಸುಂಟಿಕೊಪ್ಪ, ಸಿಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಾದುಶಾ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಹಸೈನಾರ್ ಪಿ.ಸಿ., ಖಾಲೀದ್ ಫೈಝಿ, ಶಾಫಿ ಮಾಸ್ಟರ್, ಇಬ್ರಾಹಿಂ ಮಾಸ್ಟರ್ ಮತ್ತಿತರರು ಮಾತನಾಡಿದರು.

ತಾ. ೨೩ ರಂದು ರಾತ್ರಿ ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್ಸೋಲ ಧಾರ್ಮಿಕ ಪ್ರವಚನ ನೀಡಿದರು. ಕಾರ್ಯಕ್ರಮವನ್ನು ಕರ್ನಾಟಕ

ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾಧ್ಯಕ್ಷ ಲತೀಫ್ ಸುಂಟಿಕೊಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಎಸ್‌ಎಸ್‌ಎಫ್ ಅಧ್ಯಕ್ಷ ಝಬೈರ್ ಸಅದಿ ಮಾಲ್ದಾರೆ ವಹಿಸಿದರು.

(ಮೊದಲ ಪುಟದಿಂದ) ಈ ಸಂದರ್ಭ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಚೊಕ್ಕಂಡಳ್ಳಿ, ವೀರಾಜಪೇಟೆ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಮ್, ಮರ್ಕಜ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ, ಎರ್ಮು ಹಾಜಿ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಝ, ಹಮೀದ್ ಕಬಡಕೇರಿ, ಎಸ್‌ಎಸ್‌ಎಫ್ ರಾಜ್ಯ ಕಾರ್ಯದರ್ಶಿ ಮುಜೀಬ್, ಮತಿತ್ತರು ಉಪಸ್ಥಿತರಿದ್ದರು. ಎಸ್‌ಎಸ್‌ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತಿ ಸ್ವಾಗತಿಸಿ, ವಂದಿಸಿದರು.

ತಾ ೨೩ ರಿಂದ ಆರಂಭಗೊAಡ ಸ್ವರ್ಧೆಗಳಲ್ಲಿ ೫ ವಿಭಾಗಳಲ್ಲಿ ೧೨೫ಕ್ಕೂ ಹೆಚ್ಚು ಸ್ವರ್ಧೆಗಳಲ್ಲಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.

ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಡಿವಿಷನ್‌ಗಳ ಮಧ್ಯ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಿತು.

ಇದರಲ್ಲಿ ಮಡಿಕೇರಿ ಡಿವಿಷನ್ ೧೫೩೧ ಅಂಕ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ವೀರಾಜಪೇಟೆ ಡಿವಿಷನ್ ೧೫೧೦ ಅಂಕ ಪಡೆದು ರನ್ನಸ್‌ಗೆ ತೃಪ್ತಿಪಟ್ಟು ಕೊಂಡಿತು.

ಮೂರನೇ ಸ್ಥಾನ ೧೩೮೦ ಅಂಕ ಪಡೆದ ಸೋಮವಾರಪೇಟೆ ಡಿವಿಷನ್ ತಂಡದ ಪಾಲಾಯಿತು. ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಫೆಬ್ರವರಿ ೯ ರಿಂದ ೧೧ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಯನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವೀರಾಜಪೇಟೆ ನೆರವೇರಿಸಿದರು. ಪ್ರಾರ್ಥನೆಗೆ ಸಯ್ಯದ್ ಸಹದುದ್ದಿನ್ ತಂಗಳ್ ನೇತೃತ್ವ ವಹಿಸಿದರು. ಮುಖ್ಯ ಭಾಷಣಕಾರರಾಗಿ ಕೇರಳದ ವಾಗ್ಮಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮನ್ ಸಖಾಫಿ ಆಗಮಿಸಿದರು.

ಕೊಡಗು ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಹಮೀದ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಕೋಶಾಧಿಕಾರಿ ಅಬ್ದುಲ್ಲ, ಎಸ್‌ಜೆಎಂ ಅಧ್ಯಕ್ಷÀ ಮುಸ್ತಫಾ ಸಖಾಪಿ, ಮತ್ತಿತರರು ಉಪಸ್ಥಿತರಿದ್ದರು

-ಅಶ್ರಫ್