ಭಾಗಮಂಡಲ, ಡಿ. ೨೫: ಪ್ರಕೃತಿ ಸಂಪತ್ಭರಿತವಾಗಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಎಲ್ಲೆಂದರಲ್ಲಿ ಮರಗಳ ಹನನ, ಭೂಮಿ ಬಗೆದು ಕಟ್ಟಡ ನಿರ್ಮಾಣ, ಅವೈಜ್ಞಾನಿಕ ಕಾಮಗಾರಿಗಳದ್ದೇ ಅಟ್ಟಹಾಸ., ಇತ್ತೀಚೆಗಷ್ಟೇ ಮಡಿಕೇರಿಯಲ್ಲಿ ಮನೆ ನಿರ್ಮಾಣ ಸಂಬAಧ ಮಣ್ಣು ಕೊರೆಯುತ್ತಿದ್ದ ಸಂದರ್ಭ ಮಣ್ಣು ಕುಸಿದು ಮೂವರು ಕಾರ್ಮಿಕರು ದುರ್ಮರಣ ಹೊಂದಿರುವ ಘಟನೆ ಇನ್ನೂ ಕೂಡ ಮಾಸಿಲ್ಲ. ಅಷ್ಟರಲ್ಲೇ ಕೊಡಗರಹಳ್ಳಿಯಲ್ಲಿ ನೂರಾರು ಮರಗಳ ಹನನ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕುಶಾಲನಗರ, ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ನೂರಾರು ಮರಗಳ ಹನನಕ್ಕೆ ಯೋಜನೆ ಸಿದ್ಧಗೊಂಡಿದೆ. ಇದರೊಂದಿಗೆ ಇದೀಗ ಗಡಿಭಾಗ ಕರಿಕೆ ಗ್ರಾಮದ ಚೆಂಬೇರಿ
ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕೊರೆಯುತ್ತಿರುವ ಕಾರ್ಯ ಬೆಳಕಿಗೆ ಬಂದಿದೆ.