ಸೋಮವಾರಪೇಟೆ, ಡಿ.೨೫: ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಂಸದರ ನಿಧಿಯಿಂದ ರೂ. ೧೦ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಲ್ಲಿನ ಬವವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ದೇವಾಲಯ ಸಮಿತಿ ಪ್ರಮುಖರೊಂದಿಗೆ ದೇವಾಲಯವನ್ನು ವೀಕ್ಷಿಸಿದ ಸಂಸದರು, ಅಭಿವೃದ್ಧಿ ಕಾಮಗಾರಿಗಳಿಗೆ ೧೦ ಲಕ್ಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಹಲವು ದಶಕಗಳ ಹಿಂದೆ ನಿರ್ಮಾಣವಾಗಿರುವ ಬಸವೇಶ್ವರ ದೇವಾಲಯ ಮತ್ತು ಹಿಂಭಾಗದಲ್ಲಿರುವ ಅನ್ನದಾಸೋಹ ಕೊಠಡಿಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಸಮಿತಿಯ ಪ್ರಮುಖರು ಮಾಡಿದ ಮನವಿಗೆ ಸಂಸದರು ಸ್ಪಂದಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಶಿವಕುಮಾರ್, ಕಾರ್ಯದರ್ಶಿ ಬಿ.ಆರ್. ಮೃತ್ಯುಂಜಯ, ಪ್ರಮುಖರಾದ ಕೆ.ಜಿ. ಸುರೇಶ್, ಶಿವರಾಜ್, ನಾಗರಾಜು, ಗಿರೀಶ್, ಶರತ್ ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.