ವೀರಾಜಪೇಟೆ, ಡಿ. ೨೫: ಎಲ್ಲೆಡೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿರುವ ಚರ್ಚ್ಗಳು... ತಡರಾತ್ರಿ ವಿಶೇಷ ಪ್ರಾರ್ಥನೆ... ಆಕರ್ಷಣೀಯ ಗೋದಲಿಗಳು, ಅವುಗಳ ಸುತ್ತ ನಕ್ಷತ್ರಗಳ ಮಿಂಚು... ಹೀಗೆ ಏಸುಕ್ರಿಸ್ತರ ಜನ್ಮ ಸ್ಮರಣೆಯ ಕ್ರಿಸ್ಮಸ್ ಹಬ್ಬವನ್ನು ಕ್ರೆöÊಸ್ತ ಬಾಂಧವರು ನಾಡಿನಲ್ಲೆಡೆ ಶ್ರದ್ಧಾಪೂರ್ವಕವಾಗಿ ಆಚರಿಸಿ ಸಂಭ್ರಮಿಸಿದರು.
ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದ್ದು ಸಹಸ್ರ ಸಂಖ್ಯೆಯಲ್ಲಿ ಕ್ರೆöÊಸ್ತರು ಬಲಿ ಪೂಜೆಯಲ್ಲಿ ಭಾಗಿಗಳಾದರು.
ವೀರಾಜಪೇಟೆ ತಾಲೂಕಿನ ಚರ್ಚ್ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರೆöÊಸ್ತರ ಮನೆಗಳಲ್ಲಿ, ಚರ್ಚ್ಗಳ ಆವರಣದಲ್ಲಿ ಗೋದಲಿಗಳನ್ನು ನಿರ್ಮಿಸಲಾಗಿತ್ತು. ರಾತ್ರಿ ವೇಳೆ ಕ್ಯಾರೋಲ್ ಗಾಯನದ ಮೂಲಕ ಕ್ರಿಸ್ತ ಜನನ ಸ್ಮರಿಸಿ ಬಲಿ ಪೂಜೆ ಪ್ರಾರ್ಥನೆ ನಡೆದವು. ಹಲವು ದಿನಗಳ ತಯಾರಿಯ ಬಳಿಕ ರವಿವಾರ ರಾತ್ರಿ ಕ್ರಿಸ್ಮಸ್ ಜಾಗರಣೆಯ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ದಯಾನಂದ ಪ್ರಭು ಕ್ರಿಸ್ಮಸ್ ಹಬ್ಬದ ಬಲಿ ಪೂಜೆ ಅರ್ಪಿಸಿ ಕ್ರಿಸ್ತ ಜನನದ ಮಹತ್ವ ಹಾಗೂ ಕ್ರಿಸ್ಮಸ್ ಸಂದೇಶ ನೀಡಿ ನಮ್ಮೆಲ್ಲರನ್ನು ಪ್ರೀತಿಸುವುದಕ್ಕಾಗಿ ಭೂಮಿಗೆ ಆಗಮಿಸಿದ ಯೇಸು ಸ್ವಾಮಿ ದನದ ಕೊಟ್ಟಿಗೆಯಾದ ಗೋದಲಿಯಲ್ಲಿ ಜನಿಸಿ ತನ್ನ ಸರಳತೆ ಮೆರೆದರು. ಪ್ರೀತಿ ಪಡೆಯುವುದರಲ್ಲಿ ಇರುವ ಸಂತೋಷಕ್ಕಿAತ ಇತರರಿಗೆ ಸೇವೆ ಮೂಲಕ ನೀಡುವುದರಲ್ಲಿ ಹೆಚ್ಚಿನ ಸಮಾಧಾನ ನೀಡುತ್ತದೆ ಪರಸ್ಪರ ದ್ವೇಷಿಸುವುದಕ್ಕಿಂತ ಯೇಸುವಿನಂತೆ ಇತರರನ್ನು ಪ್ರೀತಿಸುವ ಕೆಲಸ ಮಾಡಬೇಕಾಗಿದೆ. ಕ್ರಿಸ್ತ ಜಯಂತಿ ಪ್ರೀತಿ ಹಂಚುವ ಹಬ್ಬವಾಗಿದ್ದು ಜಗತ್ತಿನಲ್ಲಿಡೆ ಸದಾ ಶಾಂತಿ ನೆಲೆಸುವಂತೆ ಪ್ರಾರ್ಥಿಸಬೇಕು ಎಂದು ಧರ್ಮ ಸಂದೇಶದಲ್ಲಿ ತಿಳಿಸಿದರು.
ಸೋಮವಾರ ಬೆಳಿಗ್ಗೆಯಿಂದಲೇ ಚರ್ಚ್ಗಳಲ್ಲಿ ಹಬ್ಬದ ಬಲಿ ಪೂಜೆ ಶುಭಾಶಯಗಳು ವಿನಿಮಯ ನಡೆಯುವುದು, ಮನೆ ಮನೆಗಳಲ್ಲಿ ಕ್ರಿಸ್ಮಸ್ ವಿಶೇಷ ತಿಂಡಿ ತಿನಿಸು ತಯಾರಿಕೆ, ನೆರೆಹೊರೆಯವರೊಂದಿಗೆ ವಿನಿಮಯ ಮಾಡುವುದು ಕಂಡು ಬಂತು.
ರವಿವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲ ಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು. ಸುಗಂಧಗಳನ್ನು ಅರ್ಪಿಸುವುದರ ಮೂಲಕ ಯೇಸು ಸ್ವಾಮಿಯ ಜನನವನ್ನು ಕ್ರೆöÊಸ್ತರು ಸ್ವಾಗತಿಸಿದರು.
ರೆ. ಫಾ. ಮದಲೈ ಮುತ್ತು, ಫಾ. ಐಸಾಕ್ ರತ್ನಾಕರ್, ಗುರು ಯೇಸು ಪ್ರಭು ಸೇರಿದಂತೆ ಇತರ ಧರ್ಮಗುರುಗಳು, ಗ್ರಾಮೀಣ ಪ್ರದೇಶದ ಕ್ರೆöÊಸ್ತ ಬಾಂಧವರು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು. ಈ ಸಂದರ್ಭ ಭಕ್ತಾದಿಗಳಿಗೆ ಕೇಕ್ ವಿತರಿಸಲಾಯಿತು.ನಾಪೋಕ್ಲು : ಸ್ಥಳೀಯ ಸಂತಮೇರಿ ಮಾತೆಯ ದೇವಾಲಯದಲ್ಲಿ ಕ್ರೆöÊಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಶ್ರದ್ಧಾಭಕ್ತಿ ಸಡಗರ-ಸಂಭ್ರಮದಿAದ ಆಚರಿಸಿದರು.
ಧರ್ಮ ಗುರು ಜ್ಞಾನಪ್ರಕಾಶ್ ದೇವಾಲಯದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕ್ರಿಸ್ತ ಯೇಸುವಿನ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅವರಂತೆ ಬದುಕಿ ಬಾಳಬೇಕು. ಬೇರೆಯವರ ಭಾವನೆ ಅರ್ಥ ಮಾಡಿಕೊಂಡು ಅವರ ಕಷ್ಟಕ್ಕೆ ಸ್ಪಂದಿಸುವAತಾಗಬೇಕೆAದರು.
(ಮೊದಲ ಪುಟದಿಂದ) ಬೇರೆಯವರ ಕಣ್ಣಲ್ಲಿ ಕಣ್ಣೀರು ತರಿಸದೆ ನಾವು ಸುಖವಾಗಿ ಬದುಕಿ ಬೇರೆಯವರು ಸುಖವಾಗಿ ಬದುಕುವಂತೆ ಯೋಚಿಸಿ ಬದುಕುವುದೇ ಕ್ರೆöÊಸ್ತರ ಜೀವನ ಎಂದು ಹಿತ ನುಡಿದು ಹಬ್ಬದ ಶುಭಾಶಯ ಕೋರಿದರು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಆಕರ್ಷಕ ಗೋದಲಿ ನಿರ್ಮಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯೇಸುವಿನ ಜನನದ ಗೋದಲಿ ನಿರ್ಮಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಜಾಲಿ ಶರ್ಲಿ, ದ್ವಿತೀಯ ಸ್ಥಾನ ಕೆ.ಜೆ. ರಾಯ್, ತೃತೀಯ ಅಹಿಲ್ ಜೋಸೆಫ್ ಪಡೆದರು. ವಿಜೇತರಿಗೆ ಧರ್ಮ ಗುರು ಜ್ಞಾನಪ್ರಕಾಶ್ ಬಹುಮಾನ ವಿತರಿಸಿದರು. ಶನಿವಾರಸಂತೆ: ಪಟ್ಟಣದ ಬ್ರೆöÊಟ್ ಅಕಾಡೆಮಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಂತಿದೂತ ಯೇಸುಕ್ರಿಸ್ತನ ಜನ್ಮ ದಿನವನ್ನು ಸಂಭ್ರಮದಿAದ ಆಚರಿಸಲಾಯಿತು.
ಕ್ರಿಸ್ಮಸ್ ಪ್ರಯುಕ್ತ ಬಣ್ಣ ಬಣ್ಣದ ಉಡುಪು ಧರಿಸಿದ್ದ ಪುಟ್ಟ ಮಕ್ಕಳು ತಲೆ ಮೇಲೆ ಸಾಂತಕ್ಲಾಸ್ ಟೋಪಿ ಧರಿಸಿ, ಕೈಯಲ್ಲಿ ಗ್ರಿಟಿಂಗ್ಸ್ ಕಾರ್ಡ್ ಹಿಡಿದು ಶುಭಾಶಯ ವಿನಿಮಯ ಮಾಡಿಕೊಂಡರು.ಶಾಲಾ ಆವರಣದಲ್ಲಿ ಸುಂದರ ಗೋದಲಿ ನಿರ್ಮಿಸಿದ್ದು ಯೇಸು ಕ್ರಿಸ್ತನ ಜನ್ಮ ದೃಶ್ಯದ ಕಿರು ನಾಟಕ ಪ್ರದರ್ಶಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.
ವಿದ್ಯಾಸAಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿ ಹೇಮಾ ಪರಮೇಶ್, ಮುಖ್ಯ ಶಿಕ್ಷಕಿ ಟಿ.ಎನ್. ಚೈತ್ರಾ, ಸಹಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.
ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಐಪಿಸಿ ಪ್ರೊಟೆಸ್ಟಂಟ್ ಚರ್ಚ್ನಲ್ಲಿ ಕ್ರೆöÊಸ್ತ ಸಮುದಾಯದವರು ಯೇಸುಕ್ರಿಸ್ತನ ಜನ್ಮದಿನವನ್ನು ಸ್ತುತಿ-ಸ್ತೋತ್ರಗಳನ್ನು ದೇವರಿಗೆ ಅರ್ಪಿಸಿ, ದೇವರ ನಾಮವನ್ನು ಮಹಿಮೆಪಡಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಚರ್ಚ್ನ ಅಲಂಕೃತ ಸಭಾಂಗಣದಲ್ಲಿ ಸಭಾ ಪಾಲಕ ಪಾಸ್ಟರ್ ಪಿ.ಸಿ.ಫ್ರೆಡ್ಡಿ ಅವರು ಭಕ್ತಾದಿಗಳಿಗೆ ಸಂದೇಶ ನೀಡಿ, ಇಂದು ಬಹುತೇಕ ಜನರು ಮನಶಾಂತಿಯನ್ನು ಹುಡುಕುತ್ತಾ ಅದನ್ನು ಪಡೆಯಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಶಾಂತಿ-ಸಭೆಗಳನ್ನು ನಡೆಸುತ್ತಿದ್ದಾರೆ. ಕೆಲವರು ಗುರುಗಳನ್ನು ಹುಡುಕಾಡಿದರೆ ಮತ್ತೆ ಕೆಲವರು ಸಮಾಧಾನ ಹಾಗೂ ಸ್ವಸ್ಥತೆಗಾಗಿ ಅಲ್ಕೋಹಾಲ್ ಮತ್ತು ಡ್ರಗ್ಸ್ನ ಮೊರೆ ಹೋಗುತ್ತಾರೆ. ಆದರೆ, ಶಾಶ್ವತ ಶಾಂತಿ ಮತ್ತು ಸಮಾಧಾನ ಹೊಂದಬೇಕಾದರೆ ದೇವರನ್ನು ಹೃದಯದಲ್ಲಿ ಸ್ಥಾಪಿಸಿ, ಧ್ಯಾನಿಸುವ ಮೂಲಕ ಮಾತ್ರ ಪಡೆಯಬಹುದು. ಯೇಸುಕ್ರಿಸ್ತನು ಪ್ರೀತಿಯ ಸಂಕೇತವಾಗಿದ್ದು ನಿನ್ನಂತೆಯೇ ನಿನ್ನ ನೆರೆ ಹೊರೆಯವರನ್ನು ಪ್ರೀತಿಸಿ ಎಂಬ ಸಂದೇಶ ನೀಡಿದ್ದಾರೆ. ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನೇ ಕೇಳಬೇಕು ಎಂಬುದೆ ಕ್ರಿಸ್ಮಸ್ ಹಬ್ಬದ ಮುಖ್ಯ ಧ್ಯೇಯವಾಗಿದೆ ಎಂದರು.
ಸಭೆಯ ಬಳಿಕ ಪಟ್ಟಣ ಹಾಗೂ ವಿವಿಧೆಡೆಯಿಂದ ಆಗಮಿಸಿದ ಭಕ್ತಾದಿಗಳು ಒಟ್ಟಾಗಿ ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ಜನತೆಯನ್ನು ಕಾಪಾಡುವಂತೆ ಯೇಸುಕ್ರಿಸ್ತನನ್ನು ಪ್ರಾರ್ಥಿಸಿದರು. ಸಂಭ್ರಮದಿAದ ಕ್ರಿಸ್ಮಸ್ ಹಬ್ಬವನ್ನಾಚರಿಸಿದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಐಪಿಸಿ ಪ್ರೊಟೆಸ್ಟಂಟ್ ಚರ್ಚ್ನಲ್ಲಿ ಕ್ರೆöÊಸ್ತ ಸಮುದಾಯದವರು ಯೇಸುಕ್ರಿಸ್ತನ ಜನ್ಮದಿನವನ್ನು ಸ್ತುತಿ-ಸ್ತೋತ್ರಗಳನ್ನು ದೇವರಿಗೆ ಅರ್ಪಿಸಿ, ದೇವರ ನಾಮವನ್ನು ಮಹಿಮೆಪಡಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಚರ್ಚ್ನ ಅಲಂಕೃತ ಸಭಾಂಗಣದಲ್ಲಿ ಸಭಾ ಪಾಲಕ ಪಾಸ್ಟರ್ ಪಿ.ಸಿ.ಫ್ರೆಡ್ಡಿ ಅವರು ಭಕ್ತಾದಿಗಳಿಗೆ ಸಂದೇಶ ನೀಡಿ, ಇಂದು ಬಹುತೇಕ ಜನರು ಮನಶಾಂತಿಯನ್ನು ಹುಡುಕುತ್ತಾ ಅದನ್ನು ಪಡೆಯಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಶಾಂತಿ-ಸಭೆಗಳನ್ನು ನಡೆಸುತ್ತಿದ್ದಾರೆ. ಕೆಲವರು ಗುರುಗಳನ್ನು ಹುಡುಕಾಡಿದರೆ ಮತ್ತೆ ಕೆಲವರು ಸಮಾಧಾನ ಹಾಗೂ ಸ್ವಸ್ಥತೆಗಾಗಿ ಅಲ್ಕೋಹಾಲ್ ಮತ್ತು ಡ್ರಗ್ಸ್ನ ಮೊರೆ ಹೋಗುತ್ತಾರೆ. ಆದರೆ, ಶಾಶ್ವತ ಶಾಂತಿ ಮತ್ತು ಸಮಾಧಾನ ಹೊಂದಬೇಕಾದರೆ ದೇವರನ್ನು ಹೃದಯದಲ್ಲಿ ಸ್ಥಾಪಿಸಿ, ಧ್ಯಾನಿಸುವ ಮೂಲಕ ಮಾತ್ರ ಪಡೆಯಬಹುದು. ಯೇಸುಕ್ರಿಸ್ತನು ಪ್ರೀತಿಯ ಸಂಕೇತವಾಗಿದ್ದು ನಿನ್ನಂತೆಯೇ ನಿನ್ನ ನೆರೆ ಹೊರೆಯವರನ್ನು ಪ್ರೀತಿಸಿ ಎಂಬ ಸಂದೇಶ ನೀಡಿದ್ದಾರೆ. ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನೇ ಕೇಳಬೇಕು ಎಂಬುದೆ ಕ್ರಿಸ್ಮಸ್ ಹಬ್ಬದ ಮುಖ್ಯ ಧ್ಯೇಯವಾಗಿದೆ ಎಂದರು.
ಸಭೆಯ ಬಳಿಕ ಪಟ್ಟಣ ಹಾಗೂ ವಿವಿಧೆಡೆಯಿಂದ ಆಗಮಿಸಿದ ಭಕ್ತಾದಿಗಳು ಒಟ್ಟಾಗಿ ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ಜನತೆಯನ್ನು ಕಾಪಾಡುವಂತೆ ಯೇಸುಕ್ರಿಸ್ತನನ್ನು ಪ್ರಾರ್ಥಿಸಿದರು. ಸಂಭ್ರಮದಿAದ ಕ್ರಿಸ್ಮಸ್ ಹಬ್ಬವನ್ನಾಚರಿಸಿದರು.ಸುಂಟಿಕೊಪ್ಪ : ಪ್ರಭು ಕ್ರಿಸ್ತರು ಮಾನವರಾಗಿ ಧರೆಯಲ್ಲಿ ಜನಿಸಿದ ಕ್ರಿಸ್ಮಸ್ ಹಬ್ಬವನ್ನು ಸಂತ ಅಂತೋಣಿಯವರ ದೇವಾಲಯದಲ್ಲಿ ಭಾನುವಾರ ಮಧ್ಯ ರಾತ್ರಿ ಕ್ರೆöÊಸ್ತ ಬಾಂಧವರು ಪ್ರಾರ್ಥನೆ ಹಾಗೂ ಆಡಂಬರ ದಿವ್ಯ ಬಲಿಪೂಜೆ ಆರಾಧನೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು.
ಸಂತ ಅಂತೋಣಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ಕ್ರಿಸ್ತ ಜನಿಸಿದಾಗ ಮೂಡಿಬಂದ ತಾರೆಗಳನ್ನು ಅಳವಡಿಸಿ ಸಿಂಗಾರಿ ಸಲಾಗಿತ್ತು. ಪ್ರಭು ಕ್ರಿಸ್ತರ ಜನನದ ಸ್ಥಳವಾದ ಗೋದಲಿಯನ್ನು ನಿರ್ಮಿಸಿ ಅದರಲ್ಲಿ ಪ್ರಭು ಕ್ರಿಸ್ತರನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬಕ್ಕೆ ಮುನ್ನುಡಿ ಇಡಲಾಯಿತು. ಭಾನುವಾರ ರಾತ್ರಿ ೧೧ ಗಂಟೆಗೆ ವಿಶೇಷ ಪ್ರಾರ್ಥನೆ ಹಾಗೂ ಗಾಯನ ಬಲಿಪೂಜೆ ಹಾಗೂ ಪ್ರಬೋಧನೆಯನ್ನು ಬೆಂಗಳೂರಿನ ಯೇಸು ರಕ್ಷಕರ ದೇವಾಲಯದ ಧರ್ಮಗುರು ರಾಬಿನ್, ಸಂತ ಅಂತೋಣಿ ದೇವಾಲ ಯದ ಧರ್ಮಗುರು ಫಾ. ಅರುಳ್ ಸೆಲ್ವಕುಮಾರ್, ಸಹಾಯಕ ಧರ್ಮಗುರು ನವೀನ್ ನೇರವೇರಿಸಿದರು. ಇಂದು ಬೆಳಿಗ್ಗೆ ೮.೩೦ ಗಂಟೆಗೆ ವಿಶೇಷ ಆಡಂಬರ ಗಾಯನ ಬಲಿಪೂಜೆ ಹಾಗೂ ಪ್ರಬೋಧನೆಯನ್ನು ಬೆಂಗಳೂರಿನ ಯೇಸು ರಕ್ಷಕರ ದೇವಾಲಯದ ಧರ್ಮಗುರು ರಾಬಿನ್ ನೇರವೇರಿಸಿದರು. ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತಿçÃಯರು, ಮಕ್ಕಳು, ಯುವಕ, ಯವತಿಯರು, ಪುರುಷ ಹಾಗೂ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಸೇರಿ ಗಾಯನ ದಿವ್ಯ ಬಲಿಪೂಜೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡು ಆಶೀರ್ವಚನ ಪಡೆದು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ರಾತ್ರಿ ಮತ್ತು ಬೆಳಗ್ಗಿನ ದಿವ್ಯಬಲಿ ಪೂಜೆಯ ನಂತರ ನೂತನವಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅದರಲ್ಲಿ ನೂತನ ಗೆಳೆಯರಿಗೆ ಪರಸ್ಪರ ಕ್ರಿಸ್ಮಸ್ ಉಡುಗೊರೆಗಳನ್ನು ನೀಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡು ಕೇಕ್ ಸ್ವೀಕರಿಸಿ ಮನೆಗಳಿಗೆ ತೆರಳಿದರು.
೭ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ರೇ.ಫಾ.ಸುನಿಲ್ ದಿವ್ಯ ಬಲಿಪೂಜೆ ಸಮರ್ಪಿಸಿದರು. ಸುಂಟಿಕೊಪ್ಪ ಸಿಎಸ್ಐ ಇಮಾನ್ಯುವೇಲ್ ಚರ್ಚ್ ಸಭಾಪಾಲಕ ಜೋಯೆಲ್ ಸುಹಾಸ್ ಪ್ರಾರ್ಥನಾ ಕೂಟವನ್ನು ನಡೆಸಿದರು. ನಂತರ ಚರ್ಚ್ ಆವರಣದಲ್ಲಿ ೨೪ನೇ ವರ್ಷದ ಮಕ್ಕಳ ಕ್ರಿಸ್ಮಸ್ ಅಂಗವಾಗಿ ಮಕ್ಕಳು ಸಂತಕ್ಲಾಸ್ ವೇಷದೊಂದಿಗೆ ನೃತ್ಯ ಹಾಗೂ ಯೇಸುವಿನ ಜನನದ ರೂಪಕವನ್ನು ಪ್ರದರ್ಶಿಸಿದರು.
ಮಾದಾಪುರ ನಿರ್ಮಲಮಾತೆ ದೇವಾಲಂiÀi ಧರ್ಮಗುರು ಫಾ.ರಾಜೇಶ್ ಹಟ್ಟಿಹೊಳೆಯ ಜಪಸರ ಮಾತೆ ದೇವಾಲಯದ ಧರ್ಮಗುರು ಫಾ. ಗಿಲ್ಬರ್ಟ್ ಡಿಸಿಲ್ವ ಅವರುಗಳು ಪ್ರಾರ್ಥನೆ, ಬಲಿಪೂಜೆ ಹಾಗೂ ಪ್ರಬೋಧನೆಯನ್ನು ನೀಡಿದರು.ಸಿದ್ದಾಪುರದ ಸೆಂಟ್ ಜೋಸೆಫ್ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಕ್ರೆöÊಸ್ತ ಬಾಂಧವರು ಸಾಮೂ ಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.ಕೂಡಿಗೆ : ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಲಾ ಆವರಣದಲ್ಲಿ ನಡೆದವು.
ಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ, ಕೋಲಾಟ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ವೀಣಾ ವಿಜಯ ಸೇರಿದಂತೆ ಶಿಕ್ಷಕ ವೃಂದ ಹಾಜರಿದ್ದರು.
ಪೊನ್ನಂಪೇಟೆ : ಸಂತ ಅಂಥೋಣಿ ಚರ್ಚ್ನಲ್ಲಿ ನಡೆದ ಕ್ರಿಸ್ಮಸ್ ಆಚರಣೆಯಲ್ಲಿ ಕ್ರೆöÊಸ್ತ ಭಾಂಧವರು ಸಂಭ್ರಮದಿAದ ಪಾಲ್ಗೊಂಡಿದ್ದರು. ರೆ. ಫಾದರ್ ಡೇವಿಡ್ ಸಗಾಯ್ ರಾಜ್ ಪ್ರಾರ್ಥನೆ ನೆರವೇರಿಸಿದರು.