ನಾಪೋಕ್ಲು, ಡಿ. ೨೫: ಇಲ್ಲಿಗೆ ಸಮೀಪದ ಕಕ್ಕುಂದಕಾಡು ಲಕ್ಷಿö್ಮÃವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ದರ್ಶನ ಹಾಗೂ ಪೂಜಾ ಕಾರ್ಯ ಗಳೊಂದಿಗೆ ವಿಜೃಂಭಣೆಯಿAದ ಸಂಪನ್ನಗೊAಡಿತು.
ದೇವಾಲಯದಲ್ಲಿ ಬೆಳಿಗ್ಗೆ ಯಿಂದ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳ ಬಳಿಕ ಮಧ್ಯಾಹ್ನ ಶ್ರೀ ವೆಂಕಟೇಶ್ವರನಿಗೆ ಗಂಟೆ ಜಾಗಟೆ ವೇದಘೋಷಗಳೊಂದಿಗೆ ವಿಶೇಷ ಮಹಾಪೂಜೆ ನೆರವೇರಿ, ಮಹಾ ಮಂಗಳಾರತಿಯ ನಂತರ ತೀರ್ಥ-ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಮಂಜಯ್ಯ ಟಿ.ಎಸ್., ಗೌರವ ಕಾರ್ಯಾಧ್ಯಕ್ಷ ಟಿ.ಎನ್. ರಮೇಶ್, ಕಾರ್ಯದರ್ಶಿ ಸುಜಿಕುಮಾರ್ ಟಿ.ಎ.. ಖಜಾಂಚಿ ಗೋಪಾಲ ಎನ್.ಪಿ., ಹಿರಿಯರಾದ ಶ್ರೀನಿವಾಸ್ ಟಿ.ವಿ., ಆನಂದಸ್ವಾಮಿ ಟಿ.ಎ., ಆಡಳಿತ ಮಂಡಳಿ ನಿರ್ದೇಶಕರಾದ ಸೂರ್ಯಕುಮಾರ ಟಿ.ಕೆ., ಭವಾನಿ ಟಿ.ವಿ. ಹಾಗೂ ಇತರರು ಹಾಜರಿದ್ದರು. ದೇವಾಲಯದ ಮುಖ್ಯ ಅರ್ಚಕ ಸುಧೀರ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.