ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಡಿ. ೨೫: ಕೊಡಗು ಮೂಲದ ಕ್ರಿಕೆಟ್ ಆಟಗಾರ ಕೆ.ಸಿ. ಕಾರ್ಯಪ್ಪ ಅವರು ತಾವು ಮಾಜಿ ಪ್ರಿಯತಮೆಯಿಂದ ಮಾನಸಿಕ ಕಿರುಕುಳ ಎದುರಿಸುತ್ತಿರುವುದಾಗಿ ಆರೋಪಿಸಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆ ರಿಲೇಶನ್ ಶಿಪ್‌ನಲ್ಲಿದ್ದ ತನ್ನ ಮಾಜಿ ಪ್ರಿಯತಮೆ ದಿಶಾ ಕಾರ್ಯಪ್ಪ ಎಂಬವರಿAದ ಮಾನಸಿಕ ಕಿರುಕುಳ ಎದುರಿಸುತ್ತಿರುವುದಾಗಿ ಬಾಗಲಗುಂಟೆ ಪೊಲೀಸ್ ಠಾಣೆಗೆ ಕಾರ್ಯಪ್ಪ ದೂರು ನೀಡಿದ್ದಾರೆ. ಮತ್ತೊಂದೆಡೆ ದಿಶಾ ಕಾರ್ಯಪ್ಪ ಕೂಡ ಕೆ.ಸಿ. ಕಾರ್ಯಪ್ಪ ವಿರುದ್ಧ ಆರೋಪಗಳನ್ನು ಹೊರಿಸಿ ಆರ್‌ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎರಡೂ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ತಮಗೆ ಒಂದೂವರೆ ವರ್ಷದ ಹಿಂದೆ ದಿಶಾ ಅವರ ಪರಿಚಯವಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತಿದ್ದೆವು; ಆದರೆ ಒಂದು ವರ್ಷದ ಹಿಂದೆ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. ಆ ಸಂದರ್ಭದಲ್ಲಿ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು. ನಂತರದ ದಿನಗಳಲ್ಲಿ ದಿಶಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಕಾರ್ಯಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಿಶಾ ಅವರು ಪೋಲೀಸರಿಗೆ ನೀಡಿರುವ ದೂರಿನಲ್ಲಿ ರಿಲೇಶನ್ ಶಿಪ್‌ನಲ್ಲಿದ್ದೆವು. ಇಬ್ಬರೂ ಮದುವೆಯಾಗೋಣವೆಂದು ನಂಬಿಸಿದ್ದ ಕಾರ್ಯಪ್ಪ್ಪ, ತಮ್ಮಿಂದ ಹಂತಹAತವಾಗಿ ೨ ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನಿನ್ನಿಂದ ನಾನು ಯಾವುದೇ ಹಣ ಪಡೆದಿಲ್ಲ' ಎಂದು ನನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ದಿಶಾ ಆರೋಪಿಸಿ ದೂರು ದಾಖಲಿಸಿದ್ದಾರೆ.