ಪೊನ್ನಂಪೇಟೆ, ಡಿ. ೨೫: ಸತ್ಯ ಮತ್ತು ಪ್ರಾಮಾಣಿಕತೆಯನ್ನು ಇಂದಿನ ಯುವ ಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗೋಣಿಕೊಪ್ಪಲು ಬಿ.ಎಸ್.ಎನ್.ಎಲ್. ಕಚೇರಿಯ ನಿವೃತ್ತ ವ್ಯವಸ್ಥಾಪಕ ಬೋಡಂಗಡ ತಿಮ್ಮಯ್ಯ ಜಗದೀಶ್ ಕರೆ ನೀಡಿದರು. ಗೋಣಿಕೊಪ್ಪಲು ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿರುವ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟಿçÃಯ ಸೇವಾ ಯೋಜನಾ ಘಟಕದ ಪೊನ್ನಂಪೇಟೆ, ಡಿ. ೨೫: ಸತ್ಯ ಮತ್ತು ಪ್ರಾಮಾಣಿಕತೆಯನ್ನು ಇಂದಿನ ಯುವ ಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗೋಣಿಕೊಪ್ಪಲು ಬಿ.ಎಸ್.ಎನ್.ಎಲ್. ಕಚೇರಿಯ ನಿವೃತ್ತ ವ್ಯವಸ್ಥಾಪಕ ಬೋಡಂಗಡ ತಿಮ್ಮಯ್ಯ ಜಗದೀಶ್ ಕರೆ ನೀಡಿದರು. ಗೋಣಿಕೊಪ್ಪಲು ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿರುವ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟಿçÃಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರದ ೨ನೇ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯುವ ಜನತೆ ಹಾಗೂ ಮಾನವೀಯ ಮೌಲ್ಯಗಳು ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಶಿಸ್ತು ಮತ್ತು ಕ್ರಮ ಬದ್ಧತೆಯ ಜೀವನ ಮನುಷ್ಯನನ್ನ ಉತ್ತಮ ದಾರಿಯಲ್ಲಿ ಕೊಂಡೊಯ್ಯುತ್ತದೆ. ಇಂದು ಮನುಷ್ಯರು ತಮ್ಮ ದೈಹಿಕ ಶುದ್ಧತೆಯ ಜೊತೆಗೆ ಮಾನಸಿಕ ಶುದ್ಧಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ಮನಸ್ಸು ಸ್ವಚ್ಛವಾಗಿದ್ದರೆ ಮಾತ್ರ ಪರಿಪೂರ್ಣ ವ್ಯಕ್ತಿಗಳಾಗಲು ಸಾಧ್ಯ ಎಂದರು. ಗೋಣಿಕೊಪ್ಪಲು ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕ ಕುಪ್ಪಂಡ ಎಂ. ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಎಂ.ಎಸ್. ಭಾರತಿ, ಕಾಲೇಜಿನ ನಿವೃತ್ತ ಆಡಳಿತಾತ್ಮಕ ಸಿಬ್ಬಂದಿ ಎಂ.ಸಿ. ಕುಮಾರಿ ಮಾತನಾಡಿದರು. ಈ ಸಂದರ್ಭ ರಾಷ್ಟಿçÃಯ ಸೇವಾ ಯೋಜನಾಧಿಕಾರಿ ಕೆ.ಎಂ. ಕುಸುಮ್, ಸಹ ಶಿಬಿರಾಧಿಕಾರಿ ಸಚಿನ್ ನಾಯಕ್, ಸ್ವಯಂಸೇವಕ ಸೇವಕಿಯರು ಹಾಜರಿದ್ದರು.