ಸೋಮವಾರಪೇಟೆ, ಡಿ. ೨೫: ಇಲ್ಲಿನ ಕುರುಹಿನ ಶೆಟ್ಟಿ ಸಮಾಜದ ಶ್ರೀ ರಾಮಮಂದಿರದಲ್ಲಿ ೭ನೇ ವರ್ಷದ ಮೈಕುಂಠ ಏಕಾದಶಿ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಪೂಜಾ ಕಾರ್ಯಕ್ರಮದ ಪ್ರಯುಕ್ತ ದೇವಾಲಯವನ್ನು ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ೭ ರಿಂದ ೧೦ ಮತ್ತು ೫ ರಿಂದ ೮.೩೦ ರವರೆಗೆ ಸ್ವರ್ಗದ ಬಾಗಿಲ ಪ್ರವೇಶ ಮತ್ತು ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಸಂಜೆ ಸೀತಾ ಬಳಗದ ವತಿಯಿಂದ ವಿಷ್ಣು ಸಹಸ್ರ ನಾಮಾವರಣ ಹಾಗೂ ೬.೩೦ರಿಂದ ಚಿಕ್ಕಮಗಳೂರಿನ ಉಪನ್ಯಾಸಕ ಸಾಯಿನಂದನ್ ಅಯ್ಯಂಗಾರ್ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಸಿ. ವೆಂಕಟೇಶ್, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸೀತಾ ಬಳಗದ ಅಧ್ಯಕ್ಷೆ ಯಶೋಧ, ಯುವಕ ಸಂಘದ ಅಧ್ಯಕ್ಷ ಬಿ.ಜಿ. ರವಿ ಇದ್ದರು.