ಪೊನ್ನಂಪೇಟೆ, ಡಿ. ೨೫: ಕ್ರೀಡೆಯ ತವರು ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾಕೂಟಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಸರಕಾರ ಮುಂದಾಗಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು.
ನಲ್ವತ್ತೋಕ್ಲಿನ ಚೋಕ್ ಸಿಟಿ ಫುಟ್ಬಾಲ್ ಕ್ಲಬ್ ಆಶಯದಲ್ಲಿ ಸ್ಥಳೀಯ ಮೊಹಿದೀನ್ ಜುಮ್ಮಾ ಮಸೀದಿಯ ಆಟದ ಮೈದಾನದಲ್ಲಿ ಕಳೆದ ೨ ದಿನಗಳಿಂದ ನಡೆದ ಮೊದಲನೇ ವರ್ಷದ ರಾಜ್ಯಮಟ್ಟದ ಫೈಸ್ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರ ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅದರ ಮೂಲಕ ಕ್ರೀಡಾಕೂಟಗಳಿಗೆ ಅನುದಾನದ ನೆರವು ಒದಗಿಸಿದರೆ ಅದು ಕ್ರೀಡೆಯ ತವರಾದ ಕೊಡಗಿಗೆ ಸಲ್ಲುವ ಸೂಕ್ತ ಗೌರವವಾಗುತ್ತದೆ ಎಂದು ಹೇಳಿದರು.
ರಾಜ್ಯಮಟ್ಟದ ಫೈಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸ್ಕಾ÷್ವಡ್ ಚೋಕ್ ಸಿಟಿ ತಂಡ ವಿನ್ನರ್ಸ್ ಪ್ರಶಸ್ತಿ ಪಡೆದುಕೊಂಡರೆ, ಸುಂಕದಕಟ್ಟೆಯ ಉತ್ತಮ್ ಫ್ರೆಂಡ್ಸ್ ತಂಡ ರನ್ನರ್ಸ್ ಸ್ಥಾನ ಪಡೆಯಿತು. ಫೈನಲ್ ಪಂದ್ಯದಲ್ಲಿ ಸ್ಕಾ÷್ವಡ್ ಚೋಕ್ ಸಿಟಿ ತಂಡ ಸುಂಕದಕಟ್ಟೆಯ ಉತ್ತಮ ಫ್ರೆಂಡ್ಸ್ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಸ್ಕಾ÷್ವಡ್ ಚೋಕ್ ಸಿಟಿ ತಂಡ ಚಾಮೆ ಫುಟ್ಬಾಲ್ ಕ್ಲಬ್ ತಂಡವನ್ನು ೧-೦ ಗೋಲಿನಿಂದ ಮತ್ತು ಸುಂಕದಕಟ್ಟೆಯ ಉತ್ತಮ್ ಫ್ರೆಂಡ್ಸ್ ತಂಡ ಸಿ.ಎಫ್.ಸಿ ಅಮ್ಮತ್ತಿ ತಂಡವನ್ನು ೧-೦ ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ವಿಜೇತ ತಂಡಗಳಿಗೆ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನ ಸೇರಿದಂತೆ ಪಾರಿ ತೋಷಕಗಳನ್ನು ವಿತರಿಸಲಾಯಿತು. ಒಟ್ಟು ೩೨ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಸ್ಕಾ÷್ವಡ್ ಚೋಕ್ ಸಿಟಿ ತಂಡದ ಶಾಲು, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಸುಂಕದಕಟ್ಟೆ ಉತ್ತಮ್ ಫ್ರೆಂಡ್ಸ್ ತಂಡದ ಚ್ಯಾರಿ, ಅತ್ಯುತ್ತಮ ಸ್ಟೆöÊಕರ್ ಪ್ರಶಸ್ತಿಯನ್ನು ಸ್ಕಾ÷್ವಡ್ ಚೋಕ್ ಸಿಟಿ ತಂಡದ ವಿಜು, ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಸುಂಕದಕಟ್ಟೆ ಉತ್ತಮ್ ಫ್ರೆಂಡ್ಸ್ ತಂಡದ ಧನು, ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಸುಂಕದಕಟ್ಟೆ ಉತ್ತಮ್ ಫ್ರೆಂಡ್ಸ್ ತಂಡದ ಕಣ್ಣ ಅವರು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ಖಜಾನಾಧಿಕಾರಿ ಕನ್ನಡಿಯಂಡ ಎ. ಆಲಿ ಹಾಜಿ, ನಲ್ವತ್ತೋಕ್ಲಿನ ಮೊಹಿದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷ ಡಿ.ಎಫ್. ಆಶ್ರಫ್, ಸ್ಥಳೀಯರಾದ ಹೆಚ್.ಎ. ಮೊಹಮ್ಮದ್ ಹಾಜಿ, ಕೆ.ಎಂ. ಹ್ಯಾರಿಸ್, ಪಿ.ಎ. ಬಶೀರ್, ಡಿ.ಎಸ್. ಶರ್ಹಾನ್, ಸಯಿದ್, ಡಿ.ಎಂ. ಸಿರಾಜ್, ಎಚ್.ಎಂ. ನೌಫಲ್ ಮೊದಲಾದವರು ಭಾಗವಹಿಸಿದ್ದರು.
ನಲ್ವತ್ತೋಕ್ಲಿನ ಚೋಕ್ ಸಿಟಿ ಫುಟ್ಬಾಲ್ ಕ್ಲಬ್ನ ಮುಖ್ಯಸ್ಥರಾದ ಶಾಹಿದ್, ಶರ್ಮಿದ್, ಮೊಹಾದ್, ಅಜನಾಸ್, ಅಜ್ಮಲ್ ಮೊದಲಾದವರು ಪಂದ್ಯಾವಳಿಯ ಮೇಲುಸ್ತುವಾರಿ ವಹಿಸಿದ್ದರು.
-ರಫೀಕ್ ತೂಚಮಕೇರಿ